Jul 4, 2023, 3:45 PM IST
ಅವರಿಬ್ಬರು ಮದುವೆಯಾಗಿ 6 ವರ್ಷಗಳಾಗಿತ್ತು ಅಷ್ಟೇ, ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದಿದ್ರು. ಆದರ್ಶ ದಂಪತಿಗಳ ರೀತಿ ಇದ್ರು. ಗಂಡ ಬೀಗರ ಊಟ ಅಂತ ಹೋಟೆಲ್ ಓಪನ್ ಮಾಡಿದ್ರೆ ಹೆಂಡತಿ ಆ ಹೊಟೆಲ್ಗೆ ಕ್ಯಾಷಿಯರ್. ಹೀಗೆ ಗಂಡ ಹೆಂಡತಿ ತಮ್ಮದೇ ರೀತಿಯಲ್ಲಿ ಬೆಳೆಯಲು ಶುರು ಮಾಡಿದ್ರು. ಆದ್ರೆ ಹೀಗಿರುವಾಗ್ಲೇ ಆವತ್ತೊಂದು ದಿನ ಗಂಡ ಮಿಸ್ಸಿಂಗ್ ಆಗುತ್ತಾನೆ. ಅವನ ಡೆಡ್ ಬಾಡಿ ನೈಸ್ ರೋಡ್ ಬಳಿ ಸಿಕ್ಕಿತ್ತು. ಇದೇ ಕೇಸ್ನ ತನಿಖೆಗಿಳಿದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಕ್ಲೂ ಸಿಕ್ಕಿರಲಿಲ್ಲ. ಆದ್ರೆ ಬೆಂಬಿಡದೇ ತನಿಖೆ ನಡೆಸಿದ ಪೊಲೀಸರಿಗೆ ಒಂದು ಶಾಕಿಂಗ್ ನ್ಯೂಸ್ ಸಿಕ್ಕಿತ್ತು. ಬೆಂಗಳೂರಿನಲ್ಲಿ ಮಿಲ್ಟ್ರಿ ಹೋಟೆಲ್ ಆರಂಭಿಸಿದ ಅರುಣ್ ಕುಮಾರ್ ಅಲ್ಲಿ ಹೆಣವಾಗಿ ಹೋಗಿದ್ದ. ಪೊಲೀಸರು ಅರುಣನ ಫೋನ್ ಕಾಲ್ ಡಿಟೇಲ್ಸ್ ತೆಗೆದ್ರು. ಕೊನೆಯದಾಗಿ ಅವನಿಗೆ ಕಾಲ್ ಮಾಡಿದವರು ಅನ್ನೋದನ್ನ ನೋಡಿದ್ರು.. ಆಗಲೇ ನೋಡಿ ಕೊಲೆಗಾರ ತಗ್ಲಾಕಿಕೊಳ್ಳೋದು. ಗಣೇಶ ಮತ್ತು ಅವನ ಮೂವರು ಸ್ನೇಹಿತರು ಸೇರಿ ಅರುಣನ ಕಥೆ ಮುಗಿಸಿದ್ರು. ಆದ್ರೆ ಯಾಕೆ ಕೊಲೆ ಮಾಡಿದೆ ಅಂದಾಗ ಅವನು ಕೊಟ್ಟ ಮಾಹಿತಿ ಕೇಳಿ ಪೊಲೀಸರೇ ಶಾಕ್ ಆಗಿದ್ರು. ಯಾಕಂದ್ರೆ ಅರುಣನ ಕೊಲೆಗೆ ಸ್ಕೆಚ್ ಹಾಕಿದವರು ಒಂದು ಲೇಡಿ.. ಆ ಲೇಡಿ ಬೇರೆ ಯಾರು ಅಲ್ಲ ಅರುಣನ ಹೆಂಡತಿನೇ. ಅಷ್ಟಕ್ಕೂ ಅರುಣನ ಹೆಂಡತಿ ರಂಜಿತಾ ಗಂಡನಿಗೇ ಸ್ಕೆಚ್ ಹಾಕಿದ್ದೇಕೆ..? ಎಂದರೆ ಆಕೆ ಗಂಡನಿಗೆ ಸಹಾಯ ಮಾಡೋದು ಬಿಟ್ಟು ಅದೇ ಹೋಟೆಲ್ಗೆ ವಾಟರ್ ಸಪ್ಲೈ ಮಾಡ್ತಿದ್ದವನ ಜೊತೆ ಪ್ರೀತಿಗೆ ಬಿದ್ದುಬಿಟ್ಟಿದ್ಲು. ವಾಟರ್ ಬಾಯ್ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ಲು. ಇನ್ನೂ ಆ ವಾಟರ್ ಬಾಯ್ ಆಕೆಯ ಗಂಡ ಕೇಳಿದಾಗಲೆಲ್ಲಾ ಸಾಲ ಕೊಟ್ಟಿದ್ದ. ಅವನ ಸ್ನೇಹ ಸಂಪಾಧಿಸಿದ್ದ.. ಆದ್ರೆ ಯಾವಾಗ ಹೆಂಡತಿ ಮತ್ತು ಆತನ ಲವ್ವಿಡವ್ವಿ ವಿಷ್ಯ ಗಂಡನಿಗೆ ಗೊತ್ತಾಯ್ತೋ ಆಕೆಗೆ ಬೈದು ಬುದ್ಧಿ ಹೇಳಿದ. ಅಷ್ಟೇ.. ಹೆಂಡತಿಗೆ ಗಂಡ ಬೇಡ ಅಂತೆನ್ನಿಸಿಬಿಡ್ತು. ಹಾಗಾಗಿ ಗಂಡನನ್ನೇ ಮುಗಿಸಲು ಪ್ಲ್ಯಾನ್ ಮಾಡಿದ್ದಾಳೆ.
ಇದನ್ನೂ ವೀಕ್ಷಿಸಿ: ಬಿಎಸ್ವೈ ಪ್ರತಿಭಟನೆ ಮಾಡಿದ್ರೆ ಒಳ್ಳೆಯದೇ, ಅವರು ನಮ್ಮ ಯೋಜನೆಗಳ ಪ್ರಚಾರ ಮಾಡುತ್ತಿದ್ದಾರೆ: ಡಿಕೆಶಿ