ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮುಖಂಡನ ಹತ್ಯೆ; ಏನಾಗ್ತಿದೆ ಕಣಿವೆ ರಾಜ್ಯದಲ್ಲಿ?

Jul 17, 2020, 4:47 PM IST

ಶ್ರೀನಗರ (ಜು. 17):  ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಬಿಜೆಪಿ ಅಧ್ಯಕ್ಷ ವಾಸೀಂ ಬಾರಿ ಮತ್ತು ಕುಟುಂಬ ಸದಸ್ಯರ ಹತ್ಯೆ ಹಿಂದೆ ಪಾಕ್‌ ಮೂಲದ ಲಷ್ಕರ್‌ ಎ ತೊಯ್ಬಾ ಸಂಘಟನೆ ಕೈವಾಡ ಇದೆ ಮತ್ತು ಇದೊಂದು ಪೂರ್ವಯೋಜಿತ ದಾಳಿ ಆಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. 

ರೆಸಿಸ್ಟನ್ಸ್‌ ಫ್ರಂಟ್ ಎಂಬ ಹೊಸ ಉಗ್ರ ಸಂಘಟನೆ ಬಿಜೆಪಿ ಮುಖಂಡರ ಮೇಲಿನ ದಾಳಿಯ ಹೊಣೆ ಹೊತ್ತಿದ್ದು ಜೈಷ್, ಲಷ್ಕರ್ ತೋಯ್ಬಾ ಹಾಗೂ ಹಿಜ್ಬುಲ್ ಮುಜಾಹಿದೀನ್ ಭಾಗವೆಂದು ಗುರುತಿಸಲಾಗಿದೆ. 

ಜಮ್ಮು ಕಾಶ್ಮೀರ BJP ಮುಖಂಡರ ಕೊಲೆ ಪ್ರೀ ಪ್ಲಾನ್..? 10 ಜನ ಪೊಲೀಸರ ಬಂಧನ

ಕಾಶ್ಮೀರದಲ್ಲಿ ಮತಾಂಧರ ಅಟ್ಟಹಾಸ ಮಿತಿ ಮೀರಿದೆ. ಯಾರ ಮನೆಯ ಮೇಲೆ ಕೇಸರಿ ಬಾವುಟ ಹಾರುತ್ತದೋ, ಯಾರು ಜೈ ಶ್ರೀರಾಮ್ ಅಂತಾರೋ ಅವರ ಎದೆಗೆ ಬುಲೆಟ್‌ ನುಗ್ಗುತ್ತದೆ. ಇದಕ್ಕೆ ಉದಾಹರಣೆ ಬಿಜೆಪಿ ಮುಖಂಡ ವಾಸಿಂ ಬಾರಿ ಹತ್ಯೆ. ಹಾಗಾದರೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ? ಇಲ್ಲಿದೆ ನೋಡಿ..!