ಒಟ್ಟೊಟ್ಟಿಗೆ ರಸ್ತೆಗಿಳಿದ 70ಕ್ಕೂ ಹೆಚ್ಚು ಲ್ಯಾಂಬೋರ್ಗಿನಿ ಕಾರುಗಳ ಅದ್ಭುತ ದೃಶ್ಯ ವೈರಲ್

By Anusha Kb  |  First Published Sep 30, 2024, 10:27 PM IST

ಉತ್ತರಾಖಂಡದ ಪ್ರವಾಸಿ ತಾಣ ಮಸೂರಿಯಲ್ಲಿ 70ಕ್ಕೂ ಹೆಚ್ಚು ಲ್ಯಾಂಬೋರ್ಗಿನಿ ಕಾರುಗಳು ರಸ್ತೆಯಲ್ಲಿ ಸಾಗಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯರು ಹಾಗೂ ಪ್ರವಾಸಿಗರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿ ಸಂತಸಪಟ್ಟರು.


ಅತ್ಯಂತ ದುಬಾರಿ ಹಾಗೂ ಅಷ್ಟೇ ಐಷಾರಾಮಿಯಾಗಿರುವ ಲ್ಯಾಂಬೋರ್ಗಿನಿ ಕಾರು ಎಂದರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ರಸ್ತೆಯಲ್ಲಿ ಈ ಕಾರು ಸಾಗುತ್ತಿದ್ದರೆ ನೋಡುವುದೇ ಒಂದು ಚೆಂದ ಆದರೆ ಇಂತಹ ಐಷಾರಾಮಿ ಕಾರುಗಳ ಜಾತ್ರೆಯೇ ರಸ್ತೆಯಲ್ಲಿ ಸೇರಿದರೆ ಹೇಗಿರುತ್ತದೆ. ಇಂತಹ ಒಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಉತ್ತರಾಖಂಡ್‌ನ ಮಸೂರಿ, ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಈ ಸುಂದರ ನಗರಿಯಲ್ಲಿ ಲ್ಯಾಂಬೋರ್ಗಿನಿಯ ಜಾತ್ರೆ ನೆರೆದು, ಅಲ್ಲಿನ ಸ್ಥಳೀಯರ ಕಣ್ಣುಗಳಿಗೆ ಹಬ್ಬ ತಂದಿತ್ತು. 

ಲ್ಯಾಂಬೋರ್ಗಿನಿ ಒಂದು ಕಾರು ರಸ್ತೆಯಲ್ಲಿ ಹೋದರೆನೇ ರಸ್ತೆಯಲ್ಲಿ ಸಾಗುವವರೆಲ್ಲರೂ ತಲೆ ಎತ್ತಿ ಈ ಕಾರನ್ನೇ ನೋಡಲು ಶುರು ಮಾಡುತ್ತಾರೆ. ಹೀಗಿರುವಾಗ ಇಲ್ಲಿ  70ಕ್ಕೂ ಹೆಚ್ಚು ಕಾರುಗಳು ಒಂದರ ಹಿಂದೆ ಒಂದರಂತೆ ಸಾಗುತ್ತಿದ್ದರೆ ಆ ಕ್ಷಣ ಹೇಗಿರಬಹುದು ನೋಡಿ. ಈ ದೃಶ್ಯ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು. ವಾಹ್ ಎಂದಿದ್ದಾರೆ. 

Tap to resize

Latest Videos

undefined

ತೆಲಂಗಾಣ: ಹೊಂಡಗುಂಡಿಯ ರಸ್ತೆಲಿ ಏಳುತ್ತಾ ಬೀಳುತ್ತಾ ಸಾಗಿದ ರೆಡ್ ಬ್ಯೂಟಿ ಲ್ಯಾಂಬೋರ್ಗಿನಿ : ವೀಡಿಯೋ ವೈರಲ್‌

