ಕೊರೋನಾ ಅಬ್ಬರದ ಮಧ್ಯೆ ಶಾಕಿಂಗ್ ನ್ಯೂಸ್: ನೀರಿನಲ್ಲಿ ಪತ್ತೆಯಾಯ್ತು ವೈರಸ್!

May 27, 2021, 4:43 PM IST

ಇಲ್ಲೊಂದು ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಮಧ್ಯೆ ನಾಯಿಗಳು ಓಡಾಡಿದ್ದು, ನಾಯಿಗಳದ್ದೇ ಕಾರುಬಾರಾಗಿದೆ. ಮತ್ತೊಂದು ಆಸ್ಪತ್ರೆಯಲ್ಲಿ ಕೊರೋನಾ ಒದ್ದೋಡಿಸಲು ಸೋಂಕಿತರ ಜೊತೆ ವೈದ್ಯರು ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಕೊರೋನಾ ಗೆದ್ದರೆ ವಿಜಯದ ನಗು ಬೀರುವವರಿಗೆ ಶಾಕಿಂಗ್ ಸುದ್ದಿಯೊಂದಿದೆ. ಹೌದು ಹತ್ತರಲ್ಲಿ ಒಬ್ಬರಿಗೆ ಹಲವಾರು ರೋಗಗಳು ವಕ್ಕರಿಸುತ್ತಿವೆ.

ಮತ್ತೊಂದೆಡೆ ಅರ್ಧ ಡೋಸ್‌ ಲಸಿಕೆ ನೀಡಿ ಸಿಬ್ಬಂದಿ, ಪೊಲೀಸರಿಗೇ ಯಾಮಾರಿಸಿದ್ದಾರೆ. ಇನ್ನು ಇವೆಲ್ಲದರ ನಡುವೆ ನೀರಿನ್ಲಲಿ ವೈರಸ್‌ ಪತ್ತೆಯಾಗಿದ್ದು, ಭೀತಿ ಮೂಡಿಸಿದೆ. ಇಷ್ಟೇ ಅಲ್ಲದೇ ಕೊರೋನಾ ಕಾಲದಲ್ಲಿ ಆತಂಕ ಸೃಷ್ಟಿಸಿದ ಸುದ್ದಿಗಳ ಒಂದು ರೌಂಡಪ್ ಇಲ್ಲಿದೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona