ಚನ್ನಪಟ್ಟಣದಲ್ಲಿ ಬಿಜೆಪಿ ಸಪೋರ್ಟ್ ಮಾಡ್ಲಿಲ್ಲ ಅಂದಿದ್ರೆ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲು ಆಗ್ತಿತ್ತಾ?: ಡಿಕೆಶಿ

By Girish Goudar  |  First Published Nov 24, 2024, 4:37 PM IST

ಬಿಜೆಪಿಯವರು ಸಪೋರ್ಟ್ ಮಾಡಿಲ್ಲ ಅಂದ್ರೆ ನಮ್ಮ ಅಭ್ಯರ್ಥಿ ಗೆಲ್ಲಲು ಆಗ್ತಾ ಇತ್ತಾ?. ಅಶ್ವಥ್ ನಾರಾಯಣ್ ಯೋಗೇಶ್ವರ್ ಗೆಲ್ತಾರೆ ಅಂತ ಗೊತ್ತಿತ್ತು ಅಂತ ಹೇಳಿದ್ದಾರೆ. ಅವರೇನು ದಡ್ಡರಾ.?. ಈ ಜಿಲ್ಲಾ ಮಂತ್ರಿ ಆಗಿದ್ದವ್ರು. ಬಿಜೆಪಿ ಕಾರ್ಯಕರ್ತರೆಲ್ಲ ಯಾರಿಗೆ ವೋಟ್ ಹಾಕಿದ್ದಾರೆ. ಅದೆಲ್ಲವನ್ನೂ ನಾನು ಬಿಚ್ಚಿ ಮಾತನಾಡಲು ಹೋಗಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್  


ಚನ್ನಪಟ್ಟಣ(ನ.24): ಪರೋಕ್ಷವಾಗಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್, ಬಿಜೆಪಿ ಅವರೂ ಸಪೋರ್ಟ್ ಮಾಡಿದ್ದಾರೆ. ಮಾಜಿ ಸಚಿವ ಅಶ್ವಥ್ ನಾರಾಯಣ್ ಏನ್ ಹೇಳಿದ್ರು. ಯೋಗೇಶ್ವರ್ ಗೆಲ್ತಾರೆ ಅಂತ ಗೊತ್ತಿತ್ತು ಅಂತ ಅಶ್ವಥ್ ನಾರಾಯಣ್ ಹೇಳಿಲ್ವಾ?. ಇದರ ಅರ್ಥ ಏನು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. 

ಇಂದು(ಭಾನುವಾರ) ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಮ್ಮ ಮೇಲೆ ಈಗ ಸಾಲ ಇದೆ‌. ಕ್ಷೇತ್ರದ ಜನ ನಮ್ಮ ಪರವಾಗಿ ಇದ್ದಾರೆ. ಈ ಗೆಲುವಿನ ಕ್ರೆಡಿಟ್ ಅಪೂರ್ವ ಸಹೋದರಿಗೆ ಸಲ್ಲಬೇಕಾಗಿಲ್ಲ‌ ಎಂದು ಹೇಳುವ ಮೂಲಕ ಅಪೂರ್ವ ಸಹೋದರು ಎಂದಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಡಿಕೆಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. 

Latest Videos

undefined

ಮೂರೂ ಕ್ಷೇತ್ರ ಸೋತು ಮೈತ್ರಿಕೂಟಕ್ಕೆ ಆಘಾತ: ಜೆಡಿಎಸ್‌, ಬಿಜೆಪಿಗೆ ಇದ್ದ ಅತಿಯಾದ ಭರವಸೆ ಹುಸಿ

ಕ್ಷೇತ್ರ ಖಾಲಿ ಆದಾಗಿಂದ ಸಾಕಷ್ಟು ಪ್ರವಾಸ ಮಾಡಿದ್ವಿ. ಕ್ಷೇತ್ರದ ಜನರಿಗೆ ಏನು ಮಾತು ಕೊಟ್ಟಿದ್ವೊ ಅದನ್ನ ಮೊದಲು ಇಂಪ್ಲಿಮೆಂಟ್ ಮಾಡಬೇಕು. ನಾನು ಯೋಗೇಶ್ವರ್ ಕೂತು ಚರ್ಚೆ ಮಾಡಿ ಇದಕ್ಕೆಲ್ಲ ಚಾಲನೆ ಕೊಡ್ತೇವೆ. ನಮಗೆ ಎಲ್ಲಾ ಪಾರ್ಟಿಯವ್ರೂ ಸಹಾಯ ಮಾಡಿದ್ದಾರೆ. ಕಾಂಗ್ರೆಸ್ ಗೆ ಇದ್ದಿದ್ದು ಕೇವಲ 16 ಸಾವಿರ ವೋಟ್‌, ಈಗ ಜಾಸ್ತಿ ಆಗಿದೆ. ಬಿಜೆಪಿ ಅವ್ರೂ ಸಪೋರ್ಟ್ ಮಾಡಿದ್ದಾರೆ‌. ಬಿಜೆಪಿಯವ್ರು ನಮ್ಮ ಜೊತೆ ಬಂದು ನಿಂತುಕೊಳ್ಳದೇ ಹೋಗಿದ್ರೆ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕೆಲಸ ಮಾಡದೇ ಹೋಗಿದ್ರೆ ಇಷ್ಟು ಮತ ನಮಗೆ ಬರುತ್ತಾ ಇರಲಿಲ್ಲ. ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಡಿಕೆಶಿ ಅಚ್ಚರಿ ಹೇಳಿಕೆ ನೀಡಿದ್ದಾರೆ. 

ಗೆಲುವಿನ ಕ್ರೆಡಿಟ್ ಅಪೂರ್ವ ಸಹೋದರಿಗಂತೂ ಅಲ್ಲ. ನಮ್ಮೆಲ್ಲ ನಾಯಕರು ಮತದಾರಿಗೆ ಸಲ್ಲಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಎಂಬ ಕಾರ್ಯಕರ್ತರ ಕೋರಿಕೆ‌ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆಶಿ, ಅವ್ರು ಮುಖ್ಯಮಂತ್ರಿ ಆಗಬೇಕು ಇವ್ರು ಮುಖ್ಯಮಂತ್ರಿ ಆಗಬೇಕು ಎಂಬುದ ಗೌಣ. ಅವ್ರು ನಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿದ್ದಾರೆ. ನಾವು ಏನು ಗ್ಯಾರಂಟಿ ಮಾತು ಕೊಟ್ಟಿದ್ದೀವಿ. ಕುಮಾರಸ್ವಾಮಿ ಜನರ ಬಗ್ಗೆ ನಂಬಿಕೆ ತೋರಿಸಲಿಲ್ಲ. ಅಭಿಮಾನ ತೋರಿಸಲಿಲ್ಲ. ಅದಕ್ಕಾಗಿ ಜನ ವೋಟ್ ಹಾಕಿಲ್ಲ. ನಾವು ಅವರಿಗೆ ಅಭಿಮಾನ ತೋರಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಸಚಿವ ಸಂಪುಟ ವಿಸ್ತರಣೆ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು, ಇದೆಲ್ಲ ಸುಳ್ಳು ನನ್ನ ಪ್ರಕಾರ ಈಗ ಅದ್ಯಾವುದೂ ಇಲ್ಲ. ಆತರ ಏನಾದ್ರು ಇದ್ರೆ ಸಿಎಂಗೆ ಕೇಳಿನೋಡಿ ಎಂದು ತಿಳಿಸಿದ್ದಾರೆ. 

ಮಾಜಿ ಸಿಎಂ ಪುತ್ರರಿಗೆ ಆಘಾತಕಾರಿ ಸೋಲು: ಅವಿರತ ಶ್ರಮ ವ್ಯರ್ಥ

ಜನ ಬಯಸಿದ್ರೆ ಕಾಂಗ್ರೆಸ್ ಸೇರ್ತೇನೆ ಎಂಬ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು, ಅದು ಅವರ ಅಭಿಪ್ರಾಯ. ಅವರಷ್ಟೆ ಅಲ್ಲ. ಬಹಳ ಜನ ಬಿಜೆಪಿ ಅವ್ರೂ ಇದಾರೆ. ಬಿಜೆಪಿಯವರು ಸಪೋರ್ಟ್ ಮಾಡಿಲ್ಲ ಅಂದ್ರೆ ನಮ್ಮ ಅಭ್ಯರ್ಥಿ ಗೆಲ್ಲಲು ಆಗ್ತಾ ಇತ್ತಾ?. ಅಶ್ವಥ್ ನಾರಾಯಣ್ ಯೋಗೇಶ್ವರ್ ಗೆಲ್ತಾರೆ ಅಂತ ಗೊತ್ತಿತ್ತು ಅಂತ ಹೇಳಿದ್ದಾರೆ. ಅವರೇನು ದಡ್ಡರಾ.?. ಈ ಜಿಲ್ಲಾ ಮಂತ್ರಿ ಆಗಿದ್ದವ್ರು. ಬಿಜೆಪಿ ಕಾರ್ಯಕರ್ತರೆಲ್ಲ ಯಾರಿಗೆ ವೋಟ್ ಹಾಕಿದ್ದಾರೆ. ಅದೆಲ್ಲವನ್ನೂ ನಾನು ಬಿಚ್ಚಿ ಮಾತನಾಡಲು ಹೋಗಲ್ಲ. ತಟ್ಟಿಮರ ಏಟು ಹೆಂಗೆ ಬಿದ್ದಿದ್ಯೋ ನೋಡ್ಕೊಳ್ಳಿ ಎಂದು ಹೇಳಿದ್ದಾರೆ. 

ನಿಖಿಲ್ ಸೋಲಿಗೆ ಹಣಬಲ ಷಡ್ಯಂತ್ರ ಎಂಬ ಜೆಡಿಎಸ್ ನಾಯಕರ ಹೇಳಿಕೆ‌ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಡಿ.ಕೆ.ಸುರೇಶ್ ಸೋತಾಗ ಏನಾಯ್ತು?. ಇದೇ ಯೋಗೇಶ್ವರ್‌ ಬಿಜೆಪಿಯಲ್ಲಿ ಇದ್ರು. ದಳ ಮನೆತನದವ್ರನ್ನ ತಗೊಂಡೋಗಿ ಬಿಜೆಪಿಲಿ ಭಾಮೈದನನ್ನ ನಿಲ್ಸಿದ್ರಲ್ಲ. ಅದನ್ನ ಏನಂತಾ ಕರಿತೀರಿ. ಅದಕ್ಕೆ ಯಾವ ಪದ ಹೇಳ್ತೀರಿ ಎಂದು ಪ್ರಶ್ನಿಸಿದ್ದಾರೆ. 

click me!