ರಣಜಿ ಟ್ರೋಫಿ ಟೂರ್ನಿಯ ಮೊದಲ 2 ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ: ಮಯಾಂಗ್‌ ಅಗರ್‌ವಾಲ್‌ ಸಾರಥ್ಯ

By Naveen Kodase  |  First Published Oct 2, 2024, 1:19 PM IST

ಮುಂಬರುವ ರಣಜಿ ಟ್ರೋಫಿ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಮಯಾಂಕ್‌ ಅಗರ್‌ವಾಲ್‌ಗೆ ನಾಯಕ ಪಟ್ಟ ಕಟ್ಟಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ಬೆಂಗಳೂರು: 2024-25ರ ರಣಜಿ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡವನ್ನು ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ. 16 ಸದಸ್ಯರ ತಂಡಕ್ಕೆ ಮಯಾಂಕ್‌ ಅಗರ್‌ವಾಲ್‌ ನಾಯಕರಾಗಿದ್ದು, ಮನೀಶ್‌ ಪಾಂಡೆಯನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಕೆಲ ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಅ.11ರಿಂದ 14ರ ವರೆಗೂ ಮಧ್ಯಪ್ರದೇಶ ವಿರುದ್ಧ ಇಂದೋರ್‌ನಲ್ಲಿ, ಅ.18ರಿಂದ 21ರ ವರೆಗೂ ಕೇರಳ ವಿರುದ್ಧ ಬೆಂಗಳೂರಲ್ಲಿ ರಾಜ್ಯ ತಂಡ ಮೊದಲೆರಡು ಪಂದ್ಯಗಳನ್ನಾಡಲಿದೆ.

ತಂಡ: ಮಯಾಂಕ್‌ ಅಗರ್‌ವಾಲ್‌ (ನಾಯಕ), ನಿಕಿನ್‌ ಜೋಸ್‌, ದೇವದತ್‌ ಪಡಿಕ್ಕಲ್‌, ಸ್ಮರಣ್‌ ಆರ್‌., ಮನೀಶ್‌ ಪಾಂಡೆ (ಉಪನಾಯಕ), ಶ್ರೇಯಸ್‌ ಗೋಪಾಲ್‌, ಸುಜಯ್‌ ಸತೇರಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ರಾಜ್‌, ವೈಶಾಖ್‌ ವಿಜಯ್‌ಕುಮಾರ್‌, ಪ್ರಸಿದ್ಧ್‌ ಕೃಷ್ಣ, ವಾಸುಕಿ ಕೌಶಿಕ್‌, ಲುವ್ನಿತ್‌ ಸಿಸೋಡಿಯಾ (ವಿಕೆಟ್‌ ಕೀಪರ್‌), ಮೊಹ್ಸಿನ್‌ ಖಾನ್‌, ವಿದ್ಯಾಧರ್‌ ಪಾಟೀಲ್‌, ಕಿಶನ್‌ ಬೆಡಾರೆ, ಅಭಿಲಾಶ್‌ ಶೆಟ್ಟಿ.

Tap to resize

Latest Videos

undefined

ತವರಿನಲ್ಲಿ ಸತತ 18 ಟೆಸ್ಟ್ ಸರಣಿ ಗೆದ್ದು ಭಾರತ ಹೊಸ ಇತಿಹಾಸ!

2012ರಲ್ಲಿ ಕೊನೆ ಬಾರಿ ರಣಜಿ ಆಡಿದ್ದ ಕೊಹ್ಲಿಗೆ ಈಗ ಮತ್ತೆ ಡೆಲ್ಲಿ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ

ನವದೆಹಲಿ: ಮುಂಬರುವ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಗೆ ಡೆಲ್ಲಿ ತಂಡ 84 ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಅಚ್ಚರಿ ಎಂಬಂತೆ ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ಹೆಸರೂ ಪಟ್ಟಿಯಲ್ಲಿದೆ. ಆದರೆ ಇವರಿಬ್ಬರೂ ಸಂಪೂರ್ಣ ಋತುವಿಗೆ ಅಲಭ್ಯರಾಗುವ ಸಾಧ್ಯತೆ ಹೆಚ್ಚು.

ಕೊಹ್ಲಿ 2012ರಲ್ಲಿ ಕೊನೆ ಬಾರಿ ರಣಜಿ ಕ್ರಿಕೆಟ್‌ ಆಡಿದ್ದರು. ಆ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರತರಾಗಿರುವ ಅವರು, ಈಗ ಮತ್ತೆ ದೇಸಿ ಕ್ರಿಕೆಟ್‌ಗೆ ಮರಳುವ ಸಾಧ್ಯತೆಯಿಲ್ಲ. ಇದೇ ವೇಳೆ ಸಂಭಾವ್ಯರ ಪಟ್ಟಿಯಲ್ಲಿ ನವ್‌ದೀಪ್‌ ಸೈನಿ, ಆಯುಶ್‌ ಬದೋನಿ, ಅನುಜ್‌ ರಾವತ್‌, ಯಶ್‌ ದಯಾಳ್‌, ಮಯಾಂಕ್‌ ಯಾದವ್‌ ಕೂಡಾ ಇದ್ದಾರೆ. ಆದರೆ ಹಿರಿಯ ವೇಗಿ ಇಶಾಂತ್‌ ಶರ್ಮಾಗೆ ಸ್ಥಾನ ಸಿಕ್ಕಿಲ್ಲ. ಈ ಬಾರಿ ರಣಜಿ ಟ್ರೋಫಿ ಅ.11ರಿಂದ ಆರಂಭಗೊಳ್ಳಲಿದೆ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಟೀಂ ಇಂಡಿಯಾ ಅಗ್ರಸ್ಥಾನ ಭದ್ರ, ಫೈನಲ್‌ ರೇಸ್‌ನಲ್ಲಿ ಭಾರತ ಸೇರಿ 5 ತಂಡ

ಮುರಳೀಧರನ್‌ ದಾಖಲೆ ಸರಿಗಟ್ಟಿದ ಆರ್‌.ಅಶ್ವಿನ್‌

ಭಾರತದ ಹಿರಿಯ ಸ್ಪಿನ್ನರ್‌ ಆರ್‌.ಅಶ್ವಿನ್‌, ಶ್ರೀಲಂಕಾದ ಮಾಂತ್ರಿಕ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್‌ರ ಮತ್ತೊಂದು ದಾಖಲೆಯನ್ನು ಸರಿಗಟ್ಟಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಅಶ್ವಿನ್ ಮಿಂಚಿದ್ದರು.

ಅಶ್ವಿನ್‌ ಟೆಸ್ಟ್‌ನಲ್ಲಿ 11ನೇ ಬಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಸಾಧಕರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಮುರಳೀಧರನ್‌ ಕೂಡಾ 11 ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ದ.ಆಫ್ರಿಕಾದ ಕ್ಯಾಲಿಸ್‌ 9, ನ್ಯೂಜಿಲೆಂಡ್‌ನ ರಿಚರ್ಡ್‌ ಹಾಡ್ಲೀ, ಪಾಕಿಸ್ತಾನದ ಇಮ್ರಾನ್‌ ಖಾನ್‌, ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ತಲಾ 8 ಬಾರಿ ಈ ಸಾಧನೆ ಮಾಡಿದ್ದಾರೆ.

click me!