ಸಂಗಾತಿಯ ಹುಡುಕಾಟಕ್ಕೆ ಪ್ರತಿ ವಾರ 33 ಸಾವಿರ ಖರ್ಚು ಮಾಡ್ತಿದ್ದಾರೆ 70ರ ವೃದ್ಧ!

By Suvarna News  |  First Published Apr 30, 2024, 4:53 PM IST

ಮದುವೆಗೆ ಹುಡುಗಿ ಬೇಕು.. ಯುವಕರ ಈ ಜಾಹೀರಾತು ಕಾಮನ್. ಆದ್ರೆ ಇಲ್ಲೊಬ್ಬ 70ರ ವೃದ್ಧ ಮದುವೆ ಹುಡುಗಿ ಹುಡುಕ್ತಿದ್ದಾನೆ. ಎಷ್ಟೇ ಖರ್ಚು ಮಾಡಿ ಜಾಹೀರಾತು ಹಾಕಿದ್ರೂ ಆತನಿಗೆ ಹೆಣ್ಣು ಸಿಗ್ತಿಲ್ಲ. 
 


ಒಂಟಿತನ ಕಾಡೋದೇ ವಯಸ್ಸಾದ್ಮೇಲೆ. ಇದು ಅನುಭವಿಸಿದವರಿಗೆ ಮಾತ್ರ ಗೊತ್ತು. ಓದು, ಕೆಲಸ, ಸ್ನೇಹಿತರು ಅಂತ ಬ್ಯುಸಿ ಇರುವ ಜನರಿಗೆ ಯೌವನದಲ್ಲಿ ಸಂಗಾತಿ ಅತ್ಯಗತ್ಯ ಅನ್ನಿಸೋದಿಲ್ಲ. ಡೇಟಿಂಗ್, ಮೀಟಿಂಗ್ ಅಂತಾ ಒಂದಿಷ್ಟು ಹುಡುಗಿಯರನ್ನು ಫ್ಲರ್ಟ್ ಮಾಡ್ಕೊಂಡು, ಲಿವ್ ಇನ್ ಅಂತ ಕಾಲ ಕಳೆಯುವ ಜನರು ಮದುವೆಯನ್ನು ಗಂಭೀರವಾಗಿ ಪರಿಗಣಿಸೋದಿಲ್ಲ. ಈಗಿನ ದಿನಗಳಲ್ಲಿ ಮಕ್ಕಳು ಬೇಕು, ಮದುವೆ ಬೇಡ ಎನ್ನುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರಿಗೆ ಮದುವೆ ಆಗುವ ಮನಸ್ಸಿದ್ರೂ ತಮ್ಮ ಬದುಕು ಕಟ್ಟಿಕೊಳ್ಳೋದ್ರಲ್ಲೇ ಅರ್ಧ ಆಯಸ್ಸು ಕಳೆಯುತ್ತೆ. ಆ ನಂತ್ರ ಸಂಗಾತಿ ಹುಡುಕಾಟಕ್ಕೆ ಮುಂದಾಗ್ತಾರೆ. ಎಲ್ಲರಿಗೂ ಹೇಳಿದ ತಕ್ಷಣ ಮದುವೆ ಆಗೋಕೆ ಸಂಗಾತಿ ಸಿಗ್ಬೇಕಲ್ಲ? ಈಗಿನ ದಿನಗಳಲ್ಲಿ ಶುಗರ್ ಡ್ಯಾಡಿ ಪ್ರಸಿದ್ಧಿ ಪಡೆದಿದ್ರೂ ಹುಡುಗಿಯರು, ವೃದ್ಧರ ಜೊತೆ ಡೇಟ್ ಮಾಡ್ತಾರೆ ವಿನಃ ಮದುವೆ ಆಗೋಕೆ ಮನಸ್ಸು ಮಾಡೋದಿಲ್ಲ. ಮದುವೆಯ ನಿರ್ಧಾರಕ್ಕೆ ಬಂದ್ರೂ ಅದ್ರ ಹಿಂದೆ ಹಣ, ಶ್ರೀಮಂತಿಕೆ, ಐಷಾರಾಮಿ ಥಳಕುಹಾಕಿಕೊಂಡಿರುತ್ತದೆ. ಒಬ್ಬ ಬಡ ವೃದ್ಧ, ಶುದ್ಧ ಪ್ರೀತಿ ಬಯಸಿದ್ರೆ ಅದು ಈಗಿನ ಕಾಲದಲ್ಲಿ ಸಿಗೋದು ಅಸಾಧ್ಯ. ಈ ವ್ಯಕ್ತಿ ನೋಡಿದ್ರೆ ನಿಮಗೆ ನಾವು ಹೇಳಿದ್ದು ಸತ್ಯ ಎನ್ನಿಸದೆ ಇರದು.

