Corona Case Hike: ರಿಲೀಸ್‌ಗೆ ರೆಡಿಯಾಗಿದ್ದ ಚಿತ್ರಗಳಿಗೆ ಟೆನ್ಷನ್, ರಿಲೀಸ್ ತಡವಾಗುವ ಸಾಧ್ಯತೆ

Jan 3, 2022, 2:23 PM IST

ಬೆಂಗಳೂರು (ಜ. 03): ದೇಶಾದ್ಯಂತ ಕೊರೋನಾ ತೀವ್ರವಾಗಿ ಹೆಚ್ಚಳವಾಗುತ್ತಿದೆ. ದೆಹಲಿ, ಮುಂಬೈ, ಕೊಲ್ಕತ್ತಾ, ಕೇರಳದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. 

ರಿಲೀಸ್‌ಗೆ ರೆಡಿಯಾಗಿರುವ ಚಿತ್ರಗಳಿಗೆ ಟೆನ್ಷನ್ ಶುರುವಾಗಿದೆ. ಬಹುನಿರೀಕ್ಷಿತ ಚಿತ್ರಗಳ ಬಿಡುಗಡೆ ತಡವಾಗುವ ಸಾಧ್ಯತೆ ಇದೆ. ಥಿಯೇಟರ್‌ಗಳಲ್ಲಿ ಶೇ. 50 ರಷ್ಟು ಮಾತ್ರ ಅವಕಾಶ ಕೊಟ್ಟರೆ ನಷ್ಟವಾಗುವ ಭಯವಿದೆ. ಹಾಗಾಗಿ ಪರಿಸ್ಥಿತಿ ನೋಡಿಕೊಂಡು ರಿಲೀಸ್ ಮಾಡಲು ಚಿತ್ರತಂಡ ತಯಾರಾಗಿದೆ. ಫೆ. 24 ಕ್ಕೆ ಸುದೀಪ್ ನಟನೆಯ ವಿಕ್ರಾಂತ್ ರೋಣ, ಶರಣ್ ನಟನೆಯ 'ಅವತಾರ ಪುರುಷ' ಚಿತ್ರ ರಿಲೀಸ್‌ಗೆ ಪ್ಲ್ಯಾನ್ ಮಾಡಲಾಗಿದೆ. ಆದರೆ ಕೊರೋನಾ ಶಾಕ್‌ನಿಂದ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.