Watch: ಮುಡಾ ಕೇಸಿನ ಕಂಪ್ಲೀಟ್ ಕಹಾನಿ ತೆರೆದಿಡಲಿದೆ ಇಡಿ;  ಸಿದ್ದು ಸುತ್ತ- ಇ.ಡಿ ಹುತ್ತ

Watch: ಮುಡಾ ಕೇಸಿನ ಕಂಪ್ಲೀಟ್ ಕಹಾನಿ ತೆರೆದಿಡಲಿದೆ ಇಡಿ; ಸಿದ್ದು ಸುತ್ತ- ಇ.ಡಿ ಹುತ್ತ

Published : Oct 29, 2024, 04:32 PM IST

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕೇಸಿನಲ್ಲಿ ಇ.ಡಿ ದಾಳಿ ಮುಂದುವರೆದಿದ್ದು, ಮುಂದಿನ ಗುರಿ ಯಾರೆಂಬ ಪ್ರಶ್ನೆ ಎದ್ದಿದೆ. ಭೂ ಮಾಲೀಕರಿಂದ ಸಿಎಂ ಆಪ್ತರವರೆಗೂ ವಿಚಾರಣೆ ನಡೆಸಲಾಗುತ್ತಿದ್ದು, ಇ.ಡಿ ಜಾಲಕ್ಕೆ ಇನ್ನೂ ಯಾರು ಸಿಲುಕಬಹುದೆಂಬ ಚರ್ಚೆಗಳು ನಡೆಯುತ್ತಿವೆ.

ಬೆಂಗಳೂರು (ಅ.29): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕೇಸಿನಲ್ಲಿ ಇ.ಡಿ ದಾಳಿ, ವಿಚಾರಣೆ ನಡೆಸಿದಾಗಲೆಲ್ಲಾ ಮತ್ತೆ ಮತ್ತೆ ಎದ್ದು ಕೂರೋ ಪ್ರಶ್ನೆಯಿದು. ಮುಂದೆ ಯಾರು? ಯಾರ ಮನೆಗೆ, ಯಾವಾಗ ಇ.ಡಿ ಲಗ್ಗೆ ಇಡುತ್ತೋ ಗೊತ್ತಿಲ್ಲ. ದೂರು ಕೊಟ್ಟವರೂ ಆಯ್ತು, ಅಧಿಕಾರಿಗಳೂ ಆಯ್ತು. ಇ.ಡಿ ಇಡ್ತಿರೋ ಒಂದೊಂದು ಹೆಜ್ಜೆಯ ಗುರಿ ಏನು? ಸಿದ್ದರಾಮಯ್ಯ ಬುಡಕ್ಕೆ ಬಂದು ಬಿಡುತ್ತಾ ಇ.ಡಿ ಬೆಂಕಿ. ಸಿಎಂ ಆಪ್ತರ ಕೋಟೆಗೆ ಎಂಟ್ರಿ ಕೊಟ್ಟಿರೋ ಇ.ಡಿ ಯ ಮುಂದಿನ ಭೇಟೆ ಯಾರು? ಜಾರಿ ನಿರ್ದೇಶನಾಲಯದ ಜಾಲಕ್ಕೆ ಇನ್ನೂ ಯಾರ್ಯಾರು ಸಿಲುಕಿಕೊಳ್ಳೋರಿದ್ದಾರೆ? ಇದೇ ಈ ಹೊತ್ತಿನ ವಿಶೇಷ ಸಿದ್ದು ಸುತ್ತ..ಇ.ಡಿ ಹುತ್ತ..

ಇ.ಡಿ ಯಾರನ್ನೂ ಬಿಡ್ತಿಲ್ಲ. ಭೂ ಮಾಲೀಕ ದೇವರಾಜ್ ವಿಚಾರಣೆ ನಡೆದಿದ್ದರೆ, ಸಿಎಂ ಪರಮಾಪ್ತನ ಮನೆ ಬಾಗಿಲನ್ನೂ ಇ.ಡಿ ತಟ್ಟಿದೆ. ಮುಡಾ ಕೇಸಿನ ಜಾಲ ಹಿಡಿದು ಹೊರಟಿರೋ ಜಾರಿ ನಿರ್ದೇಶನಾಲಯದ ಕಣ್ಣು ನೆಕ್ಸ್ಟ್ ಯಾರ ಮೇಲೆ ಬೀಳಬಹುದು ಎನ್ನುವುದು ರೋಚಕತೆ ಪಡೆದುಕೊಂಡಿದೆ. ಜೊತೆಗೆ, ದೂರು ಕೊಟ್ಟವರಾಯ್ತು, ಅಧಿಕಾರಿಗಳು ಆಯ್ತು. ಮುಂದ್ಯಾರು ಅನ್ನೋ ಪ್ರಶ್ನೆಗೆ ಸೋಮವಾರ ಇ.ಡಿ ಉತ್ತರ ಕೊಟ್ಟಿದೆ. ಮುಡಾ ಹಗರಣದ ಜಾಲದಲ್ಲಿ ಜಮೀನು ಕೊಟ್ಟವರ ಪಾತ್ರವೇನು ಅಂತ ತನಿಖೆ ಮಾಡಿದೆ. ಜೊತೆಗೆ, ಸಿಎಂ ಸಿದ್ದರಾಮಯ್ಯ ಅವರ ಪರಮಾಪ್ತನ ಮನೆಗೂ ಇ.ಡಿ ಎಂಟ್ರಿಕೊಟ್ಟಿದೆ.

