ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸಿದರೆ ಎಚ್ಚರ, 7 ರಾಜ್ಯದಲ್ಲಿ ಸಂಪೂರ್ಣ ನಿಷೇಧ!

First Published | Oct 29, 2024, 4:36 PM IST

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸೋ ಬಗ್ಗೆ ನಿಯಮಗಳೇನು?  ಕೆಲ ರಾಜ್ಯಗಳಲ್ಲಿ ಗ್ರೀನ್ ಪಟಾಕಿಗಳಿಗೆ ಮಾತ್ರ ಅವಕಾಶ. ಆದರೆ 7 ರಾಜ್ಯಗಳಲ್ಲಿ ಪಟಾಕಿ ಸಂಪೂರ್ಣ ನಿಷೇಧಿಸಲಾಗಿದೆ. ಆ ರಾಜ್ಯಗಳು ಯಾವುದು, ಕರ್ನಾಟಕದಲ್ಲಿನ ಪರಿಸ್ಥಿತಿ ಏನು? 

ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದೆ. ದೇಶಾದ್ಯಂತ ಸಡಗರ ತುಂಬಿದೆ. ಆದರೆ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಲವು ರಾಜ್ಯಗಳು ಪಟಾಕಿ ಸಿಡಿಸುವುದು ನಿಷೇಧಿಸಿದೆ. ಕರ್ನಾಟಕದಲ್ಲಿ ಗ್ರೀನ್ ಪಟಾಕಿಗೆ ಮಾತ್ರ ಅವಕಾಶ ನೀಡಲಾಗಿದೆ. ದಿನದಲ್ಲಿ 2 ಗಂಟೆ ಸಯಮ ಮಾತ್ರ ನೀಡಲಾಗಿದೆ. ಆದರೆ  ತಮಿಳುನಾಡು, ಪಂಜಾಬ್, ಹರಿಯಾಣ ಮತ್ತು ದೆಹಲಿಯಂತಹ ಹಲವು ಕಡೆಗಳಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಹೀಗಾಗಿ ಈ ಸ್ಥಳಗಳಲ್ಲಿ ಪಟಾಕಿಗಳ ಬಳಕೆಗೆ ನಿಷೇಧ ಹೇರಲಾಗಿದೆ. ಏಳು ರಾಜ್ಯಗಳಲ್ಲಿ ದೀಪಾವಳಿಗೆ ಗ್ರೀನ್ ಪಟಾಕಿಗಳನ್ನು ಮಾತ್ರ ಬಳಸಲು ಅವಕಾಶವಿದೆ.

ದೆಹಲಿಯಲ್ಲಿ ಚಳಿಗಾಲ ಶುರುವಾಗುತ್ತಿದ್ದಂತೆ ವಾಯು ಮಾಲಿನ್ಯ ಕೂಡಾ ಹೆಚ್ಚಾಗ್ತಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಪಟಾಕಿಗಳ ಆನ್‌ಲೈನ್ ಡೆಲಿವರಿ, ತಯಾರಿಕೆ, ಸಂಗ್ರಹ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿಷೇಧ ಜನವರಿ 1, 2025 ರವರೆಗೆ ಜಾರಿಯಲ್ಲಿರುತ್ತದೆ. ದೀಪಾವಳಿಗೆ ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿರುವ ಕಾರಣ ಪಟಾಕಿ ನಿಷೇಧ ನೀತಿ ಕಟ್ಟು ನಿಟ್ಟಾಗಿದೆ. ಇನ್ನು ಹೊಸ ವರ್ಷದಲ್ಲೂ ಪಟಾಕಿ ಸಿಡಿಸುವ ಕಾರಣ ಪಟಾಕಿ ನಿಷೇಧ ಹೊಸ ವರ್ಷದ ವರೆಗೆ ಜಾರಿಯಲ್ಲಿರಲಿದೆ. 

