'ನಿನ್ನ ಎಲ್ಲಾ ಕರ್ಮಕಾಂಡಗಳು ಗೊತ್ತು, ಬಯಲು ಮಾಡ್ತೀನಿ': ಬಿಜೆಪಿಗನಿಗೆ 'ಅಕ್ಕ'ನ ವಾರ್ನಿಂಗ್

Apr 21, 2019, 4:24 PM IST

ರಾಯಚೂರು[ಏ.21]: ಚುನಾವಣಾ ಪ್ರಚಾರ ಭಾಷಣದಲ್ಲಿ ಸಿಎಂ ಹಾಗೂ ರಾಯಚೂರು ಮೈತ್ರಿ ಅಭ್ಯರ್ಥಿ ಬಿ. ವಿ. ನಾಯಕ್ ವಿರುದ್ದ ಮನಸೋ ಇಚ್ಚೆ ನಾಲಿಗೆ ಹರಿಬಿಟ್ಟಿದ್ದ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಗೆ ಓರ್ವ ಮಹಿಳೆ ಟಾಂಗ್ ನೀಡಿದ್ದಾಳೆ. ಬಿ. ವಿ.ನಾಯಕ್ ಬಗ್ಗೆ ಇನ್ನೊಮ್ಮೆ ಅವಹೇಳನಕಾರಿ ಮಾತುಗಳನ್ನ ಆಡಿದರೆ ಸಭೆಗೆ ಬಂದು ಹೊಡೆಯುವುದಾಗಿ ಎಚ್ಚರಿಸಿದ್ದಾಳೆ. ಅಂದಹಾಗೇ ಈ ಮಹಿಳೆ ಬೇರೆಯಾರೂ ಅಲ್ಲ ಶಿವನಗೌಡ ನಾಯಕ್ ಗೆ ಸಂಬಂಧದಲ್ಲಿ ಅಕ್ಕ ಆಗಬೇಕು. ಮೈತ್ರಿ ಅಭ್ಯರ್ಥಿ ಬಿ. ವಿ. ನಾಯಕ್ ಸಹೋದರ ರಾಜಶೇಖರ್ ನಾಯಕ್ ಪತ್ನಿ ಶ್ರೀದೇವಿ ನಾಯಕ್ ಶಿವನಗೌಡಗೆ ನಾಲಿಗೆ ಹರಿಬಿಡದಂತೆ ದೇವದುರ್ಗದಲ್ಲಿ ಮತ ಪ್ರಚಾರ ವೇಳೆ ಅವಾಜ್ ಹಾಕಿದ್ದಾರೆ