UP Election: ಮೋದಿ ಮೋಡಿ, ಕಾಂಗ್ರೆಸ್, ಎಸ್‌ಪಿಯಿಂದ ವಿಮುಖರಾಗ್ತಾರಾ ಮುಸ್ಲಿಂ ಮಹಿಳೆಯರು.?

Feb 14, 2022, 5:40 PM IST

ಉತ್ತರ ಪ್ರದೇಶದ ಚುನಾವಣಾ (Uttar Pradesh) ರ್ಯಾಲಿಯಲ್ಲಿ  ಪ್ರಧಾನಿ ಮೋದಿ (PM Modi) ಹೈವೋಲ್ಟೇಜ್ ಪ್ರಚಾರ ನಡೆಸಿದ್ದಾರೆ. ಮುಸ್ಲಿಂ ವೋಟ್ ಮೇಲೆ ಹೆಚ್ಚಿ ಗಮನ ಇಟ್ಟಿದ್ದಾರೆ. 

UP Election: ಯೋಗಿ ವಿರುದ್ಧ ಶುಭಾವತಿ ಶುಕ್ಲ ಕಣಕ್ಕೆ, ಅಖಿಲೇಶ್ ಲೆಕ್ಕಾಚಾರವೇನು.?

‘ನಮ್ಮ ಸರ್ಕಾರ ಬಂದ ನಂತರ ತ್ರಿವಳಿ ತಲಾಖ್‌ ನಿರ್ಬಂಧಿಸಿತು. ಮುಸ್ಲಿಂ ಮಹಿಳೆಯರಿಗೆ ನ್ಯಾಯ ಸಿಗುವಂತೆ ನೋಡಿಕೊಂಡಿತು. ಹೀಗಾಗಿಯೇ ಮುಸ್ಲಿಂ ಸಮುದಾಯದಲ್ಲಿ ಮೋದಿ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು. ಆದರೆ ಯಾವಾಗ ಮುಸ್ಲಿಂ ಸೋದರಿಯರು ಮೋದಿಯನ್ನು ಹೊಗಳಲು ಆರಂಭಿಸಿದರೋ, ಅವರನ್ನು ತಡೆಯಬೇಕು ಎಂಬ ಯತ್ನವನ್ನು ವಿಪಕ್ಷಗಳು ಆರಂಭಿಸಿದವು. ಇದರ ಭಾಗವಾಗಿ, ವಿಪಕ್ಷಗಳೀಗ ಮಸ್ಲಿಂ ಮಹಿಳೆಯರ ಹಕ್ಕು ಹಾಗೂ ಆಕಾಂಕ್ಷೆಗಳಿಗೆ ಅಡ್ಡಿ ಮಾಡಲು ಆರಂಭಿಸಿದವು’ ಎಂದಿದ್ದಾರೆ. ಇನ್ನು ಯೋಗಿ ಕೂಡಾ ಭರ್ಜರಿ ಪ್ರಚಾರ ನಡೆಸಿದ್ದಾರೆ. ಮುಸ್ಲಿಂ ವೋಟು ಪಡೆಯಲು ಬಿಜೆಪಿ ಬೇರೆ ಬೇರೆ ಪ್ಲ್ಯಾನ್ ಮಾಡುತ್ತಿದೆ.