Tap to resize

ತಮಿಳುನಾಡಿನಲ್ಲಿ ದೀಪಾವಳಿಗೆ ಪಟಾಕಿ ಸಿಡಿಸಲು ಬೆಳಿಗ್ಗೆ 6 ರಿಂದ 7 ಮತ್ತು ಸಂಜೆ 7 ರಿಂದ 8 ರವರೆಗೆ ಸಮಯ ನಿಗದಿಪಡಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಜನರಿಗೆ ಜಾಗೃತಿ ಮೂಡಿಸುತ್ತಿದೆ. ಇತ್ತ ತಮಿಳುನಾಡಿನಲ್ಲಿ ಅತೀ ಹೆಟ್ಟಿನ ಪಟಾಕಿ ಫ್ಯಾಕ್ಟರಿಗಳಿಗೆ ಸಮಸ್ಯೆ ಎದುರಾಗಿದೆ. ಆದರೆ ಪರಿಸರ ಮಾಲಿನ್ಯದಿಂದಾಗಿ ತಮಿಳುನಾಡಿನಲ್ಲೂ ನಿಯಮ ಜಾರಿಯಾಗಿದೆ. 

ಬಿಹಾರದಲ್ಲೂ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ. ಪಾಟ್ನಾ, ಗಯಾ, ಮುಜಾಫರ್‌ಪುರ ಮತ್ತು ಹಾಜಿಪುರದಲ್ಲಿ ಗ್ರೀನ್ ಪಟಾಕಿಗಳನ್ನೂ ಸೇರಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಮಾಲಿನ್ಯ ಮಾತ್ರವಲ್ಲ ಪಟಾಕಿ ಸಿಡಿಸುವ ವೇಳೆ ಸಂಭವಿಸುವ ಅವಘಡ ಕೂಡ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ತರಲಿದೆ. 

ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲೂ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ. ಗ್ರೀನ್ ಪಟಾಕಿಗಳು ಸಾಮಾನ್ಯ ಪಟಾಕಿಗಳಿಗಿಂತ 30% ಕಡಿಮೆ ಮಾಲಿನ್ಯ ಉಂಟುಮಾಡುತ್ತವೆ. ಕೋಲ್ಕತ್ತಾ, ಮುಂಬೈ ನಗರದಲ್ಲಿ ಧೂಳು ಮಿಶ್ರಿತ ವಾತಾವರಣ ಹೊಂದಿದೆ. ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಹೀಗಾಗಿ ಪಟಾಕಿ ನಿಷೇಧ ಅತ್ಯಗತ್ಯವಾಗಿದೆ. 

ಪಂಜಾಬ್‌ನಲ್ಲೂ ಕಠಿಣ ನಿಯಮಗಳಿವೆ. ದೀಪಾವಳಿ ಮತ್ತು ಇತರ ಹಬ್ಬಗಳಲ್ಲಿ ಪಟಾಕಿ ಸಿಡಿಸಲು ಕೆಲವು ಗಂಟೆಗಳ ಕಾಲ ಮಾತ್ರ ಅವಕಾಶವಿದೆ. ಆದರೆ ಗ್ರೀನ್ ಪಟಾಕಿಗಳನ್ನು ಮಾತ್ರ ಬಳಸಬೇಕು. ಗ್ರೀನ್ ಪಟಾಕಿ ಸಂಪೂರ್ಣವಾಗಿ ವಾಯುಮಾಲಿನ್ಯಕ್ಕೆ ಉತ್ತರವಲ್ಲ. ಆದರೆ ಆಯಾ ರಾಜ್ಯಗಳ ಪರಿಸ್ಥಿತಿ ಅವಲೋಕಿಸಿ, ಸರ್ಕಾರಗಳು ಗ್ರೀನ್ ಪಟಾಕಿಗೆ ಅವಕಾಶ ನೀಡಿದೆ. ಹರಿಯಾಣದಲ್ಲಿ, ವಿಶೇಷವಾಗಿ ಗುರುಗ್ರಾಮದಲ್ಲಿ, ದೆಹಲಿಯಂತೆಯೇ ನಿಯಮಗಳಿವೆ. ದೀಪಾವಳಿ ಮತ್ತು ಗುರುಪೂರ್ಣಿಮೆಯಂದು ಕೆಲವು ಗಂಟೆಗಳ ಕಾಲ ಗ್ರೀನ್ ಪಟಾಕಿ ಸಿಡಿಸಬಹುದು 

Latest Videos

click me!