
ಬೆಂಗಳೂರು (ನ.20): ಚೆನ್ನಪಟ್ಟಣ ಉಪಚುನಾವಣೆ ಕಣದಲ್ಲಿ ಪ್ರಚಾರ ಮಾಡುವ ವೇಳೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಟೀಕೆ ಮಾಡುವ ಭರದಲ್ಲಿ 'ಕಾಲಿಯಾ' (ಕರಿಯ) ಕುಮಾರಸ್ವಾಮಿ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.ಬಳಿಕ ಜಮೀರ್‌ಅವರು ಈ ಹೇಳಿಕೆಗೆ ಕ್ಷಮೆಯನ್ನೂ ಯಾಚಿಸಿದ್ದರು. ಸಿಎಂ ಹಾಗೂ ಡಿಸಿಎಂ ಕೂಡ ಈ ಹೇಳಿಕೆಯನ್ನು ಖಂಡಿಸಿದ್ದರು. ವಿವಾದ ಎಲ್ಲಾ ತಣ್ಣಗಾಗುತ್ತಿದೆ ಎನ್ನುವ ಹೊತ್ತಿಗೆ ಕಾಂಗ್ರೆಸ್ ವಕ್ತಾರೆ ತೇಜಸ್ವಿನಿ ಗೌಡ ಯಡವಟ್ಟಿನ ಹೇಳಿಕೆ ನೀಡಿದ್ದಾರೆ. ಜಮೀರ್ ಅವರ ಹೇಳಿಕೆಯನ್ನು ಸರ್ಮಥನೆ ಮಾಡಿಕೊಳ್ಳುವ ಭರದಲ್ಲಿ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅದರೊಂದಿಗೆ ತಣ್ಣಗಾಗಿದ್ದ ಕರಿಯಾ ವಾರ್ ಮತ್ತು ಶುರುವಾಗಿದೆ.
ಖಾಸಗಿ ಕಾರ್ಯಕ್ರಮವೊಂದಲ್ಲಿ ಮಾತನಾಡುತ್ತಿದ್ದ ತೇಜಸ್ವಿನಿ ಗೌಡ, ಕುಮಾರಸ್ವಾಮಿಯನ್ನ ರಾಧಿಕಾ ಕರಿಯಾ ಅಂದ್ರೆ ಒಕೆ, ಜಮೀರ್ ಕರಿಯಾ ಅಂದ್ರೆ ಟೀಕೆ ಮಾಡೋದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
'ಕರಿಯಾ, ಬಿಳಿಯಾ ಇವತ್ತು ನೋಡಿದ್ರಲ್ಲ. ರಾಧಿಕಾ ಕುಮಾರಸ್ವಾಮಿ ಕರಿಯಾ ಅಂದಿದ್ರು. ನಾನು ಹೇಳೋದಲ್ಲ, ಯಾವುದೋ ಮೀಡಿಯಾ ಜೊತೆ ಮೈಸೂರಿನಲ್ಲಿ ಮಾತನಾಡುವಾಗ, ಅವರು ನನ್ನ ಏನಂತಾ ಕರೀತಾರೆ ಅಂದಾಗ, ನನ್ನ ಚಿನ್ನು ಅಂತಾ ಕರೀತಾರೆ ಅಂದಿದ್ರು. ನೀವ್ ಏನಂತಾ ಕರೀತೀರಿ? ಹೇಳಲೇಬೇಕಾ? ಕರಿಯಾ ಅಂತಾ ಕರೀತಿನಿ ಎಂದು ರಾಧಿಕಾ ಹೇಳಿದ್ದಾರೆ.ರಾಧಿಕಾ ಹೇಳಿದ್ರೆ ಒಕೆ, ಜಮೀರ್ ಹೇಳಿದ್ರೆ ಟೀಕೆ ಯಾಕೆ?' ಎಂದು ತೇಜಸ್ವಿನಿ ಗೌಡ ಹೇಳಿದ್ದಾರೆ.
ಸೆಪ್ಟಂಬರ್ ತ್ರೈಮಾಸಿಕದಲ್ಲಿ ಭಾರತದ 143 ಕಂಪನಿಗಳಿಗೆ ಒಟ್ಟಾರೆ 20 ಸಾವಿರ ಕೋಟಿ ನಷ್ಟ!
ಕಾಂಗ್ರೆಸ್ ನಾಯಕಿ ನೀಡಿರುವ ಈ ಹೇಳಿಕೆ, ಕರಿಯ ವಿವಾದ ಮತ್ತೊಮ್ಮೆ ಎಚ್ಚರವಾಗುವ ಸಾಧ್ಯತೆ ಇದೆ. ತೇಜಸ್ವಿನಿ ಗೌಡ ಹೇಳಿಕೆಗೆ ಕಾಂಗ್ರೆಸ್ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದು ಕುತೂಹಲವಾಗಿದೆ.
ರೆಹಮಾನ್ ಪತ್ನಿಗೆ ತಮಿಳು ಬರೋದಿಲ್ಲ ಎಂದು ಟೀಕಿಸಿದ್ದ ನಟಿ ಕಸ್ತೂರಿ ಶಂಕರ್, ತಿರುಗೇಟು ಕೊಟ್ಟಿದ್ದ ಸಂಗೀತ ಮಾಂತ್ರಿಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