ಮನುಷ್ಯನ ಜೀವನ ಹೇಗೆ ಬೇಕಾದ್ರೂ ಬದಲಾಗಬಹುದು. ಶ್ರೀಮಂತ ವ್ಯಕ್ತಿ ರಾತ್ರೋರಾತ್ರಿ ಬಡವನಾಗಬಹುದು. ಕುಟುಂಬ ನಂಬಿದ ವ್ಯಕ್ತಿ ಅವರಿಂದಲೇ ಮೋಸ ಹೋಗ್ಬಹುದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಈ ಅಜ್ಜನ ಸ್ಥಿತಿ ನೋಡಿದ್ರೆ ಯಾರಿಗಾದ್ರೂ ಕಣ್ಣಂಚಿನಲ್ಲಿ ನೀರು ಬರುತ್ತೆ.
ಮನುಷ್ಯನ ಆಕಾರ, ಬಟ್ಟೆ ನೋಡಿ ಆತನ ವ್ಯಕ್ತಿತ್ವ (personality), ಜ್ಞಾನವನ್ನು ಅಳೆಯಬಾರದು ಎನ್ನುವ ಮಾತಿದೆ. ಇದಕ್ಕೆ ಈಗಾಗಲೇ ಅನೇಕ ಸಾಕ್ಷ್ಯ ಸಿಕ್ಕಿದೆ. ಬೀದಿಯಲ್ಲಿ ಭಿಕ್ಷೆ ಬೇಡ್ತಿದ್ದ ವ್ಯಕ್ತಿ ಕೋಟಿ ಕೋಟಿ ಸಂಪಾದನೆ ಮಾಡಿದ ಉದಾಹರಣೆ ನಮ್ಮಲ್ಲಿದೆ. ಈಗ ಇಂಥದ್ದೇ ಇನ್ನೊಬ್ಬ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾನೆ. ಆದ್ರೆ ಆತ ಶ್ರೀಮಂತ (rich)ನಲ್ಲ. ಒಂದ್ಕಾಲದಲ್ಲಿ ಖುಷಿಯಾಗಿದ್ದವನು ಈಗ ಬೀದಿಗೆ ಬಿದ್ದಿದ್ದಾನೆ. ಅದಕ್ಕೆ ಕಾರಣವಾಗಿದ್ದು ಆತನ ಹೆಂಡತಿ.
ಯಶಸ್ವಿ ಪುರುಷನ ಹಿಂದೆ ಮಹಿಳೆ ಇರ್ತಾಳೆ ಎನ್ನುವ ಮಾತಿದೆ. ಆದ್ರೆ ಫೇಲ್ಯೂರ್ ಪುರುಷನ ಹಿಂದೂ ಅನೇಕ ಬಾರಿ ಮಹಿಳೆಯೇ ಇರ್ತಾಳೆ. ಬೀದಿಯಲ್ಲಿ ಏನೂ ಇಲ್ಲದೆ ಓಡಾಡ್ತಿರುವ, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಈ ವ್ಯಕ್ತಿ ಸುಶಿಕ್ಷಿತ. ಬರೀ ಡಿಗ್ರಿ ಮಾಡಿಲ್ಲ. ಇಂಜಿನಿಯರ್ ಪದವೀದರ. ಅಷ್ಟೇ ಅಲ್ಲ ವಿದೇಶದಲ್ಲಿ ಕೆಲಸ ಮಾಡಿ ಬಂದಿದ್ದಾನೆ. ಆದ್ರೆ ಈಗ ಆತನ ಬದುಕು ಅಕ್ಷರಶಃ ಬೀದಿಗೆ ಬಂದಿದೆ.
undefined
ಅಪ್ಪನ ಪ್ರೀತಿ ಅಪಾರ, ಮಗನಿಗೆ ಐಫೋನ್ 16 ಗಿಫ್ಟ್ ನೀಡಿದ ಸ್ಕ್ರ್ಯಾಪ್ ಮಾರಾಟಗಾರ.!
ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕೊಳಕು ಬಟ್ಟೆ ಧರಿಸಿ, ಒಂದಿಷ್ಟು ಚೀಲವನ್ನು ಹಿಡಿದು ರಸ್ತೆಯಲ್ಲಿ ಹೋಗ್ತಿದ್ದ ವೃದ್ಧನಿಗೆ, ಊಟವಾಯ್ತಾ ಅಂತ ಕೇಳಲಾಗುತ್ತೆ. ಆತ ಇಲ್ಲ ಅಂತ ಉತ್ತರ ನೀಡ್ತಾನೆ. ವಿಡಿಯೋ ಮಾಡ್ತಿರುವ ವ್ಯಕ್ತಿ, ವೃದ್ಧನಿಗೆ ಊಟ ನೀಡ್ತಾರೆ. ಈ ಸಮಯದಲ್ಲಿ ವೃದ್ಧ, ನನಗೆ ಕೆಲಸ ಮಾಡಲು ಮನಸ್ಸಿದೆ. ಆದ್ರೆ ಕೆಲಸ ಸಿಗ್ತಿಲ್ಲ. ನಾನು ಇಂಜಿನಿಯರ್ (Engineer) ಓದಿದ್ದೇನೆ ಎನ್ನುತ್ತಾನೆ. ಈ ಮಾತು ಕೇಳಿದ ಕ್ಯಾಮರಾಮೆನ್ ಗೆ ಅಚ್ಚರಿಯಾಗುತ್ತದೆ. ಮತ್ತೆ ಈ ಸ್ಥಿತಿ ಏಕೆ ಎಂದು ಕ್ಯಾಮರಾಮೆನ್ ಕೇಳಿದ್ರೆ, ದುಬೈನಲ್ಲಿ ಕೆಲಸ ಮಾಡ್ತಾ ಇದ್ದೆ ಎನ್ನುವ ಅಜ್ಜ, ಪತ್ನಿಯಿಂದ ಈ ಸ್ಥಿತಿ ಬಂತು ಎನ್ನುತ್ತಾನೆ. ಕೌಟುಂಬಿಕ ಸಮಸ್ಯೆ ನನ್ನನ್ನು ಈ ಜಾಗಕ್ಕೆ ತಂದು ನಿಲ್ಲಿಸಿದೆ ಎನ್ನುತ್ತ ಕಣ್ಣೀರು ಹಾಕುವ ಅಜ್ಜ, ವಿದೇಶಕ್ಕೆ ಹೋಗಿ ಅವಳಿಗೆ ಏನಾದ್ರೂ ತರ್ಬಹುದು ಅಂದ್ಕೊಂಡಿದ್ದೆ. ಆದ್ರೆ ಇಲ್ಲಿ ಆಗಿದ್ದೇ ಬೇರೆ ಎನ್ನುವ ಅಜ್ಜನನ್ನು ಕ್ಯಾಮರಾಮೆನ್ ಸಮಾಧಾನಪಡಿಸುವ ಯತ್ನ ಮಾಡ್ತಾನೆ. ಹಿಂದಿನದೆಲ್ಲ ಮರೆತುಬಿಡಿ. ಅದನ್ನು ಬದಲಾಯಿಸಲು ನಿಮ್ಮಿಂದ ಸಾಧ್ಯವಿಲ್ಲ. ಈಗಿನ ಸ್ಥಿತಿ ಒಪ್ಪಿಕೊಂಡು, ಜೀವನ ನಡೆಸಿ ಎನ್ನುತ್ತಾರೆ ಕ್ಯಾಮರಾಮೆನ್.
ಕೆಲ ದಿನಗಳ ಹಿಂದೆ ಪೋಸ್ಟ್ ಆಗಿರುವ ಈ ವಿಡಿಯೋಕ್ಕೆ 2 ಲಕ್ಷಕ್ಕಿಂತಲೂ ಹೆಚ್ಚು ವೀವ್ಸ್ ಬಂದಿದೆ. ನೂರಾರು ಮಂದಿ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಜನರು ತಮ್ಮ ಪರಿಸ್ಥಿತಿಯಿಂದ ಅಲ್ಲ ನಮ್ಮವರಿಂದ ಸೋಲುತ್ತಾರೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಭಾರತದ ರಸ್ತೆ ಬದಿಗಳು ನೋವಿನ ಕಥೆಗಳಿಂದ ತುಂಬಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಜಹೀರ್ ಇಕ್ಬಾಲ್ ಜೊತೆಗಿನ ರಹಸ್ಯ ಸಂಬಂಧದ ಕುರಿತು ಮೊದಲ ಬಾರಿಗೆ ನಟಿ ಸೋನಾಕ್ಷಿ ಸಿನ್ಹಾ ಓಪನ್ ಮಾತು
ಈ ವಿಡಿಯೋ ನೋಡಿ ಭಾವುಕರಾದ ಅನೇಕರು, ಅಜ್ಜನಿಗೆ ಇಂಥ ಸ್ಥಿತಿ ಬರಬಾರದಿತ್ತು ಎಂದಿದ್ದಾರೆ. ಮತ್ತೆ ಕೆಲ ನೊಂದ ವ್ಯಕ್ತಿಗಳು, ಪುರುಷರ ಹಣೆಬರಹದ ಬಗ್ಗೆ ಮಾತನಾಡಿದ್ದಾರೆ. ಬಳಕೆದಾರರ ಕಮೆಂಟ್ ಗೆ ಪ್ರತಿಕ್ರಿಯೆ ನೀಡಿದ being_jigar_rawal, ವೃದ್ಧ ವ್ಯಕ್ತಿ ಹೆಸರು ರಾಜು. ಅವರ ಮನೆಯವರು ಅವರನ್ನು ಹುಡುಕ್ತಿದ್ದರಂತೆ. ವಿಡಿಯೋ ನೋಡಿದ ಮೇಲೆ ನನ್ನನ್ನು ಸಂಪರ್ಕಿಸಿದ್ದರು. ರಾಜು ಹೇಳಿದ್ದೆಲ್ಲ ಸತ್ಯ. ಆದ್ರೆ ಇಷ್ಟೊಂದು ಓದಿದ ವ್ಯಕ್ತಿ ಇಂಥ ಸ್ಥಿತಿಗೆ ಬರ್ತಾರೆ ಅನ್ನೋದನ್ನು ನಂಬೋಕೆ ಸಾಧ್ಯವಾಗ್ತಿಲ್ಲ ಎಂದಿದ್ದಾರೆ. ರಾಜು, ಅವರ ಕುಟುಂಬವನ್ನು ಸೇರಿದ್ರಾ, ಕುಟುಂಬದ ಜೊತೆ ಖುಷಿಯಾಗಿದ್ದಾರಾ ಎಂದು ಬಳಕೆದಾರರು ಪ್ರಶ್ನೆ ಕೇಳ್ತಿದ್ದಾರೆ. ಅಲ್ಲದೆ ಅವರ ಕುಟುಂಬದ ಜೊತೆ ಖುಷಿಯಾಗಿರುವ ವಿಡಿಯೋ ಮಾಡಿ ಅಂತ ಕಮೆಂಟ್ ಹಾಕಿದ್ದಾರೆ.