ಅಬ್ಬಬ್ಬಾ.. 87 ಕೋಟಿ ರುಪಾಯಿ ಖೋಟಾ ನೋಟು ಸೀಜ್..!

Jun 12, 2020, 2:07 PM IST

ಪುಣೆ(ಜೂ.12): ಸ್ಥಳೀಯ ಮನೆಯೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು 87 ಕೋಟಿ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ನೋಟುಗಳಲ್ಲಿ 2000, 1000, 500 ರು. ಮುಖಬೆಲೆಯ ನಕಲಿ ನೋಟುಗಳ, ಅಮೆರಿಕದ ನಕಲಿ ಡಾಲರ್‌ ನೋಟುಗಳು ಸೇರಿವೆ. 

ಇದಲ್ಲದೆ ಮಕ್ಕಳ ಆಟಕ್ಕೆ ಬಳಸುವ ಚಿಲ್ಡ್ರನ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೆಸರಿರುವ ನೋಟುಗಳೂ ಪತ್ತೆಯಾಗಿವೆ. ಜೊತೆಗೆ ಇದಲ್ಲದೆ ಸುಮಾರು 3 ಲಕ್ಷ ಮೌಲ್ಯದ ಅಸಲಿ ಭಾರತೀಯ ನೋಟುಗಳು ಕೂಡಾ ಸಿಕ್ಕಿದೆ. ಪ್ರಕರಣ ಸಂಬಂಧ ಓರ್ವ ಸೇನಾ ಯೋಧ ಮತ್ತು 5 ನಾಗರಿಕರನ್ನು ಬಂಧಿಸಲಾಗಿದೆ.

ನೋಟು ಮುದ್ರಣ ಸೇರಿ ಎಲ್ಲ ಆಯ್ಕೆ ಪರಿಶೀಲನೆ: ಕೇಂದ್ರ

ಅಪನಗದೀಕರಣದ ವೇಳೆ ಅಸಲಿ ನೋಟುಗಳಿಗೆ ಬದಲಾಗಿ ನಕಲಿ ನೋಟುಗಳನ್ನು ಬದಲಾಯಿಸುವ ದಂಧೆಯಲ್ಲಿ ಈ ತಂಡ ತೊಡಗಿಸಿಕೊಂಡಿತ್ತು. ಆಗ ಉಳಿದ ನೋಟುಗಳಿವು ಎಂದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಪನಗದೀಕರಣ ವೇಳೆ ಈ ದಂಧೆಕೋರರು, ಅಸಲಿ ನೋಟುಗಳಿಗೆ ಬದಲಿಯಾಗಿ ಕೆಲ ಅಸಲಿ ನೋಟು, ಇನ್ನು ಕೆಲವು ನಕಲಿ ನೋಟು ಮತ್ತೆ ಕೆಲವು ಮಕ್ಕಳ ಆಟಕ್ಕೆ ಬಳಸುವ ನೋಟುಗಳನ್ನು ನೀಡಿ ಜನರಿಗೆ ವಂಚಿಸುತ್ತಿತ್ತು ಎಂದು ತಿಳಿದುಬಂದಿದೆ.