ವಿಡಿಯೋ ಪ್ರಕರಣದಲ್ಲಿ ಹೊಸ ತಿರುವು, ನವೀನ್ ಗೌಡ ಸಂಭಾಷಣೆಯ ಆಡಿಯೋ ಪ್ಲೆ ಮಾಡಿದ ಕುಮಾರಸ್ವಾಮಿ!

By Suvarna NewsFirst Published May 7, 2024, 12:59 PM IST
Highlights

ಕೋಲಾಹಲ ಸೃಷ್ಟಿಸಿರುವ ಪೆನ್‌ಡ್ರೈವ್ ವೀಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುವ ಸೂಚನೆಗಳು ಸಿಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ್ದಾರೆ. ನವೀನ್ ಗೌಡ ಸಂಭಾಷಣೆಯ 1 ನಿಮಿಷದ ಆಡಿಯೋ ಪ್ಲೇ ಮಾಡಿದ ಕುಮಾರಸ್ವಾಮಿ, ವ್ಯವಸ್ಥಿತ ಷಡ್ಯಂತ್ರದ ಪುರಾವೆ ಎಂದಿದ್ದಾರೆ.

ಬೆಂಗಳೂರು(ಮೇ.07) ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಕಳೆದೆರಡು ದಿನಗಳಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತಿರುವ ಸೂಚನೆಗಳು ಲಭ್ಯವಾಗಿದೆ. ಈ ವಿಡಿಯೋ ಪ್ರಕರಣವನ್ನು ವ್ಯವಸ್ಥಿತವಾಗಿ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ.ಇದರಲ್ಲಿ ಸಂತ್ರಸ್ಥೆಯರಿಗೆ ರಕ್ಷಣೆ ನೀಡುವ ಕಾಳಜಿ ಕಾಣಿಸುತ್ತಿಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಕಮಾರಸ್ವಾಮಿ, ವಿಡಿಯೋ ಲೀಕ್ ಮಾಡಿದ ಆರೋಪ ಹೊತ್ತಿರುವ ನವೀನ್ ಗೌಡ ಸ್ನೇಹತರ ಜೊತೆ ಮಾತನಾಡಿರುವ ಆಡಿಯೋವನ್ನು ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಒಂದು ನಿಮಿಷದ ಈ ಆಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಹೆಚ್‌ಡಿಕೆ ಪ್ಲೇ ಮಾಡಿದ್ದಾರೆ.

ವಿಡಿಯೋ ಹರಿಬಿಡುವವರು, ಲೀಕ್ ಮಾಡಿದವರ ವಿರುದ್ದ ಎಸ್ಐಟಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದೆ. ಆದರೆ ಈಗಾಗಲೇ ವಿಡಿಯೋ ಹರಿಬಿಟ್ಟವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ?  ವಿಡಿಯೋ ಲೀಕ್ ಆಗಿ ಹಲವು ದಿನಗಳಾಗಿದೆ. ಹೆಚ್‌ಡಿ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಪ್ರಕಾರ, ತಾನು ದೇವರಾಜೇಗೌಡರಿಗೆ ಮಾತ್ರ ವಿಡಿಯೋ ಕೊಟ್ಟಿದ್ದು ಎಂದಿದ್ದಾನೆ. ಇಲ್ಲೀತನಕ ಹೊರ ಬಂದಿರುವ ವಿಡಿಯೋ ಕುರಿತು ಮಾತನಾಡುತ್ತಿಲ್ಲ. ಆತ ಮಲೇಷಿಯಾ ಹೋಗಿದ್ದಾನೆ ಅನ್ನೋ ಗುಮಾನಿ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.  

ಪೆನ್‌ಡ್ರೈವ್ ಡೀಲ್, ಸಂತ್ರಸ್ಥೆಯರ ರಕ್ಷಣೆಗಿಂತ ಪ್ರಚಾರ ಬಯಸುತ್ತಿದೆ ಸರ್ಕಾರ; ಹೆಚ್‌ಡಿಕೆ ವಾಗ್ದಾಳಿ!

