ಹೆಣ್ಣಿನ ವಿಷ್ಯಕ್ಕೆ ಬಿದ್ದವು 2 ಹೆಣ, ನಗರಸಭೆ ಆಧ್ಯಕ್ಷೆಯ ಗಂಡ-ಮೈದುನಾ ಕೊಲೆಯ ಹಿಂದಿನ ಕಥೆ

Jul 13, 2022, 9:35 PM IST

ಕಲಬುರಗಿ, (ಜುಲೈ.13): ಅದು ರಾಜಕೀಯ ಬ್ಯಾಕ್ಗ್ರೌಂಡ್ ಇರುವ ಕುಟುಂಬ. ಚಿಕ್ಕಪ್ಪ ರಾಜ್ಯದ ಮಾಜಿ ಸಚಿವರು. ಕಾಂಗ್ರೆಸ್ನಲ್ಲಿ ಆ ಭಾಗದ ನಿಷ್ಟಾವಂತ ಕಾರ್ಯಕರ್ತರು. ಆದ್ರೆ ಇಂತಹ ಫ್ಯಾಮಿಲಿಯಲ್ಲಿ ಎರಡೆರಡು ಮರ್ಡರ್ ನಡೆದುಹೋಗಿದೆ. 2 ವರ್ಷದ ಹಿಂದೆ ಅಣ್ಣ ನಕೊಲೆಯಾದ್ರೆ ಇಂದು ಆತನ ತಮ್ಮ. ಆದ್ರೆ ಅಣ್ಣ ತಮ್ಮಂದಿರು ಕೊಲೆಯಾಗಿದ್ದು ಮಾತ್ರ ಒಂದೇ ಕಅರಣಕ್ಕೆ. ಅದು ಹೆಣ್ಣು. ತಮ್ಮ ಮನೆಯ ಹೆಣ್ಣು ಮಗಳ ಮೇಲೆ ಕಣ್ಣು ಹಾಕಿದ್ದ ಅಂತ ಕೀಚಕನಿಗೆ ವಾರ್ನ್ ಮಾಡಿದಷ್ಟೇ.. ಆ ಮನೆಯ ಇಬ್ಬರ ಪ್ರಾಣವನ್ನೇ ಕಳೆದುಕೊಳ್ಳುವಂತಾಯ್ತು. 

ಹೆಂಡ್ತಿನ ನೋಡ್ಕೊಳಕೆ ಆಗಲ್ಲಾ ಅಂದ್ಮೇಲೆ ಮದ್ವೆ ಯಾಕೆ? ಕಮೆಂಟ್ ಮಾಡಿದ್ದ ಸ್ನೇಹಿತನ ಹತ್ಯೆ

ರಾಜಕೀಯದಲ್ಲಿ ಒಳ್ಳೆ ಹೆಸರು ಮಾಡಿದ್ದ ಗಿರೀಶನನ್ನ ಕೊಂದಿದ್ಯಾರು..? ಅದಕ್ಕೆ ಇದ್ದ ಮುಖ್ಯ ಕಾರಣವಾದ್ರೂ ಏನು..? 2 ವರ್ಷದ ಹಿಂದೆ ಗಿರೀಶನ ಮರ್ಡರ್ ಆಯ್ತಲ್ಲ... ಆ ಕೊಲೆಯಾಕಾಯ್ತು..? ಅಣ್ಣ ತಮ್ಮಂದಿರನ್ನ ಕೊಲ್ಲುವಷ್ಟು ದ್ವೇಷ ಯಾರಿಗಿತ್ತು..? ಹೀಗೆ ಹಾಲಿ ನಗರ ಸಭೆ ಆಧ್ಯಕ್ಷೆಯ ಗಂಡ ಮತ್ತು ಮೈದುನಾ ಕೊಲೆಯ ಹಿಂದಿನ ಕಥೆಯೇ ಇವತ್ತಿನ ಎಫ್.ಐ.ಆರ್...