ಅಪಾರ್ಟ್‌ಮೆಂಟ್‌ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದ ಮಹಿಳೆ ಸಾವಿನ ಕಹಾನಿ..!

Jul 31, 2020, 1:00 PM IST

ಬೆಂಗಳೂರು(ಜು.31): ಒಂದು ಹಳೆಯ ಅಪಾರ್ಟ್‌ಮೆಂಟ್‌ನಲ್ಲಿ ನೂರಾರು ಜನ ವಾಸವಿದ್ದರು. ಆ ಅಪಾರ್ಟ್‌ಮೆಂಟ್‌ನ ನೀರಿನ ಟ್ಯಾಂಕ್‌ನಲ್ಲೊಂದು ಮಹಿಳೆಯ ಹೆಣ ತೇಲಾಡುತಿತ್ತು. ಅದೇ ನೀರನ್ನು ಅಪಾರ್ಟ್‌ಮೆಂಟ್ ನಿವಾಸಿಗಳೆಲ್ಲರೂ ಬಳಸಿದ್ದಾರೆ.

ರಾಜ್ಯರಾಜಧಾನಿ ಬೆಂಗಳೂರಿನ ಯಲಹಂಕ ನ್ಯೂಟೌನ್‌ನ ನಾಲ್ಕನೇ ಹಂತದ ಹಳೆಯ ಅಪಾರ್ಟ್‌ಮೆಂಟ್‌ನ ನೀರಿನ ಟ್ಯಾಂಕ್‌ನಲ್ಲಿ ಗೌರಿ ಎನ್ನುವ ಮಹಿಳೆ ಮೃತದೇಹ ಪತ್ತೆಯಾಗಿತ್ತು. ಈ ಸಾವಿನ ಹಿಂದೆ ಹಲವು ಅನುಮಾನಗಳು ಆರಂಭವಾಗಿದ್ದರೆ, ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಆತಂಕ ಶುರುವಾಗಿದೆ.

ಜುಲೈ 24ರಂದು ಅಪಾರ್ಟ್‌ಮೆಂಟ್‌ನಲ್ಲಿ ಬರುತ್ತಿದ್ದ ನೀರಿನ ಬಣ್ಣ ಬದಲಾಗಿ ಹೋಗಿತ್ತು. ಇದಾಗಿ ಎರಡು ದಿನಗಳ ಬಳಿಕ ನೀರಿನ ವಾಸನೆ ಕೂಡಾ ಬದಲಾಗಿ ಹೋಗಿತ್ತು. ನೀರಿನ ಟ್ಯಾಂಕ್ ನೋಡಿದಾಗಲೇ ಗೊತ್ತಾಗಿದ್ದು, ನೀರು ಹೀಗಾಗಲು ಕಾರಣ ಮಹಿಳೆಯ ಮೃತದೇಹವೆಂದು. 

ಸೈಟ್‌ ಕೊಡಿಸುತ್ತೇನೆ ಎಂದು 50 ಕೋಟಿ ಪೀಕಿದ್ದ ಮಹಿಳೆ: ಟ್ಯಾಂಕ್‌ಗೆ ಹಾರಿ ಗೃಹಿಣಿ ಆತ್ಮಹತ್ಯೆ?

ಈ ಮಹಿಳೆಯದ್ದು ಆತ್ಮ ಹತ್ಯೆಯಾ? ಕೊಲೆಯಾ? ಅಥವಾ ಇದರ ಹಿಂದೆ ಬೇರೆಯದ್ದೇ ಕಹಾನಿ ಇದೆಯಾ? ಈ ಎಲ್ಲಾ ಕುತೂಹಲಗಳಿಗೆ ಇಲ್ಲಿದೆ ನೋಡಿ