ಮದುವೆ ಮರುದಿನವೇ ಡಿವೋರ್ಸಿಗೆ ಮುಂದಾದ ಪತ್ನಿ, ಅಂತ ಕಾರಣ ಏನಿತ್ತು?

By Suvarna NewsFirst Published Apr 30, 2024, 4:49 PM IST
Highlights

ಮದುವೆ ಹನಿಮೂನ್ ಮುಗಿಸಿ ಮನೆಗೆ ಬರ್ತಿದ್ದಂತೆ ದಂಪತಿ ವಿಚ್ಛೇದನ ಪಡೆದ್ರು ಎನ್ನುವ ಸುದ್ದಿಯನ್ನು ನಾವು ಕೇಳ್ತಿರುತ್ತೇವೆ. ಆದ್ರೆ ಈಕೆ ಮದುವೆಯಾದ ಮರುದಿನವೇ ವಿಚ್ಛೇದನ ಪಡೆದಿದ್ದಾಳೆ. ಫಸ್ಟ್ ನೈಟ್ ನಲ್ಲಿ ಗಲಾಟೆ ಆಗಿದ್ದಲ್ಲ ಫಸ್ಟ್ ನೈಟ್ ಆಗುವ ಮೊದಲೇ ನಡೆದಿದೆ ಗಲಾಟೆ. 
 

ಮದುವೆ ಅಂದ್ಮೇಲೆ ಯಾವುದೇ ತೊಂದರೆ ಇಲ್ಲದೆ ಸರಳವಾಗಿ ನಡೆಯೋದು ಬಹಳ ಅಪರೂಪ. ಮದುವೆ ಸಮಯದಲ್ಲಿ ಸಣ್ಣಪುಟ್ಟ ತೊಂದರೆಗಳಾಗ್ತಿರುತ್ತವೆ. ಕೆಲವು ಮದುವೆಗಳಲ್ಲಿ ದೊಡ್ಡ ಗಲಾಟೆ ಆಗೋದಿದೆ. ವಧು – ವರರ ಮಧ್ಯೆ ಹೊಂದಾಣಿಕೆ ಇದ್ರೆ ಸಂಬಂಧಿಕರು ಗಲಾಟೆ ಮಾಡಿಕೊಂಡ್ರೂ ಮದುವೆ ಸುಸೂತ್ರವಾಗಿ ನಡೆಯುತ್ತದೆ. ಆದ್ರೆ ವಧು – ವರರ ಮಧ್ಯೆಯೇ ಕಿತ್ತಾಟ ಶುರುವಾದ್ರೆ ಮದುವೆ ನಡೆಯೋದು ಅನುಮಾನ. ಒಂದ್ವೇಳೆ ಮದುವೆ ನಡೆದ್ರೂ ಇಬ್ಬರ ಮಧ್ಯೆ ಬೂದಿ ಮುಚ್ಚಿದ ಕೆಂಡವೊಂದು ಹೊಗೆಯಾಡ್ತಿರುತ್ತದೆ. ಮುಂದೊಂದು ದಿನ ಇದೇ ವಿಚಾರಕ್ಕೆ ದಂಪತಿ ಜಗಳ ಮಾಡಿಕೊಳ್ಳೋದಿದೆ. ಈಗಿನ ದಿನಗಳಲ್ಲಿ ವಿಚ್ಛೇದನ ಎಷ್ಟು ಸಾಮಾನ್ಯವಾಗಿದೆ ಅಂದ್ರೆ, ಮದುವೆಯಾಗಿ ಒಂದು ತಿಂಗಳು, ಒಂದು ವರ್ಷಕ್ಕಲ್ಲ ಒಂದು ದಿನಕ್ಕೆ ದಂಪತಿ ಬೇರೆ ಆಗ್ತಿದ್ದಾರೆ. 

