Puneeth's Footsteps: ಅಪ್ಪು ಹಾದಿಯಲ್ಲಿ ಸಾಗಿದ ಟಾಲಿವುಡ್ ತಾರೆಯರು..!

Dec 4, 2021, 3:14 PM IST

ಬೆಂಗಳೂರು (ಡಿ. 04): ಕರುನಾಡ ಯುವರತ್ನ, ಪವರ್ ಸ್ಟಾರ್ ಪುನೀತ್ ಇದ್ದಾಗ ಕಷ್ಟದಲ್ಲಿರುವರಿಗೆ, ಅವಶ್ಯಕತೆ ಇರುವವರಿಗೆ ಸಹಾಯ ಮಾಡುತ್ತಿದ್ದರು. ಇದನ್ನು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಬಲಗೈಯಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗದಂತೆ ನೋಡಿಕೊಂಡ ಕರ್ಣ.

Madhagaja Response: ಮದಗಜ ಮೈಂಡ್ ಬ್ಲೋಯಿಂಗ್ ಎಂದ ಪ್ರೇಕ್ಷಕ ಪ್ರಭು..!

ಈಗ ಅಪ್ಪು (Puneeth Rajkumar) ಅವರ ಹಾದಿಯಲ್ಲೇ ಟಾಲಿವುಡ್ ನಟರಾದ ಮಹೇಶ್ ಬಾಬು, ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್ ತೇಜ ಸಾಗುತ್ತಿದ್ದಾರೆ. ಇತ್ತೀಚಿಗೆ ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಸಾಕಷ್ಟು ಹಾನಿಯುಂಟು ಮಾಡಿತ್ತು. ಆಗ ನಟರು ಪ್ರವಾಹ ಪರಿಹಾರಕ್ಕೆ ಸಿಎಂ ನಿಧಿಗೆ ಹಣ ನೀಡಿದ್ದಾರೆ. ಪುನೀತ್ ಅವರ ಸಮಾಜ ಸೇವೆ, ಸಹಾಯವನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ.