ದೇವೇಗೌಡರ ಹೇಳಿಕೆಯಿಂದ ಬೇಸರವಾಗಿದೆ, ಕುಮಾರಸ್ವಾಮಿ ಒಂದೇ ಒಂದು ಕರೆ ಮಾಡಿಲ್ಲ: ಸುಮಲತಾ ಅಸಮಾಧಾನ

By Suvarna NewsFirst Published Apr 26, 2024, 1:49 PM IST
Highlights

ಜೆಡಿಎಸ್ ನಾಯಕರು ಯಾವುದೇ ಸಭೆ, ಪ್ರಚಾರಕ್ಕೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತೆ. ಆದ್ರೆ ಅವರು ನನ್ನ‌ ಕರೆದೇ ಇಲ್ಲ ಕುಮಾರಸ್ವಾಮಿ ಒಂದು ಕರೆ ಸಹ ಮಾಡಿಲ್ಲ ಎಂದು ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದಾರೆ.

ಮಂಡ್ಯ (ಏ.26): ಸಂಸದೆ ಸುಮಲತಾ ಅಂಬರೀಶ್‌ ಅವರು   ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ  ದೊಡ್ಡರಸಿನಕೆರೆ ಗ್ರಾಮದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಕ್ಕು ಚಲಾಯಿಸಿದರು. ಮತಗಟ್ಟೆ ಸಂಖ್ಯೆ 164ರಲ್ಲಿ ಮತದಾನ ಮಾಡಿದ ಸಂಸದೆ ಬಳಿಕ ಮಂಡ್ಯ ಅಭ್ಯರ್ಥಿ ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಮತದಾನ ಮಾಡೋದು ಕರ್ತ್ಯವ್ಯ, ಅದನ್ನ ನಿರ್ವಹಿಸಿದ್ದೇನೆ ಎಂದರು. ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ.
ಅವರು ದೊಡ್ಡವರು, ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಆ ರೀತಿ ಹೇಳಿದ್ದಾರೆ. ಅವರಿಂದ ಅಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಸ್ವತಂತ್ರ ಸಂಸದೆಯಾಗಿ ನನ್ನ‌ ಜವಾಬ್ದಾರಿಯನ್ನು ನಿರ್ವಹಿಸಿದ್ದೀನಿ. ಮೋದಿಯವರು ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ನಾನು ಗೆದ್ದಂತಹ ಸೀಟ್ ತ್ಯಾಗ ಮಾಡಿದ್ದೀನಿ. ಈ ಹಂತದಲ್ಲಿ ಅಂಬರೀಶ್ ಅವರ ಪಡೆಯ ಶಕ್ತಿಯನ್ನ ಎನ್‌ಡಿಎ ಗೆ ಕೊಟ್ಟಿದ್ದೇವೆ. ಮೈತ್ರಿ ಪರ ನಮ್ಮ ಬೆಂಬಲಿಗರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಆದರೆ ಜೆಡಿಎಸ್ ನಾಯಕರು ಯಾವುದೇ ಸಭೆ, ಪ್ರಚಾರಕ್ಕೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತೆ. ಆದ್ರೆ ಅವರು ನನ್ನ‌ ಕರೆದೇ ಇಲ್ಲ ಎಂದರು.

LIVE: ಮಂಡ್ಯ Elections 2024: ಮತದಾರರ ಪಟ್ಟಿಯಲ್ಲಿ ಒಂದೇ ಗ್ರಾಮದ 45 ಜನರ ಹೆಸರು ನಾಪತ್ತೆ!

