ಗೋಳು ಮುಗೀತು, ಇನ್ಮುಂದೆ ಬೆಳಗಲಿದೆ ಈ ರಾಶಿಯವರ ಬಾಳು

By Roopa Hegde  |  First Published Oct 29, 2024, 4:46 PM IST

ದೀಪಾವಳಿಯ ಶುಭ ಸಮಯದಲ್ಲಿ ಕೆಲ ರಾಶಿಯವರ ಅದೃಷ್ಟ ಬದಲಾಗಲಿದೆ. ಇಷ್ಟು ದಿನ ಕಷ್ಟಪಟ್ಟಿದ್ದ ಆರು ರಾಶಿಗಳು ಸ್ವಲ್ಪ ನೆಮ್ಮದಿ ಕಾಣಲಿವೆ. ವೃತ್ತಿ, ವೈಯಕ್ತಿಕ ಜೀವನದಲ್ಲಿ ಬೆಳಕು ಮೂಡಲಿದೆ. 
 


ದೀಪಾವಳಿ ಸಂಭ್ರಮ (Diwali celebration) ಶುರುವಾಗಿದೆ. ಧನತ್ರಯೋದಶಿ ಖರೀದಿಯಲ್ಲಿ ಜನರಿದ್ದಾರೆ. ಹಬ್ಬ (festival) ದ ಸಮಯದಲ್ಲಿ ಅದೃಷ್ಟ ಕೈ ಹಿಡಿದ್ರೆ ಹಬ್ಬದ ಸಂಭ್ರಮ ಡಬಲ್ ಆಗುತ್ತೆ.  ನಮ್ಮ ರಾಶಿಯಲ್ಲಿನ ಬದಲಾವಣೆ ನಮ್ಮ ಜೀವನದ ಸುಖ – ಸುಃಖಕ್ಕೆ ಕಾರಣವಾಗುತ್ತದೆ. ಇಷ್ಟು ದಿನ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದ ಕೆಲ ರಾಶಿಯವರ ಅದೃಷ್ಟ ಇಂದಿನಿಂದ ಬದಲಾಗ್ತಿದೆ.  ಬರುವ ನವೆಂಬರ್ 5ರವರೆಗೆ ಆರು ರಾಶಿಯ ಜನರು ಜಾಕ್ ಪಾಟ್ ಹೊಡೆಯಲಿದ್ದಾರೆ. ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ಇಷ್ಟು ದಿನ ಪಟ್ಟ ಕಷ್ಟಕ್ಕೆ ಮುಕ್ತಿ ಸಿಗಲಿದೆ. ಸಂತೋಷ, ನೆಮ್ಮದಿ ಮನೆ ಬಾಗಿಲಿನಿಂದ ಒಳಗೆ ಬರಲಿದೆ.  

ಹಬ್ಬದ ಶುಭ ಸಂದರ್ಭದಲ್ಲಿ ಈ ರಾಶಿಗಳಿಗೆ ಲಾಭ : 

Tap to resize

Latest Videos

undefined

ವೃಷಭ ಮತ್ತು ಕುಂಭ (Taurus and Aquarius) : ದೀಪಾವಳಿ ವೃಷಭ ಮತ್ತು ಕುಂಭ ರಾಶಿಯವರ ಜೀವನದಲ್ಲಿ ಬೆಳಕು ತರಲಿದೆ. ಉನ್ನತ ಅಧಿಕಾರಿಗಳ ಜೊತೆ ನಿಮ್ಮ ಬಾಂಧವ್ಯ ಗಟ್ಟಿಯಾಗಲಿದೆ. ಪ್ರಾಮಾಣಿಕವಾಗಿ ಅವರು ನಿಮ್ಮ ಜೊತೆಗಿದ್ದು, ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡಲಿದ್ದಾರೆ. ಈ ಎರಡೂ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭ ಆಗಲಿದೆ. ನಿರುದ್ಯೋಗಿಗಳ ಬಾಳಲ್ಲಿ ಬಣ್ಣದ ಪಟಾಕಿ ಸಿಡಿಯಲಿದೆ. ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ಶಿಕ್ಷಣ ಕ್ಷೇತ್ರದ ಜೊತೆ ಸಂಬಂಧ ಹೊಂದಿರುವ ಜನರಿಗೆ ಅಪೇಕ್ಷಿತ ಯಶಸ್ಸು ಸಿಗಲಿದೆ. ವ್ಯಾಪಾರಸ್ಥರಿಗೆ ಹೊಸ ಆಲೋಚನೆ ಮಾಡಲು, ಹೊಸ ಪ್ರಯೋಗಗಳನ್ನು ಮಾಡಲು ಇದು ಸೂಕ್ತವಾದ ಸಮಯ. ಅತಿಥಿಗಳ ಆಗಮ ನಿಮಗೆ ಆನಂದ ನೀಡಲಿದೆ. ಅವರಿಂದ ಲಾಭವಾಗಲಿದೆ. ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ಸಿಗಲಿದ್ದು, ಇದು ಮುಂದಿನ ಭವಿಷ್ಯಕ್ಕೆ ಅಡಿಪಾಯವಾಗಲಿದೆ.

