Sep 14, 2020, 4:43 PM IST
ಬೆಂಗಳೂರು (ಸೆ. 14): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಕೇಸ್‌ನಲ್ಲಿ ವಿಚಾರನೆಗೊಳಪಟ್ಟಿರುವ ರಾಗಿಣಿ ಹಾಗೂ ಸಂಜನಾಗೆ ತುಸು ಸಮಾಧಾನಕರ ವಿಚಾರವೊಂದಿದೆ. ಇಬ್ಬರಿಗೂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಆಂಟಿಜೆನ್ ಟೆಸ್ಟ್ ಮಾಡಲಾಗಿದೆ. ಇಬ್ಬರಿಗೂ ನೆಗೆಟಿವ್ ರಿಪೋರ್ಟ್ ಬಂದಿದೆ.
ತಮ್ಮದೇ ಹೇಳಿಕೆಗೆ ಸಹಿ ಮಾಡಲು ರಾಗಿಣಿ - ಸಂಜನಾ ನಖರಾ; ಮುಂದುವರೆದ ರಂಪಾಟ
ಇದು ಸಮಾಧಾನಕರ ಸುದ್ದಿಯೇನೋ ಹೌದು. ಆದರೆ ಇವರ ನ್ಯಾಯಾಂಗ ಬಂಧನ ಮುಂದುವರೆಯುವ ಸಾಧ್ಯತೆ ಇದೆಯಾ? ಅದಕ್ಕಾಗಿಯೇ ಕೋವಿಡ್ ಟೆಸ್ಟ್ ಮಾಡಿಸಲಾಯ್ತಾ? ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಅರ್ಜಿ ವಿಚಾರಣೆ ನಡೆದು ಆದೇಶ ಹೊರ ಬರುವವರೆಗೂ ಕಾಯಬೇಕಾಗಿದೆ.