ಅಮೆರಿಕದ ಟೆಕ್ಸಾಸ್ ನಿವಾಸಿ ಅಲ್ ಗಿಲ್ಬರ್ಟಿಗೆ ಈಗ 70 ವರ್ಷ. ಅವರಿಗೆ ಒಂಟಿತನ ವಿಪರೀತ ಕಾಡ್ತಿದೆ. ತನ್ನ ಜೊತೆ ಜೀವನ ಕಳೆಯಲು ಒಂದು ಸಂಗಾತಿ ಬೇಕು ಎನ್ನಿಸುತ್ತಿದೆ ಎನ್ನುವ ಅಲ್ ಗಿಲ್ಬರ್ಟಿ, ಇದೇ ಕಾರಣಕ್ಕೆ  ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಆದ್ರೆ ಅವರಿಗೆ ಮದುವೆ ಆಗೋದು ಕನಸಿನ ಮಾತಿನಂತಾಗಿದೆ.

Tap to resize

Latest Videos

ಭಾಗ್ಯಾಳಿಗೆ ಸಲಹೆ ಕೊಡೋಹಾಗೆ ನಿಜ ಜೀವನದಲ್ಲೂ ಹೀಗೇ ಹೇಳ್ತೀರಾ? ನೆಟ್ಟಿಗರ ವಾದ- ಪ್ರತಿವಾದ

ಅಲ್ ಗಿಲ್ಬರ್ಟಿ, ಮದುವೆ (Marriage) ಆಗ್ತಿಲ್ಲ, ಹುಡುಗಿ ಸಿಗ್ತಿಲ್ಲ ಅಂತ ಕೈಕಟ್ಟಿ ಕುಳಿತಿಲ್ಲ. ಡೇಟಿಂಗ್ (Dating) ಅಪ್ಲಿಕೇಷನ್ ಬದಲು ಜಾಹೀರಾತಿ (Advertisement) ನ ಮೊರೆ ಹೋಗಿದ್ದಾರೆ ಅಲ್ ಗಿಲ್ಬರ್ಟಿ. ಪ್ರತಿ ವಾರ ನೀವು ಅಲ್ ಗಿಲ್ಬರ್ಟಿ ಜಾಹೀರಾತು ನೋಡ್ಬಹುದು. ಅದಕ್ಕೆ ಅಲ್ ಗಿಲ್ಬರ್ಟಿ, 33 ಸಾವಿರ ರೂಪಾಯಿ ಖರ್ಚು ಮಾಡ್ತಾರೆ ಅಂದ್ರೆ ಅಚ್ಚರಿಯಾಗದೆ ಇರದು. ಯಾವುದಾದ್ರೂ ಒಂದು ಜಾಹೀರಾತು ಫಲಕದಲ್ಲಿ ನೀವು ಅಲ್ ಗಿಲ್ಬರ್ಟಿ ಫೋಟೋವನ್ನು ನೋಡ್ಬಹುದು.