Video: ಉತ್ತರ ಭಾರತೀಯರ ದಿವಾಳಿ Vs ಕನ್ನಡ ದೀಪಾವಳಿ ವ್ಯತ್ಯಾಸ ತಿಳಿಸಿದ ವಿಕ್ಕಿಪೀಡಿಯಾ

ತುಲಾ ಮತ್ತು  ಸಿಂಹ (Libra and Leo) :  ತುಲಾ ಹಾಗೂ ಸಿಂಹ ರಾಶಿಯವರು ಕೂಡ ಈ ದಿನಗಳಲ್ಲಿ ಸಂತೋಷ ಕಾಣಲಿದ್ದಾರೆ. ಅವರ ಎಲ್ಲ ಕಷ್ಟಗಳು ದೂರವಾಗಲಿವೆ. ಉತ್ತಮ ಜಾಗದಲ್ಲಿ ಹಣ ಹೂಡಲು ಈಗ ಸೂಕ್ತ ಸಮಯವಾಗಿದೆ. ಹಾಗೆಯೇ ವ್ಯವಹಾರದಲ್ಲಿ ಮೊದಲಿಗಿಂತ ಹೆಚ್ಚಿನ ಲಾಭ ನಿಮ್ಮದಾಗಲಿದೆ. ಕಚೇರಿಯಲ್ಲಿನ ವಾತಾವರಣ ನಿಮಗೆ ಅನುಕೂಲಕರವಾಗಿದ್ದು, ಬಡ್ತಿ ಸಿಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ಇದ್ದ ಸಮಸ್ಯೆಗಳು ಬಗೆಹರಿಯಲಿವೆ. ಆದಾಯದ ಹೊಸ ಮೂಲಗಳು ನಿಮಗೆ ಸಿಗಲಿವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವ ಅಥವಾ ಬರೆಯಲಿರುವ ಅಭ್ಯರ್ಥಿಗಳಿಗೆ ಇದು ಶುಭ ಸಮಯ. ವಿದ್ಯಾರ್ಥಿಗಳು ತಮ್ಮ ಸ್ಪರ್ಧೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಆಗಮನವಾಗಲಿದೆ. ಕುಟುಂಬಸ್ಥರ ಮಧ್ಯೆ ಸಂತೋಷ ಮನೆ ಮಾಡಲಿದೆ.

ಈ ಗ್ರಾಮದ ಜನರು ದೀಪಾವಳಿ ಆಚರಿಸೊಲ್ಲ, ಪಟಾಕಿ ಮಾತ್ರ ಸಿಡಿಸ್ತಾರೆ!

ಮೇಷ, ವೃಶ್ಚಿಕ (Aries, Scorpio) : ಅಕ್ಟೋಬರ್ 29ರಿಂದ ನವೆಂಬರ್ 5ರವರೆಗೆ ಮೇಷ ಮತ್ತು ವೃಶ್ಚಿಕ ರಾಶಿಯವರು ಕೂಡ ಆನಂದದ ಜೀವನ ನಡೆಸಲಿದ್ದಾರೆ. ಇದು ಅವರಿಗೆ ಅತ್ಯಂತ ಶುಭ ಸಮಯ. ನಿಮ್ಮ ಯೋಜಿತ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಕೌಟುಂಬಿಕ ವಾತಾವರಣ ಉತ್ತಮವಾಗಿರಲಿದೆ. ಕುಟುಂಬಸ್ಥರ ಮಧ್ಯೆ ಇದ್ದ ಮನಸ್ತಾಪ ಕಡಿಮೆ ಆಗಲಿದೆ. ಶತ್ರುಗಳನ್ನು ಜಯಿಸಿ, ನೆಮ್ಮದಿ ಕಾಣಲಿದ್ದೀರಿ. ಸಾಲ ಮರುಪಾವತಿ ಮಾಡುವಲ್ಲಿ ನೀವು ಯಶಸ್ವಿಯಾಗಲಿದ್ದು, ನಿಮ್ಮ ಕೆಲಸದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಹೆಚ್ಚಿದೆ. ಲಾಟರಿ ಹೊಡೆದಂತೆ ನೀವು ಒಂದೇ ರಾತ್ರಿ ಮಿಲಿಯನೇರ್ ಆಗುವ ಸಾಧ್ಯತೆ ದಟ್ಟವಾಗಿದೆ. ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಹೊಸ ಆಲೋಚನೆಗೆ ಇದು ಸೂಕ್ತ ಸಮಯವಾಗಿದ್ದು, ಬದಲಾವಣೆ ನಿಮ್ಮ ಕೈ ಹಿಡಿಯಲಿದೆ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಮರೆಯಬೇಡಿ.  

click me!