ಚೈತ್ರಾ ತೊಳೆದುಬಿಟ್ಟ ಟಾಯ್ಲೆಟ್​ ಕ್ಲೀನ್​ ಮಾಡಿ ಪೇಚಿಗೆ ಸಿಲುಕಿದ ಲಾಯರ್​ ಜಗದೀಶ್​! ರುಬ್ಬಿಸಿಕೊಳ್ಳೋರು ಯಾರು?

By Suchethana D  |  First Published Sep 30, 2024, 9:57 PM IST

ಚೈತ್ರಾ ತೊಳೆದುಬಿಟ್ಟ ಟಾಯ್ಲೆಟ್​ ಕ್ಲೀನ್​ ಮಾಡಿ ಪೇಚಿಗೆ ಸಿಲುಕಿದ ಲಾಯರ್​ ಜಗದೀಶ್​! ವಾರಾಂತ್ಯದಲ್ಲಿ ರುಬ್ಬಿಸಿಕೊಳ್ಳೋರು ಯಾರು?  
 


ಇದಾಗಲೇ ಬಹು ನಿರೀಕ್ಷಿತ ಬಿಗ್​ಬಾಸ್ ಕನ್ನಡದ ಸೀಸನ್​ 11 ಶುರುವಾಗಿದೆ. ಬಿಗ್​ಬಾಸ್ ಪ್ರೇಮಿಗಳಿಗೆ ತಿಳಿದಿರುವಂತೆ ಇದಾಗಲೇ 17 ಮಂದಿ ಸ್ಪರ್ಧಿಗಳಲ್ಲಿ 9 ಜನರು ಸ್ವರ್ಗದಲ್ಲಿ ವಾಸವಾಗಿದ್ದರೆ, 7 ಮಂದಿ ನರಕದಲ್ಲಿದ್ದಾರೆ. ಆದರೆ ಮೊದಲ ದಿನವೇ ಸ್ವರ್ಗವಾಸಿಗಳಿಗೂ, ನರಕವಾಸಿಗಳೂ ಜಟಾಪಟಿ ಶುರುವಾಗಿದೆ. ಈ ಮೂಲಕ ಮೊದಲ ದಿನದಿಂದ ಈ ಸೀಸನ್​ ಪ್ರೇಕ್ಷಕರಿಗೆ ಪುಳಕ ನೀಡಲು ಶುರು ಮಾಡಿದೆ. ಇದು ಶುರುವಾಗಿದ್ದು ಟಾಯ್ಲೆಟ್​ ಕ್ಲೀನ್​ ಮಾಡುವ ಗಲಾಟೆಯ ಮೂಲಕ. ನರಕದಲ್ಲಿರುವ ಚೈತ್ರಾ ಕುಂದಾಪುರ ಅವರು ಟಾಯ್ಲೆಟ್​ ಕ್ಲೀನ್​ ಮಾಡಿದ್ದರು. ಆದರೆ ಅದು ಸರಿಯಾಗಿ ಕ್ಲೀನ್​ ಆಗಿಲ್ಲ ಎಂದು ಜಗದೀಶ್​ ಪುನಃ ಕ್ಲೀನ್​ ಮಾಡಿದರು. ಆದರೆ ಬಿಗ್​ಬಾಸ್​​ ನಿಮಯದ ಪ್ರಕಾರ ಇದು ತಪ್ಪು. ವಕೀಲರಾಗಿ ಹೀಗೆ ಮಾಡಿದ್ದು ಸರಿಯಲ್ಲ ಎನ್ನುವುದು ಬಿಗ್​ಬಾಸ್​ ಪ್ರೇಮಿಗಳ ಅನಿಸಿಕೆ. 

ರೂಲ್ಸ್​ ಬ್ರೇಕ್​ ಮಾಡಿ ಎಲ್ಲರನ್ನೂ ಪೇಚಿಗೆ ಸಿಲುಕಿಸಿದ್ರಿ ಎನ್ನುತ್ತಿದ್ದಾರೆ ನೆಟ್ಟಿಗರು. ನೆಟ್ಟಿಗರು ಮಾತ್ರವಲ್ಲದೇ ಖುದ್ದು ಸ್ವರ್ಗದಲ್ಲಿ ಇರುವವರೂ ಜಗದೀಶ್​ ಮೇಲೆ ಸಿಟ್ಟಾಗಿದ್ದಾರೆ. ಏಕೆಂದರೆ ಒಬ್ಬರು ತಪ್ಪು ಮಾಡಿದ್ರೆ ಟೀಮ್​ನಲ್ಲಿ ಇರುವ ಎಲ್ಲರೂ ತೊಂದರೆ ಅನುಭವಿಸಬೇಕಾಗುತ್ತದೆ, ಶಿಕ್ಷೆಯೂ ಸಿಗುತ್ತದೆ. ಅದಕ್ಕಾಗಿ ಎಲ್ಲರೂ ಸಿಟ್ಟಾಗಿ ಜಗಳ ಶುರು ಮಾಡಿದ್ದಾರೆ.  ನಿಮ್ಮೊಬ್ಬರಿಂದ ಬೇರೆಯವರಿಗೆ ತೊಂದರೆ ಆಗುತ್ತದೆ ಎಂದು ಇತರ ಸ್ಪರ್ಧಿಗಳು ಕೂಗಾಡಿದ್ದಾರೆ.  