ನಾನಿಲ್ಲದೆ ಅವರು ಚುನಾವಣೆ ಮಾಡಿಕೊಳ್ಳುತ್ತೀವಿ ಎಂಬ ಭಾವನೆ ಇರಬಹುದು. ಅವರು ಹೇಳಿಕೆ ನೀಡಿದ ನಂತರ ನಿನ್ನೆಯಿಂದ ನನಗೆ ಒಂದಷ್ಟು ಕರೆ ಬಂದವು. ನನ್ನ ಯಾವುದೇ ಪ್ರಚಾರಕ್ಕೆ ಕರೆದಿಲ್ಲ. ಕುಮಾರಸ್ವಾಮಿ ನಮ್ಮ ಮನೆಗೆ ಬಂದು ಹೋದ ನಂತ್ರ ನನಗೆ ಒಂದು ಪೋನ್ ಸಹ ಕರೆ ಮಾಡಿ  ಪ್ರಚಾರಕ್ಕೆ ಬನ್ನಿ ಎಂದು ಕೇಳಿಲ್ಲ. ಇಷ್ಟು ತ್ಯಾಗ ಮಾಡಿಯೂ ನನ್ನ ಕರೆಯಲಿಲ್ಲ ಅನ್ನೋದು ನನಗೆ ಬೇಸರವಾಯ್ತು. ಹಾಗಿದ್ರೆ ನಾನು ಮಾಡಿದ್ದು ತಪ್ಪಾ? ನನ್ನ ಅಭಿಮಾನಿಗಳು ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರು.

ಸೋತ ಸೀಟನ್ನೇ ಬಿಡಲ್ಲ ಅಂತಹುದರಲ್ಲಿ ನಾನು ಗೆದ್ದ ಸೀಟು ಬಿಟ್ಟು ಕೊಟ್ಟಿದ್ದಿನಿ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ.
ಆದ್ರೆ ಅವರು ನನ್ನ ಪ್ರಚಾರಕ್ಕೆ ಕರೆದಿಲ್ಲ. ಪಕ್ಷ‌ ಸೂಚನೆ ನೀಡಿದ ಕಡೆ ಹೋಗಿ ನಾನು ಪ್ರಚಾರಕ್ಕೆ ಹೋಗಿದ್ದೇನೆ. ಮಂಗಳೂರುವರೆಗೂ ಹೋಗಿದ್ದೀನಿ, ಮಂಡ್ಯಕ್ಕೆ ಬರ್ತಿರಲಿಲ್ವಾ? ಆ ದಿನ ನನ್ನ ಸೀಟನ್ನ ಬಿಟ್ಟಾಗಲೂ ಬೇಸರವಾಗಿರಲಿಲ್ಲ. ಆದ್ರೆ ದೇವೇಗೌಡರ ಹೇಳಿಕೆ ನನಗೆ ಬೇಸರ ತರಿಸಿದೆ ಎಂದರು.

ಕರ್ನಾಟಕ Election 2024 Live: ಮಧ್ಯಾಹ್ನ 1ಕ್ಕೆ ಕರ್ನಾಟಕದಲ್ಲಿ ಶೇ.32.8 ಮತದಾನ

ಎನ್‌ಡಿಎ, ಬಿಜೆಪಿ ಗೆಲ್ಲಬೇಕು ಎಂಬುದು ಇದೆ. ಮಂಡ್ಯದಲ್ಲೂ ಒಳ್ಳೆ ಟ್ರೆಂಡ್ ಇದೆ ಅಂತ ಮಾತಾಡ್ತಾರೆ. ರಾಜ್ಯದ 28ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಬೇಕು ಎಂಬುದು ನನ್ನ ಆಶಯ ಎಂದರು. ಇನ್ನು ಚೆಲುವರಾಯಸ್ವಾಮಿ ಅವರ ಋಣ ಸಂದಾಯದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಚುನಾವಣೆ ಬಂದಾಗ ಅವರು ಋಣ ಸಂದಾಯ ಬಗ್ಗೆ ಮಾತನಾಡ್ತಾರೆ. ಆ ಬಗೆಗೆ ಅವರನ್ನೇ ಕೇಳಿ ಎಂದು ಹೇಳಿದರು.

 

click me!