ಅಲ್ ಗಿಲ್ಬರ್ಟಿ, ನಾನು ಒಂಟಿಯಾಗಿದ್ದೇನೆ. ಯಾರಾದ್ರೂ ನನ್ನ ಮದುವೆ ಆಗ್ತೀರಾ? ಆಸಕ್ತರು ಈ ನಂಬರ್ ಗೆ ಕರೆ ಮಾಡಿ ಎಂದು ಜಾಹೀರಾತು ಹಾಕ್ತಾರೆ. ಅವರ ಜಾಹೀರಾತಿಗೆ ಪ್ರತಿಕ್ರಿಯೆ ಚೆನ್ನಾಗಿಯೇ ಬರ್ತಿದೆ. ಆದ್ರೆ ಮದುವೆ ಮಾತ್ರ ಆಗ್ತಿಲ್ಲ. ಅಲ್ ಗಿಲ್ಬರ್ಟಿ ಪ್ರಕಾರ, ಆತ ಬಯಸಿದ ಮಹಿಳೆ ಸಿಗ್ತಿಲ್ಲ. ಈಗಾಗಲೇ 400ಕ್ಕೂ ಹೆಚ್ಚು ಮಹಿಳೆಯರು ಕರೆ ಮಾಡಿದ್ದಾರೆ. ಯಾರೂ ಪ್ರಾಮಾಣಿಕತೆ ತೋರಿಸಿಲ್ಲ. ಬಹುತೇಕರು, ಅಲ್ ಗಿಲ್ಬರ್ಟಿ ಬಳಿ ಹಣವಿದ್ಯೆ ಎಂಬುದನ್ನೇ ನೋಡ್ತಾರೆ. ಶುದ್ಧ ಮನಸ್ಸಿನಿಂದ ನನ್ನನ್ನು ಪ್ರೀತಿಸುವ ಹುಡುಗಿ ಸಿಕ್ಕಿದ್ರೆ ನಾನು ಏನು ಮಾಡಲೂ ಸಿದ್ಧ ಎನ್ನುತ್ತಾರೆ ಅಲ್ ಗಿಲ್ಬರ್ಟಿ. ಅವರು ಹುಡುಗಿ ಇಚ್ಛೆಯಂತೆ ಎಲ್ಲಿ ಬೇಕಾದ್ರೂ ವಾಸವಾಗ್ತಾರೆ.

ಅಂಬಿ ಕಡೆಯಿಂದ ವಿಷ್ಣು ರಾಜಕೀಯ ಪ್ರವೇಶಕ್ಕೆ ಪ್ಲಾನ್ ನಡೆದಿತ್ತು; ಯಾರ ವಿರುದ್ಧ ಗೊತ್ತಾ?

ಅಮೆರಿಕಾದ ಯಾವ ನಗರಕ್ಕೆ ಹೋಗಲೂ ಅಲ್ ಗಿಲ್ಬರ್ಟಿ ಸಿದ್ಧ. ಬರೀ ಅಮೆರಿಕ ಮಾತ್ರವಲ್ಲ ಯುಕೆ ಕೂಡ ಓಕೆ ಎನ್ನುತ್ತಿದ್ದಾರೆ ಅಲ್ ಗಿಲ್ಬರ್ಟಿ. ಈವರೆಗೆ ಅಲ್ ಗಿಲ್ಬರ್ಟಿ ನಂಬರ್ ಗೆ ಕರೆ ಮಾಡಿದ ಯಾವುದೇ ಮಹಿಳೆ ಅವರಿಗೆ ಇಷ್ಟವಾಗಿಲ್ಲ. ನಾನು ಕಣ್ಣಲ್ಲಿ ಕಣ್ಣಿಟ್ಟು ನನ್ನ ಪ್ರೀತಿಯನ್ನು ಆಕೆಗೆ ಹೇಳಲು ಬಯಸುತ್ತೇನೆ. ನನ್ನ ಪ್ರೀತಿಗೆ ಅವಳು ಹೇಗೆ ಪ್ರತಿಕ್ರಿಯಿಸ್ತಾಳೆ ಎಂಬುದನ್ನು ನೋಡುವ ತವಕವಿದೆ ನನಗೆ ಎನ್ನುತ್ತಾರೆ ಅಲ್ ಗಿಲ್ಬರ್ಟಿ.  

click me!