ಸುದೀಪ್ ಸುಳ್ಳು ಹೇಳಿಲ್ಲ, ಆದ್ರೆ ಈಗಿನ ಸಮಯಕ್ಕೆ ಆ ವಿಡಿಯೋ ಸುಳ್ಳಾಗಿದೆ ಅಷ್ಟೇ!

Published : Dec 11, 2024, 08:00 PM ISTUpdated : Dec 11, 2024, 08:46 PM IST
ಸುದೀಪ್ ಸುಳ್ಳು ಹೇಳಿಲ್ಲ, ಆದ್ರೆ ಈಗಿನ ಸಮಯಕ್ಕೆ ಆ ವಿಡಿಯೋ ಸುಳ್ಳಾಗಿದೆ ಅಷ್ಟೇ!

ಸಾರಾಂಶ

ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 11ರ ನಂತರ ಹೋಸ್ಟಿಂಗ್ ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ಹಲವು ಊಹಾಪೋಹಗಳ ನಡುವೆ, ಹಲವು ಸೀಸನ್‌ಗಳ ನಂತರ ತೃಪ್ತಿ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಹಿಂದಿನ ವಿಡಿಯೋದಲ್ಲಿ ಜನರಿಗೆ ಇಷ್ಟವಿದ್ದರೆ ಮಾತ್ರ ಹೋಸ್ಟಿಂಗ್ ಮುಂದುವರಿಸುವುದಾಗಿ ಹೇಳಿದ್ದರು. ಆದರೆ ಈಗಿನ ಜನಪ್ರಿಯತೆ ನೋಡಿದರೆ ಬೇರೆಯೇ ಕಾರಣವಿರಬೇಕು ಎಂಬುದು ಸ್ಪಷ್ಟ!

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ಹೋಸ್ಟಿಂಗ್ ಮಾಡುತ್ತಿರೋದು ಗೊತ್ತೇ ಇದೆ. ಆದರೆ, 'ಇದೇ ನನ್ನ ಕೊನೆಯ ಸೀಸನ್, ಮತ್ತೆ ನಾನು ಬಿಗ್ ಬಾಸ್ ನಡೆಸಿಕೊಡೋಲ್ಲ' ಎಂದಿದ್ದಾರೆ ನಟ ಸುದೀಪ್. ಕಿಚ್ಚ ಸುದೀಪ್ ಅವರದು ಇದೇ ಲಾಸ್ಟ್ ಬಿಗ್ ಬಾಸ್ ಕನ್ನಡ ಹೋಸ್ಟಿಂಗ್ ಎಂಬ ಸುದ್ದಿ ಸದ್ಯ ಎಲ್ಲಾ ಕಡೆ ವೈರಲ್ ಆಗಿದೆ. ಆದರೆ, ಸುದೀಪ್ ಈ ನಿರ್ಣಯಕ್ಕೆ ಕಾರಣವೇನು ಎಂಬ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಸ್ವತಃ ಸುದೀಪ್ ಈ ಬಗ್ಗೆ ಉತ್ತರ ಕೊಟ್ಟಿದ್ದಾರೆ. 

ಸುದೀಪ್ ತಾವ್ಯಾಕೆ ಇನ್ಮುಂದೆ ಬಿಗ್ ಬಾಸ್ ನಡೆಸಿಕೊಡಲ್ಲ ಎಂಬ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಮುಖ್ಯವಾಗಿ ಇಷ್ಟು ಸೀಸನ್ ಮಾಡಿರುವ ತೃಪ್ತಿಯೇ ಸಾಕು ಎಂಬ ಭಾವ ಮೂಡಿಸಿದೆ ಎಂಬಂತೆ ಮಾತನ್ನಾಡಿದ್ದಾರೆ. ಆದರೆ ಅದು ಸತ್ಯವೇ ಎಂಬ ಶಂಕೆ ಹಲವರ ಮನದಲ್ಲಿ ಮೂಡಿದೆ. ಅದಕ್ಕೆ ಸರಿಯಾದ ಉತ್ತರವನ್ನು ಸುದೀಪ್ ಬಿಟ್ಟರೆ ಬೇರೆ ಯಾರೂ ಕೊಡಲು ಸಾಧ್ಯವಿಲ್ಲ. ಆದರೆ, ನಟ ಸುದೀಪ್ ಹಳೆಯ ವಿಡಿಯೋವೊಂದು ಸದ್ಯ ವೈರಲ್ ಆಗುತ್ತಿದ್ದು, ಅದು ಈಗ ಸುದೀಪ್ ಮಾಡಿರುವ ನಿರ್ಧಾರಕ್ಕೆ ಕಾರಣವಲ್ಲ ಎನ್ನಬಹುದು. 

ಗಾಡ್ ಫಾದರ್ ಆ ಗುಟ್ಟನ್ನೂ ಅನುಶ್ರೀಗೆ ಹೇಳಿದ ಬುದ್ದಿವಂತ ಉಪೇಂದ್ರ!