ಇಪ್ಪತ್ತು – ಮೂವತ್ತು ವರ್ಷ ದಾಂಪತ್ಯ (Marriage)  ಜೀವನ ನಡೆಸಿದ ಜೋಡಿಯೂ ಪರಸ್ಪರ ಅರ್ಥ ಮಾಡಿಕೊಳ್ಳಲು ಎಡವುತ್ತಾರೆ. ಅಂತಹದ್ರಲ್ಲಿ ಒಂದೇ ಒಂದು ದಿನ ಸಂಸಾರ ನಡೆಸಿದ ಜೋಡಿ ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ? ಆದ್ರೆ ಈ ಮಹಿಳೆ, ಪತಿಯನ್ನು ಅರ್ಥ ಮಾಡಿಕೊಳ್ಳಲು ಒಂದು ದಿನ ಸಾಕು ಎನ್ನುತ್ತಿದ್ದಾಳೆ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ (Divorce ) ನೀಡಲು ಮುಂದಾಗಿದ್ದಾಳೆ. ಆಕೆಗೆ ಅದು ಗಂಭೀರ ವಿಷ್ಯವಾಗಿದ್ದು, ಸಾಮಾಜಿಕ ಜಾಲತಾಣ (Social Network) ದಲ್ಲಿ ತನ್ನ ಕಥೆ ಹಂಚಿಕೊಂಡಿದ್ದಾಳೆ.  

ಮದ್ವೆಯಾಗಿ ಮಕ್ಕಳಿದ್ರೂ ರಾಘವ್ ಚಡ್ಡಾ ಕೈ ಹಿಡಿದ್ರಾ ನಟಿ ಪರಿಣಿತಿ ಚೋಪ್ರಾ.. ಸಂದರ್ಶನದಲ್ಲಿ ಹೇಳಿದ್ದೇನು?

ಮಹಿಳೆಗೆ ಮೊದಲಿನಿಂದಲೂ ಮದುವೆಯಾಗುವ ಮನಸ್ಸಿರಲಿಲ್ಲ. ಬಾಯ್ ಫ್ರೆಂಡ್ ಪ್ರಫೋಸ್ ಮಾಡಿದ ಎನ್ನುವ ಕಾರಣಕ್ಕೆ ಮದುವೆಗೆ ಆಕೆ ಒಪ್ಪಿಕೊಂಡಿದ್ದಳು. ಮದುವೆಯಾಗುವ ಮೊದಲು ಮಹಿಳೆ ಒಂದೇ ಒಂದು ಷರತ್ತು ವಿಧಿಸಿದ್ದಳು. ಆದ್ರೆ ರಿಸೆಪ್ಷನ್ ಸಮಯದಲ್ಲಿ ಪತಿ ಆ ಷರತ್ತನ್ನು ಮುರಿದಿದ್ದ. ಇದೇ ಆಕೆ ವಿಚ್ಛೇದನ ನೀಡುವ ನಿರ್ಧಾರಕ್ಕೆ ಬರಲು ಕಾರಣವಾಗಿದೆ.

ಮಹಿಳೆಗೆ ಕೇಕ್ ಇಷ್ಟವಿರಲಿಲ್ಲ. ರಿಸೆಪ್ಷನ್ ವೇಳೆ ಕೇಕನ್ನು ಮುಖಕ್ಕೆ ಹಚ್ಚದಂತೆ ಮಹಿಳೆ ಮೊದಲೇ ಕಂಡೀಷನ್ ಹಾಕಿದ್ದಳು. ರಿಸೆಪ್ಷನ್ ವೇಳೆ ಪತಿ ಈ ಷರತ್ತನ್ನು ಮುರಿದಿದ್ದಾನೆ. ಉದ್ದೇಶಪೂರ್ವಕವಾಗಿ ಕೇಕ್ ಹಚ್ಚಿದ್ದಾನೆ. ಆಕೆ ತಲೆಯನ್ನು ಹಿಡಿದು, ಇಡೀ ಮುಖಕ್ಕೆ ಕೇಕ್ ಹಚ್ಚಿದ್ದಾನೆ. ಇನ್ನೊಂದು ಬ್ಯಾಕಪ್ ಕೇಕನ್ನು ಆತ ಇಟ್ಟುಕೊಂಡಿದ್ದ. ಕೇಕ್ ಮುಖಕ್ಕೆ ಹಚ್ಚಬೇಡ ಎಂದ್ರೂ ಉದ್ದೇಶಪೂರ್ವಕವಾಗಿ ಆತ ಕೇಕ್ ಹಚ್ಚಿದ್ದಾನೆ ಎಂಬುದು ಮಹಿಳೆ ಆರೋಪ.

