Sep 23, 2020, 12:29 PM IST
ಬೆಂಗಳೂರು (ಸೆ. 23): ಮಾದಕ ವಸ್ತು ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ISD ತಂಡ 'ಬ್ರಹ್ಮಗಂಟು' ಖ್ಯಾತಿಯ ಗೀತಾ 'ಗಟ್ಟಿಮೇಳ' ಖ್ಯಾತಿಯ ವಿಕ್ರಂರನ್ನು ಕರೆಸಿ ಪ್ರತ್ಯೇಕವಾಗಿ 5 ತಾಸುಗಳ ಕಾಲ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ಡ್ರಗ್ಸ್ ವ್ಯಸನಿಗಳಲ್ಲ. ಯಾವ ಪೆಡ್ಲರ್‌ಗಳ ಜೊತೆಗೂ ನಮಗೆ ಸಂಬಂಧವಿಲ್ಲ ಎಂದು ಗೀತಾ ಹಾಗೂ ಅಭಿಷೇಕ್ ಸ್ಪಷ್ಟಪಡಿಸಿದ್ದಾರೆ. ISD ತಂಡ ಬಯಸಿದರೆ ನಮ್ಮ ಕರೆಗಳ ಬಗ್ಗೆಯೂ ಮಾಹಿತಿ ನೀಡಲು ಸಿದ್ಧರಿದ್ದೇವೆ' ಎಂದಿದ್ಧಾರೆ.
ಮತ್ತೊಮ್ಮೆ ಕೈ ಕೊಡ್ತು ರಾಗಿಣಿಗಿದ್ದ ಆ ಅದೃಷ್ಟ?
ಬ್ರಹ್ಮಗಂಟು ಖ್ಯಾತಿಯ ಗೀತಾ ಪೆಡ್ಲರ್‌ವೊಬ್ಬನ ಜೊತೆ ನೈಟ್ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಇವರಿಗೂ ಡ್ರಗ್ ಜಾಲದ ಜೊತೆ ನಂಟಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇನ್ನೂ ಅಭಿಷೇಕ್ ಬಗ್ಗೆಯೂ ವಿಚಾರಣೆ ನಡೆದಿದೆ. 5 ತಾಸುಗಳ ವಿಚಾರಣೆಯಲ್ಲಿ ನಡೆದಿದ್ದೇನು? 'ಗುಂಡಮ್ಮ' ಇನ್ನಷ್ಟು ಜನರ ಹೆಸರನ್ನು ಬಾಯ್ಬಿಟ್ಟಿದ್ದಾಳಾ? ISD ಮುಂದಿನ ಟಾರ್ಗೆಟ್ ಯಾರು? ನೋಡೋಣ ಬನ್ನಿ...!