ಈ ವೀಡಿಯೋವನ್ನು ಸಿರಿಶ್ಚಂದ್ರನ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಹೀಗೆ ಬರೆದುಕೊಂಡಿದ್ದಾರೆ. '71 ಲ್ಯಾಂಬೋರ್ಗಿನಿಗಳು ಜೊತೆಯಾಗಿ ಪಯಣಿಸುತ್ತ ಮಸ್ಸೂರಿ ನಗರವನ್ನು ಸ್ತಬ್ಧಗೊಳಿಸಿದವು. ಸ್ಥಳೀಯ ಕೆಲವು ಸಂಘಟಕರ ಸಹಾಯದಿಂದ ಈ ವಾಹನಗಳು ಯಾವುದೇ ಬೇರೆ ವಾಹನಗಳಿಲ್ಲದೇ ಒಂದಾದ ಮೇಲೆ ಒಂದರಂತೆ ಈ ಕಿರಿದಾದ ರಸ್ತೆಯಲ್ಲಿ ಸಾಗಿದವು. ನೀವು ಎಂದಾದರೂ ಮಸ್ಸೂರಿಯ ನಗರದಲ್ಲಿ ಗಾಡಿ ಓಡಿಸಿದರೆ ಅದೆಂತಹ ಟ್ರಾಫಿಕ್ ಇರುವ ಸ್ಥಳ ಎಂಬುದು ಗೊತ್ತಾಗುತ್ತದೆ.  ಅಂತಹ ರಸ್ತೆಗಳಲ್ಲೂ ಈ ಲ್ಯಾಂಬೋರ್ಗಿನಿ ವಾಹನಗಳು ಸಾಗಲು ಸಹಾಯ ಮಾಡಿದ್ದು ಒಂದು ಕ್ರೇಜಿನೆಸ್ ಆಗಿದೆ. ಅಲ್ಲದೇ ಈ ಲ್ಯಾಂಬೋರ್ಗಿನಿ ವಾಹನಗಳು ಆ ರಸ್ತೆಯಲ್ಲಿ ಸಾಗುತ್ತಿದ್ದ ಎಲ್ಲರ ಮೊಗದಲ್ಲೂ ಖುಷಿ ಹಾಗೂ ನಗು ತಂದಿತು. ಇದೆಲ್ಲದರ ಆಚೇಗೆ ನಾವು ನಮ್ಮ ಆಳದಲ್ಲಿ ಮತ್ತೆ 8 ವರ್ಷದ ಮಕ್ಕಳಂತೆ ಕಾರಿನ ಬಗ್ಗೆ ಪ್ರೀತಿ ಹೊಂದಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.'

ಲಕ್ಸುರಿ ಕಾರುಗಳ ಮೇಲೆ ಬುಲ್ಡೋಜರ್ ಸವಾರಿ-46 ಕೋಟಿ ಮೌಲ್ಯದ ಕಾರು ಪುಡಿಪುಡಿ

ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಪ್ರವಾಸಿ ತಾಣವಾದ ಮಸ್ಸೂರಿ ನಗರದ  ಕಿರಿದಾದ ರಸ್ತೆಯಲ್ಲಿ  ಪ್ರವಾಸಿ ಕಾರುಗಳು ಒಂದಾದ ಮೇಲೊಂದರಂತೆ ಸಾಗುತ್ತಿದ್ದರೆ. ಇತರ ವಾಹನ ಸವಾರರು ತಮ್ಮ ವಾಹನವನ್ನು ಪಕ್ಕಕ್ಕೆ ಸರಿಸಿ ಈ ಐಷಾರಾಮಿ ವಾಹನಗಳಿಗೆ ದಾರಿ ಮಾಡಿಕೊಟ್ಟಿವೆ. ಅಲ್ಲದೇ ಜನ ರಸ್ತೆ ಪಕ್ಕ ನಿಂತು ತಮ್ಮ ಮೊಬೈಲ್ ಫೋನ್‌ ಕ್ಯಾಮರಾಗಳಲ್ಲಿ ಈ ಐಷಾರಾಮಿ ಕಾರುಗಳ ಸಾಲನ್ನು ಸೆರೆ ಹಿಡಿಯುತ್ತಿದ್ದಾರೆ. ಅಲ್ಲದೇ ಇತರ ಕಾರುಗಳಲ್ಲಿ ಸಾಗುತ್ತಿರುವವರು ರಸ್ತೆ ಬದಿ ನಿಂತಿ ಮಕ್ಕಳು ಹೀಗೆ ಎಲ್ಲರೂ ಖುಷಿಯಿಂದ ಈ ಕಾರುಗಳತ್ತ ಖುಷಿಯಿಂದ ಕೈ ಬೀಸುತ್ತಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಈಗ ಸಖತ್‌ ವೈರಲ್ ಆಗಿದೆ. 

 

click me!