Jun 14, 2023, 12:21 PM IST
ಬೆಂಗಳೂರು(ಜೂ.14): ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಹೀಗಾಗಿ ಬಿಪೊರ್‌ಜಾಯ್ ಎಂಬ ಚಂಡಮಾರುತ ಎದ್ದಿದೆ. ಇದರ ಆರ್ಭಟಕ್ಕೆ ಆಗಲೇ ಅರಬ್ಬಿ ಸಮುದ್ರ ಸಂಪೂರ್ಣ ಪ್ರಕ್ಷುಬ್ಧಗೊಂಡಿದೆ. ಭಯಾನಯಕ ಸೈಕ್ಲೋನ್ ಎಫೆಕ್ಟ್‌ಗೆ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಹಾಗೂ ಕೇರಳದ ಕಡಲ ತೀರಗಳಲ್ಲಿ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಈ ನಾಲ್ಕು ರಾಜ್ಯಗಳು ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಬಿಫರ್‌ಜಾಯ್ ಚಂಡಮಾರುತ ಅಬ್ಬರ ಜೋರಾಗಿದೆ. ಉತ್ತರ ಭಾರತದ ಹಲವು ಕಡೆ ಈ ಬಗ್ಗೆ ಆತಂಕ ಸೃಷ್ಠಿಯಾಗಿದೆ. ಮತ್ತೊಂದೆಡೆ ಚಂಡಮಾರುತದ ಕಾರಣಕ್ಕೆ 90ಕ್ಕೂ ಅಧಿಕ ರೈಲುಗಳ ಸಂಚಾರ ರದ್ದುಗೊಂಡಿದೆ.