ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳಿಸಿ, ಮಕ್ಕಳ ಸುರಕ್ಷತೆ ನಮ್ಮ ಹೊಣೆ: ಸುರೇಶ್

Jan 1, 2021, 10:20 AM IST

ಬೆಂಗಳೂರು (ಜ. 01): 10 ತಿಂಗಳುಗಳಿಂದ  ಬಂದ್ ಆಗಿದ್ದ  ರಾಜ್ಯದ ಎಲ್ಲಾ  ಶಾಲೆ- ಪಿಯು ಕಾಲೇಜುಗಳು  ಪುನಾರಂಭಗೊಂಡಿವೆ. ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ಹಾಗೂ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶಾಲಾ- ಕಾಲೇಜು ಆವರಣವನ್ನು  ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. 

ಇಂದಿನಿಂದ ಶಾಲೆ, ಕಾಲೇಜುಗಳ ಪುನಾರಂಭ; ವಿದ್ಯಾರ್ಥಿಗಳಿಗೆ ಈ ಷರತ್ತುಗಳು ಅನ್ವಯ!

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಮಾತ್ರ ತರಗತಿಗಳು ಆರಂಭವಾಗಲಿವೆ. 6 ರಿಂದ 9 ನೇ ತರಗತಿಗೆ 'ವಿದ್ಯಾಗಮ' ಯೋಜನೆ ಶುರುವಾಗಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಶಾಲಾ- ಕಾಲೇಜು ಆವರಣದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ. ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳಿಸಿ, ಮಕ್ಕಳ ಸುರಕ್ಷತೆ ನಮ್ಮ ಹೊಣೆ. ಪೋಷಕರು ಹೆದರುವ ಅಗತ್ಯ ಇಲ್ಲ. ಮಕ್ಕಳ ಸುರಕ್ಷತೆ ನಮ್ಮ ಹೊಣೆ. 2021 ಎಲ್ಲರಿಗೂ ಶುಭ ತರಲಿ. ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ' ಎಂದು ಹಾರೈಸಿದ್ಧಾರೆ.