ಹಾಗಿದ್ದರೆ ಸುದೀಪ್ ವೈರಲ್ ವಿಡಿಯೋದಲ್ಲಿ ಏನಿದೆ? 'ಬಿಗ್ ಬಾಸ್‌ನಲ್ಲಿ ನನ್ನ ನೋಡೋಕೆ ಆಸೆ ಪಡ್ತಾ ಇದಾರಾ ಜನ? ಇಷ್ಟ ಪಡ್ತಾ ಇದಾರಾ? ನಾನು ಮಾಡ್ತೀನಿ. ಇಷ್ಟ ಇಲ್ವ ಜನಕ್ಕೆ, ಹಿಂಟ್ ಬರುತ್ತೆ ನಂಗೆ.. ಬೇರೆ ಯಾರೂ ಹೇಳ್ಬೇಕಾಗಿಲ್ಲ, ನಮಗೇ ಗೊತ್ತಾಗುತ್ತೆ.. ಈವಾಗ ಪ್ರತಿ ಶನಿವಾರ-ಭಾನುವಾರ ಜನ ಟಿವಿ ಮುಂದೆ ಕೂತ್ಕೊಂಡು ನೋಡ್ತಾರೆ ಅಂದ್ರೆ, ಅದು ನಾನು ಸಂಪಾದನೆ ಮಾಡ್ಕೊಂಡು ಬಂದಿರೋದು, ಬಲವಂತ ಮಾಡಿಲ್ಲ.. ಹೆದ್ರಿಸಿಲ್ಲ ಜನಗಳಿಗೆ ನೋಡ್ಲೇಬೇಕು ಅಂತ.. 

ಪ್ರೀತಿಯಿಂದ ನಾನು ಕಷ್ಟಪಟ್ಟು ಸಂಪಾದನೆ ಮಾಡಿರೋ ಆಸ್ತಿ ಅದು.. ನನಗೆ ಆ ತಾಖತ್ ಇದೆ ಅಂದ್ರೆ ಶನಿವಾರ-ಭಾನುವಾರ ಜನಗಳನ್ನ ಹಿಡಿದಿಡೋಕೆ ಅಂದ್ರೆ, ಅದು ನನಗೆ ನಾನು ಶ್ರಮದಿಂದ ಸಂಪಾದಿಸಿ ಮಾಡ್ಕೊಂಡಿರೋ ನಂಬಿಕೆ ಹಾಗೂ ಆಸ್ತಿ..' ಎಂದಿದ್ದಾರೆ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್. ಅಂದರೆ, 'ಜನರು ಅವರನ್ನು ನೋಡಲು ಇಷ್ಟಪಡುತ್ತಿಲ್ಲ, ಅದಕ್ಕೇ ಸುದೀಪ್ ಮುಂದಿನ ಸೀಸನ್‌ನಲ್ಲಿ ಇರೋಲ್ಲ..' ಎಂಬಂತಿದೆ ಈ ವೈರಲ್ ವಿಡಿಯೋ.

ಏನ್ ಕಥೆ ಪ್ರದೀಪ್ ದೊಡ್ಡಯ್ಯ ಅವ್ರದ್ದು? ಔಟ್ ಆಫ್ ಸಿಲಬಸ್ ಹೋಗಿರೋದ್ಯಾಕೆ?

ಆದರೆ, ಖಂಡಿತ ಈಗ ನಡೆದಿರುವ ವಿಷಯ ಅದಲ್ಲ ಎನ್ನಬಹುದು. ಕಾರಣ, ಬಿಗ್ ಬಾಸ್ ಕನ್ನಡ ಈ ಸೀಸನ್‌ 11ನಲ್ಲೂ ಶನಿವಾರ ಹಾಗೂ ಭಾನುವಾರ ಸುದೀಪ್ ಅವರನ್ನೇ ನೋಡಲು ಜನರು ಇಷ್ಟಪಡುತ್ತಿದ್ದಾರೆ. ವಾರಾಂತ್ಯದಲ್ಲೇ ಬಿಗ್ ಬಾಸ್ ಟಿಆರ್‌ಪಿ ಹೆಚ್ಚು ಬರುತ್ತಿದೆ ಎಂಬುದು ಈ ಸೀಸನ್‌ನಲ್ಲೂ ಮುಂದುವರಿದಿದೆ. ಹೀಗಾಗಿ ಜನರು ತಮ್ಮನ್ನು ನೋಡುತ್ತಿಲ್ಲ ಎಂಬ ಹಿಂಟ್ ಸುದೀಪ್ ಅವರಿಗೆ ಸಿಕ್ಕಿರುವುದು ಈ ನಿರ್ಧಾರಕ್ಕೆ ಕಾರಣವಲ್ಲ, ಬೇರೇನೋ ಇದೆ. 

ಕಾರಣ ಅದೇನೇ ಇರಲಿ, ಅವರು ಹೋಸ್ಟ್ ಮಾಡೋದು ಬಿಡೋದು ಅವರಿಷ್ಟ. ಆದರೆ, ಅವರ ಈ ಸೀಸನ್ ನಿರ್ಧಾರಕ್ಕೆ ಹಳೆಯ ವೈರಲ್ ವೀಡಿಯೋದಲ್ಲಿ ಹೇಳಿರುವ ಅಂಶ ಕಾರಣವಲ್ಲ ಎಂಬದೀಗ ಸೂರ್ಯ-ಚಂದ್ರರಷ್ಟೇ ಸತ್ಯ. ಆಗಿನ ಸಮಯದಲ್ಲಿ ಆಗಿನ ಸಂದರ್ಭಕ್ಕೆ ಅವರು ಹೇಳಿರುವುದು ಇಂದು ಸುಳ್ಳು ಎಂಬಂತಾಗಿದೆ. ಅದಕ್ಕೇ 'ಕಾಲಾಯ ತಸ್ಮೈ ನಮಃ' ಎನ್ನುವುದು. ಯಾವಮಾತು ಯಾವ ಕಾಕ್ಕೆ ಸತ್ಯವಾಗುವೊದೋ ಸುಳ್ಳಾಗುವುದೋ ಬಲ್ಲವರಾರು?

ಡಾ. ರಾಜ್​ ಕಿಡ್ನಾಪ್ ಕೇಸ್: ಎಸ್ಎಂ ಕೃಷ್ಣ, ಅಂಬಿ & ರಜನಿ ನಡುವೆ ನಡೆದಿತ್ತು ರಹಸ್ಯ ಒಪ್ಪಂದ !

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