ಜನರಲ್ ತಿಮ್ಮಯ್ಯ, ಮಾರ್ಷಲ್ ಕಾರ್ಯಪ್ಪ ವಿರುದ್ಧ ಅವಹೇಳನ ಖಂಡಿಸಿ ನಾಳೆ ಕೊಡಗು ಬಂದ್

By Girish Goudar  |  First Published Dec 11, 2024, 7:17 PM IST

ಪ್ರಥಮ ಮಹಾ ದಂಡನಾಯಕ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅಪಮಾನಿಸಿ ಪೋಸ್ಟ್ ಮಾಡಿದ್ದ ವ್ಯಕ್ತಿಗೆ ಕೇವಲ ಆರು ತಿಂಗಳ ಕಾಲ ಬಾರ್ ಕೌನ್ಸಿಲ್ ನಿಂದ ಹೊರಗಿಡಲಾಗಿದೆ. ಆದರೆ ಆ ವ್ಯಕ್ತಿಯನ್ನು ಕನಿಷ್ಠ ಆರುಗಳು ಕಾಲವಾದರೂ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಗುರುವಾರ ಸರ್ವಜನಾಂಗದ ಒಕ್ಕೂಟ ಜಿಲ್ಲಾ ಬಂದ್ ಗೆ ಕರೆ ನೀಡಿದೆ. 


ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು 

ಕೊಡಗು(ಡಿ.11):  ದೇಶದ ವೀರ ಸೇನಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಮಾನ ಮಾಡಿದನ್ನು ಖಂಡಿಸಿ ಸರ್ವ ಜನಾಂಗಗಳ ಒಕ್ಕೂಟದಿಂದ ನಾಳೆ(ಗುರುವಾರ) ಕೊಡಗು ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ. 

Tap to resize

Latest Videos

ಪ್ರಥಮ ಮಹಾ ದಂಡನಾಯಕ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅಪಮಾನಿಸಿ ಪೋಸ್ಟ್ ಮಾಡಿದ್ದ ವ್ಯಕ್ತಿಗೆ ಕೇವಲ ಆರು ತಿಂಗಳ ಕಾಲ ಬಾರ್ ಕೌನ್ಸಿಲ್ ನಿಂದ ಹೊರಗಿಡಲಾಗಿದೆ. ಆದರೆ ಆ ವ್ಯಕ್ತಿಯನ್ನು ಕನಿಷ್ಠ ಆರುಗಳು ಕಾಲವಾದರೂ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಗುರುವಾರ ಸರ್ವಜನಾಂಗದ ಒಕ್ಕೂಟ ಜಿಲ್ಲಾ ಬಂದ್ ಗೆ ಕರೆ ನೀಡಿದೆ. 

ಕೊಡಗು: ಆಂಧ್ರದ ಮಾವುತರಿಗೆ ತರಬೇತಿ ನೀಡಿದ ದುಬಾರೆ ಸಾಕಾನೆಗಳು!

undefined

ಖಾಸಗಿ ಬಸ್‌ ಮಾಲೀಕರ ಸಂಘ, ಆಟೋ ಮಾಲೀಕರು ಮತ್ತು ಚಾಲಕರ ಸಂಘ, ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ವಿವಿಧ ಕೊಡವ ಸಮಾಜಗಳು ಸೇರಿದಂತೆ ಒಟ್ಟು 21 ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಗಳು ಕೊಡಗು ಜಿಲ್ಲಾ ಬಂದ್‌ಗೆ ನಿರ್ಧರಿಸಿವೆ. 

