Sep 8, 2020, 2:18 PM IST
ಬೆಂಗಳೂರು (ಸೆ. 08): ಸಂಜನಾರನ್ನು ವಶಕ್ಕೆ ತೆಗೆದುಕೊಂಡಿರುವ ಸಿಸಿಬಿ, ಅವರ ಆಪ್ತ ಫಾಸಿಲ್ ಗಾಗಿ ಹುಡುಕಾಟ ಶುರು ಮಾಡಿದೆ. ಈತ ಬಾಲಿವುಡ್, ಸ್ಯಾಂಡಲ್‌ವುಡ್ ಸೆಲಬ್ರಿಟಿಗಳ ಜೊತೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಸೆಲಬ್ರಿಟಿಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದ. ಈತ ನಟಿ-ನಟಿಯರನ್ನು ಕ್ಯಾಸಿನೋಗಳಿಗೆ ಕರೆದೊಯ್ಯುತ್ತಿದ್ದ. ಈತ ಕರ್ನಾಟಕದ ರಾಜಕಾರಣಿಗಳಿಗೂ ಆಪ್ತ ಎನ್ನಲಾಗಿದೆ.
ವಿಚಾರಣೆ ವೇಳೆ ಸಂಜನಾ ಹೆಸರು ಬಾಯ್ಬಿಟ್ಟನಾ ಮಲಯಾಳಿ ನಟ?
ಸಂಬರಗಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಫಾಸಿಲ್ ಕಾಣಿಸಿಕೊಂಡಿದ್ಧಾರೆ. ಈತ ಜಮೀರ್ ಅಹ್ಮದ್ ಆಪ್ತ ಎಂದು ಸಂಬರಗಿ ಹೇಳಿದ್ದಾರೆ. ಜೊತೆಗೆ ತಿಂಗಳಲ್ಲಿ 6 ದಿನ ಶ್ರೀಲಂಕಾದಲ್ಲಿ ಇರುತ್ತಾರಂತೆ. 4 ದಿನ ದುಬೈನಲ್ಲಿ ಇರುತ್ತಾರಂತೆ. ಹೀಗಂತ ಸಂಬರಗಿ ಆರೋಪ ಮಾಡಿದ್ದಾರೆ. ಈಗ ಸಂಜನಾ ಆಪ್ತನಿಗೆ ಕಂಟಕ ಶುರುವಾಗಿದೆ.