ಸಿಎಂ ಹೆಲಿಕಾಪ್ಟರ್ ತಡಕಾಡಿದ ಚುನಾವಣಾಧಿಕಾರಿಗಳು..!

Apr 17, 2019, 8:40 PM IST

ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರನ್ನು ಚುನಾವಣಾ ಅಧಿಕಾರಿಗಳು ಸಮಗ್ರ ತಪಾಸಣೆಗೆ ಒಳಪಡಿಸಿದ್ದಾರೆ. ಶಿವಮೊಗ್ಗದ ಸೊರಬದ ಅನವಟ್ಟಿ ಹೆಲಿಪ್ಯಾಡ್‍ನಲ್ಲಿ ಕುಮಾರಸ್ವಾಮಿಯವರು  ಹೆಲಿಕಾಪ್ಟರ್‍ ನಿಂದ ಇಳಿದು ಹೊರಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚುನಾವಣಾಧಿಕಾರಿಗಳು ಸುಮಾರು 20 ನಿಮಿಷಗಳ ಕಾಲ ತಪಾಸಣೆ ನಡೆಸಿದರು.