ಐಪಿಎಲ್ 2025 ಹರಾಜು ಹೊಸ ಹೊಸ ದಾಖಲೆ ಸೃಷ್ಟಿಸುತ್ತಿದೆ. ಈಗಷ್ಟೇ ಶ್ರೇಯಸ್ ಅಯ್ಯರ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿದ್ದರು. ಆದರೆ ಈ ದಾಖಲೆಯನ್ನು ರಿಷಬ್ ಪಂತ್ ಮುರಿದಿದ್ದಾರೆ.
ಜೆಡ್ಡಾ(ನ.25) ಐಪಿಎಲ್ 2025ರ ಹರಾಜು ಹಲವು ಮಹತ್ವದ ಬೆಳವಣಿಗಿಗೆ ಸಾಕ್ಷಿಯಾಗಿದೆ. ಈ ಬಾರಿ ಹಲವು ಹೊಸ ದಾಖಲೆ ಸೃಷ್ಟಿಯಾಗಿದೆ. ಕೆಲವೇ ಸೆಕೆಂಡ್‌ಗಳು ಈ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆಯಲಾಗುತ್ತಿದೆ. ಶ್ರೇಯಸ್ ಅಯ್ಯರ್ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಬಾರಿಯ ಹರಾಜಿನಲ್ಲಿ ಅಯ್ಯರ್ 26.75 ಕೋಟಿಗೆ ಹರಾಜಾಗಿದ್ದರು. ಆದರೆ ಈ ದಾಖಲೆಯನ್ನು ಕೆಲವೇ ನಿಮಿಷಗಳಲ್ಲಿ ರಿಷಬ್ ಪಂತ್ ಪುಡಿ ಮಾಡಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ಬರೋಬ್ಬರಿ 27 ಕೋಟಿ ರೂಪಾಯಿ ನೀಡಿ ರಿಷಬ್ ಪಂತ್ ಖರೀದಿಸಿದೆ.
ಇದು ಐಪಿಎಲ್ ಇತಿಹಾಸದ ಅತೀ ದುಬಾರಿ ಖರೀದಿ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಎರಡು ಖರೀದಿ ಇತಿಹಾಸದಲ್ಲೇ ನಡೆದ ಅತೀ ದುಬಾರಿ ಖರೀದಿಯಾಗಿದೆ. 2024ರ ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗಿಯನ್ನು ಕೋಲ್ಕತಾ ನೈಟ್ ರೈಡರ್ಸ್ 24.75 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಇದು ಗರಿಷ್ಠ ಖರೀದಿ ದಾಖಲೆ ಬರೆದಿತ್ತು. ಆದರೆ ಈ ಬಾರಿ ರಿಷಬ್ ಪಂತ್ 27 ಕೋಟಿ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
10 ಕೋಟಿ ವರೆಗೆ ಬಿಡ್ ಮಾಡಿ ಕೈಬಿಟ್ಟ RCB, ದುಬಾರಿ ಮೊತ್ತಕ್ಕೆ ರಬಾಡ ಗುಜರಾತ್ ಪಾಲು!
ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲ್ ಆದ ಕ್ರಿಕೆಟಿಗರು
ರಿಷಬ್ ಪಂತ್: 27 ಕೋಟಿ ರೂಪಾಯಿ(ಲಖನೌ ಸೂಪರ್ ಜೈಂಟ್ಸ್)
ಶ್ರೇಯಸ್ ಅಯ್ಯರ್: 24.75 ಕೋಟಿ ರೂಪಾಯಿ(ಪಂಜಾಬ್ ಕಿಂಗ್ಸ್)
ಮಿಚೆಲ್ ಸ್ಟಾರ್ಕ್: 24.75 ಕೋಟಿ ರೂಪಾಯಿ(ಕೋಲ್ಕತಾ ನೈಟ್ ರೈಡರ್ಸ್)
ಪ್ಯಾಟ್ ಕಮಿನ್ಸ್: 18.50 ಕೋಟಿ ರೂಪಾಯಿ(ಪಂಜಾಬ್ ಕಿಂಗ್ಸ್)
ಸ್ಯಾಮ್ ಕರನ್: 18 ಕೋಟಿ ರೂಪಾಯಿ(ಪಂಜಾಬ್ ಕಿಂಗ್ಸ್)
ಕ್ಯಾಮರೂನ್ ಗ್ರೀನ್: 17.50 ಕೋಟಿ ರೂಪಾಯಿ( ಮುಂಬೈ ಇಂಡಿಯನ್ಸ್)
ಬೆನ್ ಸ್ಟೋಕ್ಸ್: 16.25 ಕೋಟಿ ರೂಪಾಯಿ( ಚೆನ್ನೈ ಸೂಪರ್ ಕಿಂಗ್ಸ್)
ಕ್ರಿಸ್ ಮೊರಿಸ್: 16.25 ಕೋಟಿ ರೂಪಾಯಿ(ರಾಜಸ್ಥಾನ ರಾಯಲ್ಸ್)
ಯುವರಾಜ್ ಸಿಂಗ್: 16 ಕೋಟಿ ರೂಪಾಯಿ(ಡೆಲ್ಲಿ ಡೇರ್‌ಡೆವಿಲ್ಸ್)
ನಿಕೋಲಸ್ ಪೂರನ್: 16 ಕೋಟಿ ರೂಪಾಯಿ(ಲಖನೌ ಸೂಪರ್ ಜೈಂಟ್ಸ್)
ಐಪಿಎಲ್ ಆಟಗಾರರ ಮೆಗಾ ಹರಾಜಿಗೆ ಒಟ್ಟು 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಬಿಸಿಸಿಐ 574 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿತ್ತು. ಇನ್ನು ಕೊನೆಯ ಕ್ಷಣದಲ್ಲಿ ಜೋಫ್ರಾ ಆರ್ಚರ್ ಸೇರಿದಂತೆ ಮೂವರು ಆಟಗಾರರು ಸೇರ್ಪಡೆಯಾಗಿದ್ದು, ಒಟ್ಟು 577 ಆಟಗಾರರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.