ಏಪ್ರಿಲ್ 30ರಂದು ವಿಡಿಯೋಗಳನ್ನು ಕಾರ್ತಿಕ್ ಮಾಧ್ಯಮಗಳಿಗೆ ಕೊಟ್ಟಿದ್ದ. ಈತನೇ ಪೆನ್‌ಡ್ರೈವ್ ಸೂತ್ರಧಾರಿ, ಈಗ ಅತ ಎಲ್ಲಿದ್ದಾನೆ. ತನಿಖೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಮೇಲೆ ಮಾತ್ರ ನಡೆಯುತ್ತಿದೆ ಎಂದು ಹೆಚ್‌ಡಿಕೆ ಆರೋಪಿಸಿದ್ದಾರೆ.   ಹಾಸನದ ಚುನಾವಣಾ ಪ್ರಚಾರದಲ್ಲಿ ನವೀನ್ ಗೌಡ ಹಾಸನದ ಅಭ್ಯರ್ಥಿ ಜೊತೆ ಇರುವ ಫೋಟೋ ತೋರಿಸಿದ ಕುಮಾರಸ್ವಾಮಿ, ಘಟನೆ ಹಿಂದಿನ ಷಡ್ಯಂತ್ರಕ್ಕೆ ಇವು ಪುರಾವೆ ಎಂದಿದ್ದಾರೆ.

ಸಂತ್ರಸ್ತೆಯರ ದೂರು ಪಡೆಯಲು ಹುಡುಕ್ತಾ ಇದೀವಿ , ಸಿಗುತ್ತಿಲ್ಲ ಎಂದು ಎಸ್ ಐ ಟಿ ತಂಡ ಹೇಳುತ್ತಿದೆ. ಸರಿಯಾಗಿ ತನಿಖೆ ಮಾಡಿದರೆ, ಯಾರಿಗೆ ಎಷ್ಟು ಆಮಿಷ ಒಡ್ಡಿ ದೂರು ಕೊಡಲು ಒತ್ತಾಯಿಸುತ್ತಿದ್ದಾರೆ ಎಂದು ಬಯಲಾಗಲಿದೆ.   ಈ ಕ್ಷಣದ ವರೆಗೆ ರೇವಣ್ಣ ಮೇಲೆ ದೂರು ಕೊಟ್ಟಿಲ್ಲ. ಅದೇನೋ ಕಿಡ್ನಾಪ್ ಎಂದು ದೂರು ಕೊಡಿಸಿದ್ದೀರಿ.  ಯಾರು ಆ ಹೆಣ್ಣುಮಗಳನ್ನು ಕರೆದು ಕೊಂಡು ಹೋದರು, ಅದ್ಯಾವುದೋ ತೋಟದ ಮನೆಯಿಂದ ಆಕೆಯನ್ನು ರಕ್ಷಣೆ ಮಾಡಿ ಕರೆದುಕೊಂಡು ಬಂದರು ಎಂದಿದ್ದೀರಿ. ಆದರೆ ಇಲ್ಲಿತನಕ ಜಡ್ಜ್ ಮುಂದೆ ಹಾಜರು ಪಡಿಸಿಲ್ಲ ಯಾಕೆ, ಆಕೆ ಯನ್ನು ಬೆದರಿಸುತ್ತಾ ಇದ್ದೀರಾ.? ಎಂದು ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. 

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ದೇವೇಗೌಡ, ಎಚ್‌ಡಿಕೆ ತಿರುಚಿದ ಫೋಟೋ, ವಿಡಿಯೋ ಪ್ರಸಾರಕ್ಕೆ ತಡೆ

ರೇವಣ್ಣ ಕೂಡಾ ಇಲ್ಲಿತನಕ ಯಾವುದೇ ಹೇಳಿಕೆ ಕೊಡ್ತಾ ಇಲ್ಲ ಅಂತೀರಾ , ನಿಮಗೆ ಬೇಕಾದ ಹಾಗೆ ರೇವಣ್ಣ ಹೇಳಬೇಕಾ.? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 

click me!