ನನಗೆ ಕ್ಲಾಸ್ಟ್ರೋಫೋಬಿಕ್ ಇದೆ. ಹಾಗಾಗಿಯೇ ನಾನು ಕೇಕ್ ಹಚ್ಚದಂತೆ ಆತನಿಗೆ ಹೇಳಿದ್ದೆ. ನನ್ನ ಒಂದು ಆಸೆಯನ್ನು ಈತ ಈಡೇರಿಸಲಿಲ್ಲ. ಆತ ಕೇಕ್ ಹಚ್ಚುತ್ತಿದ್ದಂತೆ ನನ್ನ ಕೋಪ ನೆತ್ತಿಗೇರಿತ್ತು. ನಾನು ಕೋಪದಲ್ಲಿ ಸ್ಟೇಜ್ ಬಿಟ್ಟು ಹೋಗಿದ್ದೆ. ಸಂಬಂಧಿಕರು ಹಾಗೂ ಸ್ನೇಹಿತರೆಲ್ಲ ಕೋಪಕ್ಕೆ ಬುದ್ದಿ ನೀಡಿ ಮದುವೆ ಮುರಿದುಕೊಳ್ಳಬೇಡ ಎಂದು ಸಲಹೆ ನೀಡಿದ್ದರು. ಆದ್ರೆ ನನಗೆ ಈ ಮದುವೆ ಮುಂದುವರೆಸಲು ಇಷ್ಟವಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ವಿದೇಶದಲ್ಲಿ ರಿಸೆಪ್ಷನ್ ವೇಳೆ ಕೇಕ್ ಕತ್ತರಿಸುವ ಪದ್ಧತಿ ಹಿಂದಿನಿಂದಲೂ ಇದೆ. ರಿಸೆಪ್ಷನ್ ವೇಳೆ ಕೇಕ್ ಕತ್ತರಿಸುವ ಜನರು ಕೇಕನ್ನು ಮುಖಕ್ಕೆ ಹಚ್ಚುತ್ತಾರೆ. 

ವಾಸ್ತು ದೇವತೆ ಮನೆಯಲ್ಲಿ ಆನಂದವಾಗಿ ನೆಲಸೆಬೇಕಂದ್ರೆ ಹೀಗ್ ಮಾಡಿ ಅಂತಾರೆ ಸದ್ಗುರು!

ಕ್ಲಾಸ್ಟ್ರೋಫೋಬಿಕ್ ಅಂದ್ರೇನು? : ಕ್ಲಾಸ್ಟ್ರೋಫೋಬಿಯಾ ಒಂದು ರೀತಿಯ ಆತಂಕದ ಕಾಯಿಲೆ. ಇದು ಭಯಕ್ಕೆ ಸಂಬಂಧಿಸಿದ ಸಮಸ್ಯೆ. ಲಿಫ್ಟ್ ಅಥವಾ ಸಣ್ಣ ಡಾರ್ಕ್ ರೂಮ್‌ನಂತಹ  ಸ್ಥಳಗಳಲ್ಲಿ ಹೋಗುವಾಗ ಜನರು ಭಯಭೀತರಾಗುತ್ತಾರೆ. ಕೆಲವು ಜನರು ವಿಮಾನ ಪ್ರಯಾಣದ ಸಮಯದಲ್ಲಿ ಅಥವಾ ಪ್ರವಾಸಿ ಸ್ಥಳಗಳಲ್ಲಿ ಗುಹೆ ಅಥವಾ ಡಾರ್ಕ್ ಸುರಂಗಕ್ಕೆ ಹೋಗುವಾಗಲೂ ಭಯಕ್ಕೊಳಗಾಗಿ ಉಸಿರುಗಟ್ಟಿದಂತ ಸಮಸ್ಯೆಗೆ ಒಳಗಾಗ್ತಾರೆ.  

ಕ್ಲಾಸ್ಟ್ರೋಫೋಬಿಕ್ ಲಕ್ಷಣ : ನಡುಕ (Shivering), ಜ್ವರ (Fever), ಹೆಚ್ಚಾಗುವ ಹೃದಯ ಬಡಿತ (Increasing Heart Beat), ತಲೆತಿರುಗುವಿಕೆ, ಹೆಚ್ಚಾಗುವ ಉಸಿರಾಟ (Breathing Issues) ಸೇರಿದಂತೆ ಅನೇಕ ಲಕ್ಷಣ ಕಾಣಿಸುತ್ತದೆ.  

click me!