ಈ ಬಾರಿಯ ಹರಾಜಿನಲ್ಲೂ ಮಂಕಾಯ್ತಾ ಆರ್‌ಸಿಬಿ? ಕೈತಪ್ಪಿದ ಸಿರಾಜ್, ಚಹಾಲ್ !

By Chethan Kumar  |  First Published Nov 24, 2024, 5:28 PM IST

IPL ಹರಾಜಿನಲ್ಲಿ ಆರ್‌ಸಿಬಿ ಕುರಿತು ಹಲವು ಟೀಕೆಗಳಿವೆ. ಈ ಬಾರಿ ಆರ್‌ಸಿಬಿ ಕೆಲ ಪ್ರಮುಖ ಆಟಗಾರರ ಖರೀದಿಗೆ ಪ್ಲಾನ್ ಮಾಡಿತ್ತು. ಆದರೆ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಇದರ ಪರಿಣಾಮ ಆರ್‌ಸಿಬಿ ಭಾಗವಾಗಿದ್ದ ಮೊಹಮ್ಮದ್ ಸಿರಾಜ್ ಹಾಗೂ ಯಜುವೇಂದ್ರ ಚಹಾಲ್ ಬೇರೆ ತಂಡದ ಪಾಲಾಗಿದ್ದಾರೆ. 
 


ಜೆಡ್ಡಾ(ನ.24) ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದಿಲ್ಲ ಅನ್ನೋ ಕೊರಗು ಒಂದೆಡೆ. ಮತ್ತೊಂದೆಡೆ ಹರಾಜಿನಲ್ಲಿ ಆರ್‌ಸಿಬಿ ಪ್ರತಿ ಬಾರಿ ಮಂಕಾಗುತ್ತೆ ಅನ್ನೋ ಟೀಕೆಯೂ ಇದೆ. ಪ್ರತಿ ಬಾರಿ ಹರಾಜಿನ ಆರಂಭದಲ್ಲಿ ಸುಮ್ಮನಿರುವ ಆರ್‌ಸಿಬಿ ಕೊನೆಗೆ ದುಬಾರಿ ಮೊತ್ತಕ್ಕೆ ಕೆಲ ಆಟಗಾರರನ್ನು ಖರೀದಿಸಿ ತಂಡ ತುಂಬಿಸಿಕೊಳ್ಳುತ್ತೆ ಅನ್ನೋ ಆರೋಪವಿದೆ. ಈ ಬಾರಿಯೂ ಆರ್‌ಸಿಬಿ ಲಕ್ಷಣ ಇದೇ ರೀತಿ ಇದೆ. ಆರ್‌ಸಿಬಿ ತಂಡದ ಭಾಗವಾಗಿದ್ದ ವೇಗಿ ಮೊಹಮ್ಮದ್ ಸಿರಾಜ್ ಖರೀದಿಸಲು ಆರ್‌ಸಿಬಿ ಸಾಧ್ಯವಾಗಿಲ್ಲ. ಇತ್ತ ಯಜುವೇಂದ್ರ ಚಹಾಲ್ ಕೂಡ ಬೇರೆ ತಂಡದ ಪಾಲಾಗಿದ್ದಾರೆ.

ವೇಗಿ ಮೊಹಮ್ಮದ್ ಸಿರಾಜ್‌ನನ್ನು ಆರ್‌ಸಿಬಿ ಈ ಬಾರಿ ರಿಟೇನ್ ಮಾಡಿಕೊಂಡಿರಲಿಲ್ಲ. ಆದರೆ ಹರಾಜಿನಲ್ಲಿ ಖರೀದಿಸುವ ಸಾಧ್ಯತೆ ಇದೆ ಎಂದೇ ಭಾವಿಸಲಾಗಿತ್ತು. ಆದರೆ ಹರಾಜಿನಲ್ಲಿ ಮೊಹಮ್ಮದ್ ಸಿರಾಜ್ 12.25 ಕೋಟಿ ರೂಪಾಯಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ. ಸಿರಾಜ್ ಖರೀದಿಸುವ ಆರ್‌ಸಿಬಿ ಪ್ರಯತ್ನ ಕೈಗೂಡಲಿಲ್ಲ. ಇತ್ತ ಯಜುವೇಂದ್ರ ಚಹಾಲ್‌ನನ್ನು 18 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಇಬ್ಬರು ಆಟಗಾರರ ಮೂಲ ಬೆಲೆ 2 ಕೋಟಿ ರೂಪಾಯಿ. 

Tap to resize

Latest Videos

undefined

ಈಗಷ್ಟೇ ಶ್ರೇಯರ್ ಅಯ್ಯರ್ ಬರೆದ ದಾಖಲೆ ಪುಡಿ ಪುಡಿ, ರಿಷಬ್ ಪಂತ್ 27 ಕೋಟಿಗೆ ಹರಾಜು!

ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ವಿದೇಶಿ ಆಟಗಾರನ ಖರೀದಿ ಮೂಲಕ ಖಾತೆ ತೆರೆದಿದೆ. ಲಿಯಾಮ್ ಲಿವಿಂಗ್‌ಸ್ಟೋನ್‌ಗೆ 8.75 ಕೋಟಿ ರೂಪಾಯಿ ನೀಡಿ ಖರೀದಿಸಿದೆ.  ಸೌತ್ ಆಫ್ರಿಕಾ ವೇಗಿ ಕಗಿಸೋ ರಬಾಡ ಖರೀದಿಸಲು ಆರ್‌ಸಿಬಿ ಪ್ರಯತ್ನ ಮಾಡಿತ್ತು. 10 ಕೋಟಿ ರೂಪಾಯಿ ವರೆಗೂ ಬಿಡ್ ಮಾಡಿತ್ತು. ಆದರೆ 10 ಕೋಟಿ ರೂಪಾಯಿ ಮೀರುತ್ತಿದ್ದಂತೆ ಆರ್‌ಸಿಬಿ ಬಿಡ್‌ನಿಂದ ಹಿಂದೆ ಸರಿಯಿತು. 10.75 ಕೋಟಿ ರೂಪಾಯಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ. 

ಆರ್‌ಸಿಬಿ ತಂಡವು ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಹಾಗೂ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿದ್ದು, ಇದೀಗ ಮೆಗಾ ಹರಾಜಿಗೆ 83 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ. ಕಳೆದ ಕೆಲ ವರ್ಷಗಳಿಂದ ವೇಗಿ ಮೊಹಮ್ಮದ್ ಸಿರಾಜ್‌ನನ್ನು ರಿಟೇನ್ ಮಾಡಿಕೊಳ್ಳುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಕೈಬಿಟ್ಟಿತ್ತು. ಇದೀಗ ಹರಾಜಿನಲ್ಲಿ ಖರೀದಿಸಲು ಸಾಧ್ಯವಾಗಿಲ್ಲ. ಇದೀಗ ಆರ್‌ಸಿಬಿ ತಂಡಕ್ಕೆ ಯಾರನ್ನು ಖರೀದಿ ಮಾಡಲಿದೆ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಕೆಎಲ್ ರಾಹುಲ್ ಖರೀದಿಗಾಗಿ ಹಣ ಬಾಕಿ ಉಳಿಸಿಕೊಳ್ಳಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 

click me!