ಗಂಡ, ಮಗುವಿನೊಂದಿಗೆ ಅಮೃತಸರದಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್ ನಟಿ ಗೌತಮಿ ಗೌಡ

First Published | Apr 26, 2024, 1:24 PM IST

ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಈ ಹಿಂದೆ ಶ್ರೇಷ್ಠಾ ಪಾತ್ರದಲ್ಲಿ ನಟಿಸಿದ್ದ ಗೌತಮಿ ಗೌಡ ತನ್ನ ಪತಿ ಜೊತೆ ಪಂಜಾಬ್, ಡಾಲ್ ಹೌಸಿ ಮೊದಲಾದ ಕಡೆಗೆ ತೆರಳಿದ್ದು, ಅಮೃತಸರದ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ನ ಶ್ರೇಷ್ಠ ಪಾತ್ರ ಬಹಳಷ್ಟು ಜನಪ್ರಿಯತೆ ಪಡೆದಿದೆ. ಇವರ ನಟನೆ ಕೂಡ ಸಖತ್ತಾಗಿದೆ. ಕಾವ್ಯಾ ಗೌಡನಿಗೂ ಮುನ್ನ ಶ್ರೇಷ್ಠಾ ಪಾತ್ರದಲ್ಲಿ ಗೌತಮಿ ಗೌಡ (Gouthami Gouda) ನಟಿಸುತ್ತಿದ್ದರು. 
 

ಸೀರಿಯಲ್ ನಿಂದ ಅರ್ಧಕ್ಕೆ ವಯಕ್ತಿಕ ಕಾರಣಗಳಿಂದ ಹೊರನಡೆದ ಗೌತಮಿ ಗೌಡ, ಇದೀಗ ಮುದ್ದಾದ ಮಗುವಿನ ತಾಯಿಯಾಗಿದ್ದಾರೆ. ಸದ್ಯ ಗೌತಮಿ, ಗಂಡ ಜಾರ್ಜ್ ಕ್ರಿಸ್ಟಿ ಮತ್ತು ಮಗುವಿನ ಜೊತೆಗೆ ಟ್ರಾವೆಲ್ ಮಾಡುತ್ತಾ, ಫ್ಯಾಮಿಲಿ ಟ್ರಿಪ್ (family tour) ಮಾಡ್ತಾ ಎಂಜಾಯ್ ಮಾಡ್ತಿದ್ದಾರೆ. 
 

Tap to resize

ಕೆಲದಿನಗಳ ಹಿಂದಷ್ಟೇ ಗೌತಮಿ ಫ್ಯಾಮಿಲಿ ಸಮೇತ ದುಬೈಗೆ ಟ್ರಾವೆಲ್ ಮಾಡಿದ್ದರು. ಇದೀಗ ಡಾಲ್ ಹೌಸಿ, ಮುಸೌರಿ, ಅಮೃತಸರ ಮೊದಲಾದ ತಾಣಗಳಿಗೆ ಭೇಟಿನೀಡಿದ್ದಾರೆ. ಅಮೃತಸರದ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ್ದು, ಬಹುದಿನಗಳ ಕನಸು ನನಸಾದ ಕ್ಷಣಗಳ ಬಗ್ಗೆ ತಿಳಿಸಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಹಂಚಿಕೊಂಡಿರುವ ಗೌತಮಿ, ಬಹಳ ವರ್ಷದ ಕನಸು ನನಸಾದ ದಿನ,  ಅತಿ ದೊಡ್ಡ ಸಾಮೂಹಿಕ ಊಟದ / ಅಡುಗೆ ಮನೆ (ಲಂಗರ್) ಹೊಂದಿರುವ ಮತ್ತು ದಿನವೊಂದಕ್ಕೆ ಲಕ್ಷಾಂತರ ಜನಕ್ಕೆ ಉಚಿತ ಊಟದ ವ್ಯವಸ್ಥೆ ಕೊಡುವ ಪುಣ್ಯ ಜಾಗ, ಶ್ರೀ ಹರ್ ಮಂದಿರ್ ಸಾಹಿಬ್,  ಅಮೃತಸರದ ಗೋಲ್ಡನ್ ಟೆಂಪಲ್ (Golden Temple, Amritsar) ಎಂದು ಬರೆದುಕೊಂಡಿದ್ದಾರೆ. 
 

ನಮ್ಮ ಕರ್ನಾಟಕದ ಧರ್ಮಸ್ಥಳ ಹೇಗೆ ನಮ್ಮ ಹೆಮ್ಮೆ, ಹಾಗೆ ಈ ಮಂದಿರ ನಮ್ಮ ದೇಶದ ಹೆಮ್ಮೆ ಅಂತ ಚಿಕ್ಕವಳಿದ್ದಾಗ ಕೇಳಿ ಕಲಿತಿದ್ದೆ. ಈ ಜಾಗ ನೋಡುವ ಆಸೆ ಆಗಿನಿಂದಲೇ ಮನಸಿನಲ್ಲಿತ್ತು. ಮಗಳ ಜೊತೆ ಗುರುಗಳ ದರ್ಶನ ಪಡೆದು ಧನ್ಯ ಅನ್ನಿಸುತ್ತಿದೆ. ಎಲ್ಲರಿಗೂ ಶುಭವಾಗಲಿ ಎಂದು ಬರೆದುಕೊಂಡಿದ್ದಾರೆ. 
 

ಅಮೃತಸರ ಗೋಲ್ಡನ್ ಟೆಂಪಲ್ ಮುಂದೆ ಗಂಡ, ಮಗಳ ಜೊತೆಗೆ ಫೋಟೋ, ವಿಡೀಯೋ ತೆಗೆಸಿಕೊಂಡು ಗೌತಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. 
 

ಇನ್ನು ಡಾಲ್ ಹೌಸಿಯಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿರುವ ಗೌತಮಿ, ಅಲ್ಲಿನ ಸುಂದರವಾದ ಚರ್ಚ್ ಗಳು, ಬೌದ್ಧ ಮಾನೆಸ್ಟ್ರಿ ಮೊದಲಾದ ಕಡೆಗೆ ಅಲ್ಲಿನ ವಿಶೇಷತೆಯ ಬಗ್ಗೆ ವಿಡಿಯೋ ಮಾಡಿ ಮಾಹಿತಿ ನೀಡಿದ್ದಾರೆ. 
 

Latest Videos

click me!