Mar 15, 2024, 5:45 PM IST
ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಂತರ ಬೆಂಗಳೂರು(Bengaluru) ಎಷ್ಟು ಸೇಫ್ ಅನ್ನೋ ಪ್ರಶ್ನೆ ಎದ್ದಿದೆ. ಆದ್ರೆ ಈ ಘಟನೆ ನಡೆದು ಇನ್ನೂ ಸರಿಯಾಗಿ 15 ದಿನಗಳು ಆಗಿಲ್ಲ. ಈಗಾಗಲೇ ನಮ್ಮದೇ ಬೆಂಗಳೂರಿನಲ್ಲಿ ಗುಂಡಿನ(Shootout) ಸದ್ದು ಕೇಳಿ ಬಂದಿದೆ. ಅದೂ ಕೂಡ ಹಾಡಹಗಲಲ್ಲೇ. ಜ್ಯುವೆಲರಿ ಅಂಗಡಿಗೆ(Jewelery Shop) ನುಗ್ಗಿದ ಆಗಂತುಕರು ಇಬ್ಬರ ಮೇಲೆ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ. ಐದೇ ನಿಮಿಷದಲ್ಲಿ ಆ ಕಿರಾತಕರು ಬಂದು ಇಬ್ಬರ ಮೇಲೆ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ. ಸದ್ಯ ಪೊಲೀಸರು(Police) ಆ ನಾಲ್ವರ ಬೆನ್ನುಬಿದ್ದಿದ್ದು ಸದ್ಯದಲ್ಲೇ ಅವರನ್ನ ಬಂಧಿಸಲಿದ್ದೇವೆ ಅಂತ ಹೆಳ್ತಿದ್ದಾರೆ. ಆದ್ರೆ ಇವತ್ತು ನಡೆದ ಘಟನೆಯ ರೀತಿಯೇ ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಜ್ಯುವೆಲರಿ ಅಂಗಡಿಯಲ್ಲಿ ಶೂಟೌಟ್ ನಡೆದಿತ್ತು.
ಆನಂದ್ ರಾಮ್ ಮತ್ತು ಅಪುರಾಮ್ ಮೇಲೆ ಗುಂಡು ಹಾರಿಸಿ ಆಗಂತುಕರು ಎಸ್ಕೇಪ್ ಆಗಿದ್ದಾರೆ. ಅದ್ರೆ ಸದ್ಯ ಆ ಇಬ್ಬರೂ ಔಟ್ ಆಫ್ ಡೇಂಜರ್ ಅಂತ ಡಾಕ್ಟರ್ ಹೆಳ್ತಿದ್ದಾರೆ. ಅದ್ರೆ ಸರಿಯಾಗಿ ಮೂರು ತಿಂಗಳ ಹಿಂದೆ ಇದೇ ರೀತಿ. ಅದೇ ಸಮಯಕ್ಕ.. ಅಷ್ಟೇ ಜನ ಮತ್ತೊಂದು ಚಿನ್ನದ ಅಂಗಡಿಗೆ ಎಂಟ್ರಿ ಕೊಟ್ಟಿದ್ದರು. ನಂತರ ಅಂಗಡಿ ಮಾಲೀಕನಿಗೆ ಗುಂಡು ಹಾರಿಸಿ ವಾಪಸ್ ಆಗಿದ್ರು. ಪುಡಿಗಾಸಿಗೆ ಆಸೆ ಬೀಳೋ ಚಿನ್ನದ ವ್ಯಾಪಾರಿಗಳು ಒಬ್ಬ ಸೆಕ್ಯೂರಿಟಿಯನ್ನ ನೇಮಿಸಿಕೊಳ್ಳದೇ ಈ ರೀತಿ ಕಳ್ಳತನಕ್ಕೆ ಒಳಗಾಗುತ್ತಿದ್ದಾರೆ. ಇನ್ನಾದ್ರೂ ಪೊಲೀಸರು ನಿಯಮವನ್ನ ಇನ್ನಷ್ಟು ಗಟ್ಟಿಗೊಳಿಸಲಿ, ಆ ಖದೀಮರ ಬಂದನವಾಗಲಿ.
ಇದನ್ನೂ ವೀಕ್ಷಿಸಿ: ಕಾದು ನೋಡುವ ತಂತ್ರದಲ್ಲಿ ಮಾಜಿ ಸಿಎಂ ಶೆಟ್ಟರ್..! ಮೈಸೂರಿನಲ್ಲಿ ಹೇಗಿದೆ ವಾತಾವರಣ..?