ಗೃಹಿಣಿಯರೇ ಇನ್ಮುಂದೆ ಆರಾಮಾಗಿ ಬಜ್ಜಿ, ಬೋಂಡಾ, ಪುರಿ ಮಾಡ್ಕೊಂಡು ಆನಂದಿಸಿ

First Published | Nov 24, 2024, 5:53 PM IST

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಾಮ್-ಪಾಮೊಲಿನ್ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು, ಭಾರತದಲ್ಲಿಯೂ ಅಡುಗೆ ಎಣ್ಣೆ ದರ ಕಡಿಮೆಯಾಗುತ್ತಿದೆ. ಸೋಯಾಬಿನ್, ಪಾಮ್ ಮತ್ತು ಪಾಮೊಲಿನ್ ಸಂಗ್ರಹದ ಕೊರತೆ ಉಂಟಾಗಿದ್ದರೂ, ರಫ್ತಿನಲ್ಲಿ ಕುಸಿತ ಕಂಡುಬಂದಿದೆ. ಹತ್ತಿಬೀಜದ ಎಣ್ಣೆಬೀಜವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಬೆಲೆ ಏರಿಕೆ ನಡುವೆ ನಿರಾಳವಾದ ಸುದ್ದಿಯೊಂದು ಹೊರ ಬಂದಿದೆ. ಹೌದು, ಅಡುಗೆ ಎಣ್ಣೆ ದರದಲ್ಲಿ ಇಳಿಕೆಯತ್ತ ಸಾಗುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಾಮ್-ಪಾಮೊಲಿನ್ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು, ಭಾರತದಲ್ಲಿಯೂ ಅಡುಗೆ ಎಣ್ಣೆ ದರ ಕಡಿಮೆಯಾಗುತ್ತಿದೆ.

ಮಾರುಕಟ್ಟೆ ಪ್ರಕಾರ, ಒಂದು ವಾರದ ಹಿಂದೆ ಸೋಯಾಬಿನ್ ಬೆಲೆ ಪ್ರತಿ ಟನ್‌ಗೆ 1,235-1,240 ಡಾಲರ್‌ ಗೆ ಮಾರಾಟವಾಗುತ್ತಿತ್ತು. ಇದೀಗ ಟನ್ ತೈಲದ ಬೆಲೆ 1,155-1,160 ಡಾಲರ್ ದರದಲ್ಲಿ ಮಾರಾಟವಾಗುತ್ತಿದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ಪಾಮ್ ಮತ್ತು ಪಾಮೊಲಿನ್ ಸಂಗ್ರಹದ ಕೊರತೆ ಉಂಟಾಗಿದೆ ಎಂದು ಖಾದ್ಯ ತೈಲ ವಿಮರ್ಶಕರು ಹೇಳಿಕೆ ನೀಡಿದ್ದರು.

Tap to resize

ತೈಲ ರಫ್ತಿನಲ್ಲಿ ಸುಮಾರು ಶೇ.30ರಷ್ಟು ಕುಸಿತಗೊಂಡಿರೋದನ್ನು ಬೇಡಿಕೆ ಇಲ್ಲದಿರೋದು ಎನ್ನಲಾಗುತ್ತಿದೆ. ಪಾಮೊಲಿನ್ ಆಯಿಲ್ ಸಂಗ್ರಹ 2.3 ಕೋಟಿ ಟನ್‌ನಿಂದ 3 ಕೋಟಿ ಟನ್‌ಗೆ ಹೆಚ್ಚಳವಾಗಿದೆ. ಸೆಪ್ಟಂಬರ್‌ನಲ್ಲಿ ಶೇ.23ರಷ್ಟು ಸಂಗ್ರಹ ಏರಿಕೆಯಾಗಿತ್ತು. ಈ ಕಾರಣದಿಂದ ಸಿಪಿಓ ಮತ್ತು ಪಾಮೊಲಿನ್ ತೈಲ ಬೆಲೆ ವಿದೇಶದಲ್ಲಿ ಕುಸಿತ ಕಾಣುತ್ತಿದೆ. ಈ ಕುಸಿತ ಇತರೆ ಕಾಳುಗಳ ಎಣ್ಣೆ ದರದ ಮೇಲೆಯೂ ಪರಿಣಾಮ ಬೀರಿದೆ.

ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ (ಸಿಸಿಐ) ವರದಿಗಳ ಪ್ರಕಾರ, ಕಳೆದ ವಾರ ಹತ್ತಿಬೀಜದ ಎಣ್ಣೆಬೀಜವನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದೆ ಎಂದು ತಿಳಿಸಿವೆ. ನಕಲಿ ಬೀಜದ ದಂಧೆ ಹೆಚ್ಚಾದ ಕಾರಣ, ಹತ್ತಿ ಬೆಲೆ ಮೇಲೆ ಪರಿಣಾಮ ಬೀರಿತ್ತು. ಮಾರುಕಟ್ಟೆಗೆ ಬರುತ್ತಿದ್ದ  1.96 ಲಕ್ಷ ಬೇಲ್‌ಗಳಿಂದ 1.05 ಲಕ್ಷ ಬೇಲ್‌ಗೆ ಇಳಿಕೆಯಾಗಿದೆ.

ಕಚ್ಚಾ ಪಾಮ್ ಆಯಿಲ್ (ಸಿಪಿಒ) ಬೆಲೆ 900 ರೂಪಾಯಿಗಳಷ್ಟು ಕುಸಿದು ಕ್ವಿಂಟಲ್ಗೆ 12,400 ರೂಪಾಯಿಗಳಿಗೆ ಕೊನೆಗೊಂಡಿದೆ. ಪಾಮೊಲಿನ್ ದೆಹಲಿಯ ಬೆಲೆ ಕ್ವಿಂಟಲ್‌ಗೆ 850 ರೂ.ನಿಂದ 14,000 ರೂ.ಗೆ ಕುಸಿದಿದೆ. ಪಾಮೊಲಿನ್ ಎಕ್ಸ್ ಕಾಂಡ್ಲಾ ಎಣ್ಣೆಯ ಬೆಲೆ 800 ರೂ.ನಷ್ಟು ಕುಸಿದು 13,000 ರೂ. ಕುಸಿತವಾಗಿದೆ. ಹತ್ತಿಬೀಜದ ಎಣ್ಣೆಯು ವರದಿಯ ವಾರದಲ್ಲಿ ಕ್ವಿಂಟಲ್‌ಗೆ ರೂ 1,050 ರಷ್ಟು ಕುಸಿದು ರೂ 12,650 ಕ್ಕೆ ತಲುಪಿತು.

Latest Videos

click me!