Fight Against Covid 19: ‘ಮೊಲ್ನು ಪಿರಾವಿರ್‌’ ಮಾತ್ರೆ ತುರ್ತು ಬಳಕೆಗೆ ಆರೋಗ್ಯ ಸಚಿವಾಲಯ ಅಸ್ತು

Jan 11, 2022, 10:53 AM IST

ಬೆಂಗಳೂರು (ಜ. 11):  ಕೊರೋನಾ (Corona ) ಚಿಕಿತ್ಸೆಗೆ ಅಭಿವೃದ್ಧಿಪಡಿಸಲಾಗಿರುವ ‘ಮೊಲ್ನು ಪಿರಾವಿರ್‌’ ಮಾತ್ರೆ ಮಾರುಕಟ್ಟೆಯಲ್ಲಿ (Market)  ಲಭ್ಯವಾಗಲಿದೆ. ಒಂದು ಮಾತ್ರೆಗೆ (Tablet) 35 ರು. ದರ ನಿಗದಿಪಡಿಸಲಾಗಿದೆ. ಇದು ಅಮೆರಿಕ (America) ಮೂಲದ ಕಂಪನಿಯ ಮಾತ್ರೆಯಾಗಿದ್ದು, ಭಾರತದಲ್ಲಿ (India)  ಬಿಡುಗಡೆ ಆಗುತ್ತಿರುವ ಮೊದಲ ಕೋವಿಡ್‌ (Covid 19)  ಚಿಕಿತ್ಸಾ ಮಾತ್ರೆಯಾಗಿದೆ. 

Covid Helpline: ಸಹಾಯಕ್ಕೆ ಬಾರದ ಸಹಾಯವಾಣಿ, ಬೆಂಗಳೂರು. ಹುಬ್ಬಳ್ಳಿಯಲ್ಲಿ ಸೇವೆ ಸ್ಥಗಿತ  

ಗಂಭೀರ ಪ್ರಮಾಣದ ಸೋಂಕಿನಿಂದ ಬಳಲುತ್ತಿರುವವರಿಗೆ ತುರ್ತು ಸಂದರ್ಭಗಳಲ್ಲಿ ಮಾತ್ರ ಮೊಲ್ನು ಪಿರಾವರ್‌ ಮಾತ್ರೆ ಬಳಸಲು ಡಿಸಿಜಿಎ (DCGA) ಅನುಮೋದನೆ ನೀಡಿದೆ. ಟೊರೆಂಟ್‌, ಸಿಪ್ಲಾ, ಸನ್‌ ಫರ್ಮಾ, ಡಾ. ರೆಡ್ಡೀಸ್‌, ನ್ಯಾಟ್ಕೋ, ಮೈಲಾನ್‌ ಸೇರಿದಂತೆ ಒಟ್ಟಾರೆ 13 ಭಾರತೀಯ ಔಷಧ ಕಂಪನಿಗಳು ಕೋವಿಡ್‌ ಮಾತ್ರೆಗಳನ್ನು ಉತ್ಪಾದಿಸುತ್ತಿವೆ.