ಕಂಟ್ರೋಲ್ ತಪ್ಪಿದ ಕೊರೊನಾ; ಒಡಿಶಾ, ಹರ್ಯಾಣದಲ್ಲಿ ಲಾಕ್‌ಡೌನ್ ಘೋಷಣೆ

May 3, 2021, 11:46 AM IST

ನವದೆಹಲಿ (ಮೇ. 03): ಕೊರೊನಾ ಆರ್ಭಟಕ್ಕೆ ಹರ್ಯಾಣ ಹಾಗೂ ಒಡಿಶಾ ತತ್ತರಿಸಿ ಹೋಗಿದೆ. ಹರ್ಯಾಣದಲ್ಲಿ ಇಂದಿನಿಂದ 7 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಒಡಿಶಾದಲ್ಲಿ ಮೇ 5 ರಿಂದ 14 ದಿನಗಳ ಕಾಲ ಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಕಠಿಣ ಕ್ರಮ, ನೈಟ್ ಕರ್ಫ್ಯೂ ವಿಧಿಸಿದರೂ ಸೋಂಕು ನಿಯಂತ್ರಣಕ್ಕೆ ಬರದಿದ್ದರಿಂದ ಲಾಕ್‌ಡೌನ್ ಒಂದೇ ಇದಕ್ಕೆ ಪರಿಹಾರ ಎಂದು ಲಾಕ್‌ಡೌನ್ ಮೊರೆ ಹೋಗಲಾಗಿದೆ. 

ವೆಂಟಿಲೇಟರ್‌ನಲ್ಲಿದ್ದ ಸೋಂಕಿತೆಗೆ ಒತ್ತಾಯಪೂರ್ವಕವಾಗಿ ಗೋಮೂತ್ರ ಕುಡಿಸಿದ ರಾಜಕಾರಣಿ!

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona