ಮಾಧ್ಯಮಗಳಿಗೆ ಗೊತ್ತಾಗುವ ಮುನ್ನ ಎಫ್‌ಐಆರ್‌ ವಿಚಾರ ಸಂಜನಾಗೆ ಗೊತ್ತಾಗಿದ್ದು ಹೇಗೆ..!?

Oct 3, 2020, 11:17 AM IST

ಬೆಂಗಳೂರು (ಅ. 03): ಡ್ರಾಮಾ ಕ್ವೀನ್ ಸಂಜನಾ ಅರೆಸ್ಟ್‌ಗೂ ಮುನ್ನ ಸಖತ್ ಹೈಡ್ರಾಮಾ ಮಾಡಿದ್ದರು. ಅವರು ಮಾಡಿದ ಡ್ರಾಮಾ ನೋಡಿದರೆ ಯಾರಾದರೂ ನಂಬಿ ಬಿಡಬೇಕಿತ್ತು ಹಾಗಿತ್ತು ನಾಟಕ. ಆದರೆ ಅವೆಲ್ಲಾ ಸಿಸಿಬಿ ಮುಂದೆ ನಡೆಯಲಿಲ್ಲ. ರಾಗಿಣಿ ಅರೆಸ್ಟ್ ಆಗುತ್ತಿದ್ದಂತೆ ಸಂಜನಾ ಅಲರ್ಟ್ ಆಗಿದ್ದರು. ತನಗೂ ಸಿಸಿಬಿ ಗಾಳ ಹಾಕುತ್ತೆಂದು ಗೊತ್ತಿದ್ದು ಅದಾಗಲೇ ಲಾಯರ್‌ಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿದ್ದರು. 

ರಾಗಿಣಿ ಅಲರ್ಟ್‌ ಆಗ್ತಿದ್ದಂತೆ ಸಂಜನಾ ಅಲರ್ಟ್; ಸಿಸಿಬಿ ಮುಂದೆ ನಡೀಲಿಲ್ಲ ಬಚಾವ್ ಪ್ಲಾನ್!

NDPS ಕಾಯ್ದೆ ಎಂದರೇನು? ಇದರಿಂದ ಬಚಾವಾಗೋದು ಹೇಗೆ? ಎಂದೆಲ್ಲಾ ಗೂಗಲ್ ಸರ್ಚ್ ಮಾಡಿದ್ದು ತನಿಖೆ ವೇಳೆ ಗೊತ್ತಾಗಿದೆ.