ಸಹೋದರ ನಗ್ನ ಫೋಟೋ ಮಾರಾಟ ವಿಚಾರ ಹೇಳಿದರೂ ಕುಗ್ಗದೆ, ರೆಡ್‌ಗೌನ್‌ನಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್

First Published | May 6, 2024, 4:54 PM IST

ಬಾಲಿವುಡ್‌ನ ಮಾದಕ ತಾರೆಯಾಗಿರುವ ನಟಿ ಸನ್ನಿ ಲಿಯೋನ್ ಅವರು ಮಾಜಿ ನೀಲಿ ತಾರೆಯೂ ಆಗಿದ್ದರು. ಸ್ವತಃ ಅವರ ತಮ್ಮನೇ ಸನ್ನು ಲಿಯೋನ್ ಅವರ ನಗ್ನ ಚಿತ್ರಗಳನ್ನು ಕಾಲೇಜು ಹುಡುಗರಿಗೆ ಮಾರಾಟ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಇದ್ಯಾವುದಕ್ಕೂ ಕುಗ್ಗದ ಸನ್ನಿ ಲಿಯೋನ್ ರೆಡ್‌ ಗೌನ್‌ನಲ್ಲಿ ಹಾಟ್ ಪೋಸ್ ನೀಡಿ, ಪಡ್ಡೆಗಳ ಬಿಸಿ ಏರಿಸಿದ್ದಾರೆ.

ಮಾಜಿ ಪೋರ್ನ್‌ಸ್ಟಾರ್‌ ಸನ್ನಿ ಲಿಯೋನ್‌ ಸಹೋದರ ಕಾಲೇಜಿನಲ್ಲಿ ಓದುತ್ತಿರುವಾಗ ಹಣಕ್ಕಾಗಿ ಸ್ವತಃ ಅಕ್ಕನ ನಗ್ನ ಚಿತ್ರಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ವಿಚಾರವನ್ನು ಇತ್ತೀಚೆಗೆ ಹೇಳಿಕೊಂಡಿದ್ದಾರೆ.

2016ರಲ್ಲಿ ಕೆನಡಾದ ಸಾಕ್ಷ್ಯಚಿತ್ರ  'ಮೋಸ್ಟ್ಲಿ ಸನ್ನಿ' ಸಿನಿಮಾದಲ್ಲಿ ಸನ್ನಿ ಲಿಯೋನ್ ನಗ್ನವಾಗಿ ಕಾಣಿಸಿಕೊಂಡಿದ್ದರು. ಆದರೆ, ಸನ್ನಿ ಲಿಯೋನ್ ಅವರ ನಗ್ನ ಚಿತ್ರಗಳನ್ನು ಹೊಂದಿದ ಪೋಸ್ಟರ್‌ಗಳಿಗೆ ಅಕ್ಕನ ಸಹಿ ಹಾಕಿಸಿ, ಅವುಗಳನ್ನು ಸ್ವತಃ ಆಕೆಯ ಸಹೋದರ ಸಂದೀಪ್ ವೋಹ್ರಾ ತಮ್ಮ ಕಾಲೇಜು ಸ್ನೇಹಿತರಿಗೆ ಹಣಕ್ಕಾಗಿ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾರೆ.

Tap to resize

ತಮ್ಮ ಸಂದೀಪ್ ವೋಹ್ರಾ ಅಕ್ಕ ಸನ್ನಿ ಲಿಯೋನ್‌ಳ ನಗ್ನ ಫೋಟೋವನ್ನು ಮಾರಾಟ ಮಾಡುವುದಕ್ಕೂ ಮುನ್ನ ತನ್ನ ಬಳಿ ಸಹಿ ಹಾಕಿಸಿಕೊಂಡಿದ್ದಾನೆ. ಇದು ನನಗೂ ತಿಳಿದ ವಿಚಾರ. ಕಾಲೇಜು ದಿನಗಳಲ್ಲಿ ಅವನಿಗೆ ಹಣ ಗಳಿಕೆಗಾಗಿ ನಗ್ನ ಫೋಟೋಗಳಿಗೆ ಸಹಿ ಹಾಕಿ ಕೊಟ್ಟಿದ್ದೇನೆ ಎಂದು ಸನ್ನಿಲಿಯೋನ್ ಒಪ್ಪಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸನ್ನಿ ಲಿಯೋನ್ ರೆಡ್ ಗೌನ್‌ನಲ್ಲಿ ಹಾಟ್ ಪೋಸ್ ನೀಡಿದ್ದಾರೆ. ಒಟ್ಟು ನಾಲ್ಕು ಮಾದಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆಗಳ ನಿದ್ದೆಯನ್ನು ಕದ್ದಿದ್ದಾರೆ.

ಆದರೆ, ಸನ್ನಿ ಲಿಯೋನ್ ಹಳೆಯ ವಿಚಾರಗಳನ್ನು ಹೇಳುವುದಕ್ಕೆ ಎಂದಿಗೂ ಮುಜುಗರ ಪಟ್ಟುಕೊಳ್ಳದೇ ತಾನಿರುವುದೇ ಹೀಗೆ ಎಂದು ಬದುಕುತ್ತಿದ್ದಾರೆ. ಹಳೆಯದ್ದೆಲ್ಲವನ್ನು ಮರೆತು ಬಾಲಿವುಡ್‌ನಲ್ಲಿ ಸಾಂಪ್ರದಾಯಿಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿದೇಶದಲ್ಲಿ ನೀಲಿ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟುಬಂದ ಸನ್ನಿ ಲಿಯೋನ್ ಭಾರತದಲ್ಲಿ ಬಿಗ್‌ಬಾಸ್ ಸೀಸನ್-5ರಲ್ಲಿ ಕಾಣಿಸಿಕೊಂಡರು. ಈ ಮೂಲಕ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಂಡರು.
 

ಬಿಗ್‌ಬಾಸ್ ಮನೆಯಿಂದ ಹೊರಬಂದ ಸನ್ನು ಲಿಯೋನ್‌ಗೆ ಅವಕಾಶಗಳ ಹೆಬ್ಬಾಗಿಲೇ ತೆರೆದಿತ್ತು. ನಂತರ, ಬಾಲಿವುಡ್‌ನಲ್ಲಿ ರಾಗಿಣಿ ಎಂಎಂಎಸ್ 2, ಒನ್ ನೈಟ್ ಸ್ಟ್ಯಾಂಡ್, ಜಿಸ್ಮ್- 2 ಮತ್ತು ಏಕ್ ಪಹೇಲಿ ಲೀಲಾ ಸೇರಿ ಹಲವು ದಕ್ಷಿಣ ಭಾರತ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

Latest Videos

click me!