ಮುಡಾ ಕೇಸಿನ ಕಂಪ್ಲೀಟ್ ಕಹಾನಿ ತೆರೆದಿಡೋಕೆ ಇ.ಡಿ ಹೊರಟಂತಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡು ಬಳಿಕ ಅನೇಕರ ಮನೆ ಬಾಗಿಲು ಬಡಿದಿದೆ ಇ.ಡಿ. ಜೊತೆಗೆ ಕೆಲವರನ್ನ ತನ್ನತ್ತಲೇ ಕರೆಸಿಕೊಂಡಿದೆ. ಹೀಗಾಗಿ, ಮುಂದೆ ಇ.ಡಿ ಯಾರ ಮನೆಯಂಗಳಕ್ಕೆ ಹೋಗ್ಬೋದು.. ಅಥವಾ ಯಾರನ್ನ ತನ್ನತ್ತ ಕರೆಸಿಕೊಳ್ಳಬಹುದು ಅನ್ನೋದು ಕೆಲವರಿಗೆ ಕುತೂಹಲವಾದ್ರೆ, ಇನ್ನೂ ಕೆಲವರಿಗೆ ಇದು ಆತಂಕ ತರ್ತಿದೆ. ಅದ್ರಲ್ಲೂ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ದಿನ ದಿನವೂ ಟೆನ್ಷನ್ ಜಾಸ್ತಿಯಾಗುತ್ತಿದೆ.

04:54ಮಂತ್ರಾಲಯಕ್ಕೆ ಭೇಟಿ ಕೊಟ್ಟು ರಾಯರ ಮುಂದೆ ಕಣ್ಣೀರಿಟ್ಟ ಪವಿತ್ರಾ ಗೌಡ! ಪಶ್ಚತ್ತಾಪ ಪಟ್ರಾ?
02:03ಪಾಕಿಸ್ತಾನಕ್ಕೆ ಮತ್ತೆ ವಾರ್ನಿಂಗ್: ಭಾರತೀಯ ನೌಕಾಪಡೆಯಿಂದ ವಿಡಿಯೋ ರಿಲೀಸ್!
02:37ದಾಳಿಯಾಗಿಲ್ಲ ಎಂದ ಪಾಕಿಸ್ತಾನ ಮುಖವಾಡ ಬಯಲು: ರಾವಲ್ಪಿಂಡಿ ಏರ್‌ಬೇಸ್‌ ರಿಪೇರಿಗೆ ಟೆಂಡರ್!
08:27Bengaluru: ಸಿಗರೇಟ್‌ ವಿಚಾರಕ್ಕೆ ಗಲಾಟೆ: ಕಾರ್‌ ಗುದ್ದಿ ಯುವಕನ ಮರ್ಡರ್!
04:02ಶಿವಮೊಗ್ಗ: ಸಾಗರದಲ್ಲಿ ಹೆಚ್ಚಿದ ಪುಡಿರೌಡಿಗಳ ಅಟ್ಟಹಾಸ, ಜನ ಹೈರಾಣು
27:29ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?
03:51ಪುಂಡರ ಸಹವಾಸ ಕಟ್​, ಅಮ್ಮಾವ್ರ ಗಂಡ ದರ್ಶನ್! ಹೆಂಡತಿ ಬೆಂಗಾವಲಿನಲ್ಲಿ ದಾಸನ ದಿನಚರಿ ಹೇಗಿದೆ?
31:34ಒಂದೇ ಏಟಿಗೆ ಎರಡು ದೇಶ ವಿಲವಿಲ! ಪಾಕ್​​ಗೆ ಹೊಡೆತ.. ಚೀನಾ ಮಾರ್ಕೆಟ್​ ಕುಸಿತ!
06:16Sonu Nigam: ಜೇನುದನಿ.. ಮನಸು ವಿಷ.. ಕನ್ನಡದ ಮೇಲೆ ಯಾಕೆ ಇಷ್ಟು ದ್ವೇಷ?
17:29ಸಿಎಂ ಸಿದ್ದರಾಮಯ್ಯ ಪದೇ ಪದೇ ತಾಳ್ಮೆ ಕಳೆದುಕೊಳ್ಳೋದ್ಯಾಕೆ? ಸಿದ್ದು ಸಿಟ್ಟಿನ ಗುಟ್ಟು!
Read more