Tap to resize

Latest Videos

undefined

ಬಿಗ್‌ಬಾಸ್‌ ಮನೆಯಲ್ಲಿ ಮೊದಲ ದಿನವೇ ಗಲಾಟೆಗೆ ನಾಂದಿ ಹಾಡಿದ ಚೈತ್ರಾ ಕುಂದಾಪುರ, ಉಗ್ರಂ ಮಂಜು ಪಿತ್ತ ನೆತ್ತಿಗೆ!

ಇದು ಲಾಯರ್​ ಜಗದೀಶ್​ ಅವರಿಂದ ತಪ್ಪಾಗಿದ್ದರೂ ಹಲವು ನೆಟ್ಟಿಗರು ಇದಕ್ಕೆಕಾರಣ ಚೈತ್ರಾ ಕುಂದಾಪುರ ಎಂದಿದ್ದಾರೆ. ಅವರಿಗೆ ಸ್ವರ್ಗದಲ್ಲಿನ ಟಾಯ್ಲೆಟ್​ ಕ್ಲೀನ್​ ಮಾಡಲು ಹೇಳಲಾಗಿತ್ತು. ಆದರೆ ಅವರು ಉದ್ದೇಶಪೂರ್ವಕವಾಗಿ ಸರಿಯಾಗಿ ಮಾಡಲಿಲ್ಲ. ಇದನ್ನು ನೋಡಲು ಆಗದೇ ಜಗದೀಶ್​ ಮಾಡಿದ್ದಾರೆ. ಆದರೆ ಅವರು ರೂಲ್ಸ್​ ಬ್ರೇಕ್​ ಮಾಡಿದ್ದು ತಪ್ಪು ಎನ್ನುತ್ತಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ತಪ್ಪು-ಒಪ್ಪುಗಳ ಬಗ್ಗೆ ಸುದೀಪ್​  ಕ್ಲಾಸ್​​ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಚೈತ್ರಾಗೆ ಕ್ಲಾಸ್​ ತೆಗೆದುಕೊಳ್ತಾರೋ, ಜಗದೀಶ್​ಗೋ ಅಥವಾ ಇಬ್ಬರಿಗೂ ಸೇರಿಯೋ ಎನ್ನುವ ಚರ್ಚೆ ನೆಟ್ಟಿಗರಲ್ಲಿ ಶುರುವಾಗಿದೆ. 
 
 ಚೈತ್ರಾ ಕುಂದಾಪುರ ಅವರಿಗೆ ಮತವನ್ನು ಹಾಕಲು ವೀಕ್ಷಕರಿಗೆ ಅವಕಾಶ ನೀಡಲಾಗಿತ್ತು. ಆಗ ವೀಕ್ಷಕರು ಕೇವಲ 15 ನಿಮಿಷಗಳಲ್ಲಿ 2,85,000 ಮತಗಳನ್ನು ಹಾಕಿದ್ದರು.  ನಾಲ್ಕು ಕಂಟೆಸ್ಟೆಂಟ್‌ಗಳಲ್ಲಿ ಅತಿಹೆಚ್ಚು ಮತಗಳನ್ನು ಪಡೆದವರು ಚೈತ್ರಾ ಕುಂದಾಪುರ. ಆದ್ದರಿಂದ ಅದರಲ್ಲಿ ಎಷ್ಟು ಮತಗಳು ಸ್ವರ್ಗ ಹಾಗೂ ನರಕಕ್ಕೆ ಸಿಕ್ಕಿವೆ ಎಂಬುದು ಗೊತ್ತಿಲ್ಲ ಎಂದು ಕಿಚ್ಚ ಸುದೀಪ ಹೇಳಿದ್ದರು. ಇದಾದ ನಂತರ ಬಿಗ್ ಬಾಸ್ ಮನೆಯೊಳಗೆ ಹೋದ ಚೈತ್ರಾ ಕುಂದಾಪುರ ಸೀದಾ ನರಕಕ್ಕೆ ಹೋಗಿದ್ದಾರೆ. ಆದರೆ ಜಗದೀಶ್​ ಅವರೂ ನರಕಕ್ಕೆ ಹೋಗಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿತ್ತು.  ಆದರೆ ಅವರ ಅಭಿಮಾನಿಗಳು ಅವರಿಗೆ ಸ್ವರ್ಗದ ದಾರಿ ತೋರಿದ್ದಾರೆ. ಇನ್ನುಳಿದಂತೆ,  ಉಗ್ರಂ ಮಂಜು, ಅನುಷಾ ರೈ, ಧರ್ಮ ಕೀರ್ತಿರಾಜ್​, ತ್ರಿವಿಕ್ರಮ್​, ಶಿಶಿರ್​, ರಂಜಿತ್​, ಹಂಸಾ, ಮಾನಸಾ, ಗೋಲ್ಡ್ ಸುರೇಶ್​, ಗೌತಮಿ ಜಾಧವ್, ಧನರಾಜ್​, ಭವ್ಯಾ ಗೌಡ, ಯಮುನಾ ಶ್ರೀನಿಧಿ, ಐಶ್ವರ್ಯಾ, ಮೋಕ್ಷಿತಾ ಅವರು ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳಾಗಿದ್ದಾರೆ.

ಡ್ರೆಸ್​ ಸರಿಮಾಡಿಕೊಳ್ಳೊಷ್ಟ್ರಲ್ಲಿ ಆಗಬಾರದ್ದು ಆಗೋಯ್ತು! ಎಲ್ಲಾ ಆದ್ಮೇಲೆ ಇನ್ನೇನು ಮಾಡೋದು ಕೇಳ್ತಿದ್ದಾರೆ ಟ್ರೋಲಿಗರು

click me!