ನಾಳೆ ಬೆಳಿಗ್ಗೆ 6 ಗಂಟೆಯಿಂದ ಮಧಾಹ್ನ 12 ಗಂಟೆಯವರೆಗೆ ಜಿಲ್ಲಾ ಬಂದ್ ಗೆ ಕರೆ ನೀಡಿವೆ. ಕೊಡಗಿನ ಪ್ರತೀ ಹಳ್ಳಿ ಹಳ್ಳಿಗೂ ಸಂಪರ್ಕ ಕೊಂಡಿಯಾಗಿರುವ ಖಾಸಗಿ ಬಸ್ಸುಗಳ ಸಂಚಾರ ಸ್ಥಗಿತವಾಗಲಿದೆ. ಜೊತೆಗೆ ಜಿಲ್ಲಾ ಛೇಂಬರ್ಸ್ ಆಫ್ ಕಾಮರ್ಸ್ ಸಂಘಟನೆ ಬಂದ್ ಗೆ ಕರೆ ನೀಡಿರುವುದರಿಂದ ಜಿಲ್ಲೆಯ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಲಿದೆ. ಆಟೋಗಳ ಮಾಲೀಕರು ಮತ್ತು ಚಾಲಕರ ಸಂಘವೂ ಬಂದ್ಗೆ ಸಂಪೂರ್ಣ ಬೆಂಬಲ ಸೂಚಿಸಿರುವುದರಿಂದ ಆಟೋಗಳ ಸಂಚಾರವೂ ಇರುವುದಿಲ್ಲ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದ್ದು ವೀರ ಸೇನಾನಿಗಳಿಗೆ ಅಪಮಾನಿಸಿದ ವ್ಯಕ್ತಿಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಿವೆ. 

ಸಹೋದ್ಯೋಗಿಗೆ ಜಾತಿನಿಂದನೆ ಮಾಡಿದ ಇಬ್ಬರು ಯುವತಿಯರು! ದೂರು ಕೊಟ್ಟರೂ ಕ್ರಮ ಇಲ್ಲ!

ಹೊಟೇಲ್, ರೆಸಾರ್ಟ್ ಮಾಲೀಕರ ಸಂಘವೂ ಬಂದ್ಗೆ ಬೆಂಬಲ ಸೂಚಿಸಿರುವುದರಿಂದ ಪ್ರವಾಸೋದ್ಯಮದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಕುರಿತು ಮಾತನಾಡಿರುವ ಸರ್ವ ಜನಾಂಗಗಳ ಒಕ್ಕೂಟದ ಸಂಚಾಲಕ ರಾಜೀವ್ ಬೋಪಯ್ಯ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷ ತಂದೊಡ್ಡಿ ಅಶಾಂತಿಯನ್ನು ಮೂಡಿಸುವ ಯತ್ನವನ್ನು ಮಾಡಲಾಗುತ್ತಿದೆ. ಇದು ಪದೇ ಪದೇ ನಡೆಯುತ್ತಿರುವುದರಿಂದ ಇನ್ನು ಮುಂದೆ ಇಂತಹ ಯಾವುದೇ ಸಮಾಜ ದ್ರೋಹಿ ಕೆಲಸಗಳು ಆಗದಂತೆ ಅದನ್ನು ತಡೆಯುವುದಕ್ಕಾಗಿ ಸರ್ವ ಜನಾಂಗಗಳ ಒಕ್ಕೂಟವನ್ನು ಅಸ್ಥಿತ್ವಕ್ಕೆ ತರಲಾಗಿದೆ. ಅದರ ಭಾಗವಾಗಿ ಇದೇ 12 ರಂದು ಅಂದರೆ ಗುರುವಾರ ಬಂದ್ ಮಾಡಲಾಗುತ್ತಿದೆ ಎಂದಿದ್ದಾರೆ. 

ಜಿಲ್ಲಾ ಛೇಂಬರ್ಸ್ ಆಫ್ ಕಾಮರ್ಸ್ ಸಂಘಟನೆ ಜಿಲ್ಲಾಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಇಂತಹ ಕೃತ್ಯಗಳನ್ನು ಖಂಡಿರುವುದಕ್ಕಾಗಿ 12 ರಂದು ಜಿಲ್ಲೆಯಲ್ಲಿ ನಡೆಯುವ ಜಿಲ್ಲಾ ಬಂದ್‌ಗೆ ಸಂಪೂರ್ಣ ತಮ್ಮ ಬೆಂಬಲವಿದೆ. ಜಿಲ್ಲೆಯಲ್ಲಿ ಎಲ್ಲಾ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಶಾಲಾ ಕಾಲೇಜುಗಳಿಗೂ ರಜೆ ನೀಡುವಂತೆ ಇಲಾಖೆಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಗುರುವಾರ ಬಂದ್ ನಡೆಯುತ್ತಿದ್ದು ಜಿಲ್ಲೆಯ ಜನ ಜೀವನ ಅಸ್ತವ್ಯಸ್ತವಾಗಲಿದೆ.

click me!