ಡ್ರೈವರ್‌ ಸೇರಿ ಒಂದೇ ಆಟೋದಲ್ಲಿ 27 ಪ್ರಯಾಣಿಕರು: ಪೊಲೀಸ್ ಶಾಕ್‌

Jul 11, 2022, 1:31 PM IST

ಸಾಮಾನ್ಯವಾಗಿ ಆಟೋದಲ್ಲಿ 2-3 ಮಂದಿ ಹೋಗುತ್ತೇವೆ. ಆದರೆ ಇಲ್ಲೊಬ್ಬ ಆಟೋ ಚಾಲಕ ಬರೋಬ್ಬರಿ 27 ಮಂದಿಯನ್ನು ತುಂಬಿಕೊಂಡು ಸಂಚರಿಸುತ್ತಿದ್ದ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ. 

Karnataka Rain: ಗೋಕಾಕ್ ಫಾಲ್ಸ್ ಎದುರು ಪ್ರವಾಸಿಗರ ಸೆಲ್ಫೀ ಹುಚ್ಚಾಟ

ಆಟೋ ವೇಗವಾಗಿ ಹೋಗುತ್ತಿದ್ದುದ್ದನ್ನು ನೋಡಿ, ಅನುಮಾನೊಂಡ ಪೊಲೀಸರು ಆಟೋವನ್ನು ತಡೆದು ವಿಚಾರಣೆಗೆ ಮುಂದಾಗುತ್ತಾರೆ. ಆಗ ಆಟೋದಲ್ಲಿ 27 ಮಂದಿ ಇರುವುದು ನೋಡಿ ಪೊಲೀಸರೇ ಶಾಕ್ ಆಗುತ್ತಾರೆ. ಆಟೋದಿಂದ ಒಬ್ಬೋಬ್ಬರೇ ಇಳಿಯುವ ದೃಶ್ಯವನ್ನು ಅಲ್ಲಿದ್ದವರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗೆ ಹರಿ ಬಿಟ್ಟಿದ್ದಾರೆ.