ಹಬ್ಬಕ್ಕೆ ಊರಿಗೆ ಬಂದವನು ಮಟಾಷ್..! ಭೀಮಾ ತೀರದಲ್ಲಿ ಮತ್ತೆ ಚಿಮ್ಮಿತು ಹಸಿ ಹಸಿ ರಕ್ತ..!

ಹಬ್ಬಕ್ಕೆ ಊರಿಗೆ ಬಂದವನು ಮಟಾಷ್..! ಭೀಮಾ ತೀರದಲ್ಲಿ ಮತ್ತೆ ಚಿಮ್ಮಿತು ಹಸಿ ಹಸಿ ರಕ್ತ..!

Published : Oct 24, 2023, 02:36 PM IST

ನಟ್ಟ ನಡು ಊರಿನಲ್ಲಿ ಕುರಿ ಕತ್ತರಿಸಿದಂತೆ ಕತ್ತರಿಸಿದ ಹಂತಕರು
ಆ ಕೊಲೆ ಹಿಂದಿತ್ತು ವರ್ಷದ ಹಿಂದೆ ನಡೆದ ಮರ್ಡರ್ ಮಿಸ್ಟ್ರಿ
ಹೆಣ ಹಾಕಿ ಜೈಲಿಗೆ ಹೋದವನಿಗಾಗಿ 1 ವರ್ಷ ಕಾದಿದ್ದರು..!

ಭೀಮಾ ತೀರವೇ ಹಾಗೆ. ಇಲ್ಲಿ ಒಂದು ನೆತ್ತರಿನ ಕಲೆ ಮಾಸುವ ಮುನ್ನವೇ ಹಸಿ ಹಸಿ ರಕ್ತ ಚಿಮ್ಮಿಬಿಡುತ್ತೆ. ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು.. ರಕ್ತಕ್ಕೆ ರಕ್ತದಿಂದಲೇ ಉತ್ತರ. ಈ ರಿವೇಂಜ್ ಭೀಮಾ ತೀರದಲ್ಲಿ ಕಾಮನ್. ಇತ್ತಿಚಿಗಷ್ಟೇ ಗ್ರಾಮ ಪಂಚಾಯತಿ ಅಧ್ಯಕ್ಷನೊಬ್ಬನ ಬರ್ಬರ ಹತ್ಯೆ ಮಾಸುವ ಮುನ್ನವೇ ಇಲ್ಲಿ ಇನ್ನೊಂದು ಹೆಣ ಬಿದ್ದಿದೆ. ಈ ಬಾರಿ ಹಂತಕರು ಯುವಕನೊಬ್ಬನನ್ನು ನಟ್ಟ ನಡು ಊರಿನಲ್ಲಿ ಕುರಿ ಕಡಿದಂತೆ ಕತ್ತರಿಸಿ ಹಾಕಿದ್ದಾರೆ. ಕಳೆದ ವಾರವಷ್ಟೇ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಪ್ರಭಾವಿ ಕಾಂಗ್ರೆಸ್(Congress) ಮುಖಂಡರೊಬ್ಬರನ್ನು ಚೌಡಾಪೂರದ ಬಸ್ ನಿಲ್ದಾಣದ ಬಳಿ ಹಾಡು ಹಗಲೇ ಇದೇ ರೀತಿ ಕೊಚ್ಚಿ ಕೊಚ್ಚಿ ಕೊಲೆ(Murder) ಮಾಡಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಅದೇ ಥರದ ಇನ್ನೊಂದು ಘಟನೆ ಅದೇ ಭೀಮಾ ತೀರದ ಸಿದನೂರು ಗ್ರಾಮದಲ್ಲಿ ನಡೆದಿದೆ. ಈ ಬಾರಿ ಕೊಲೆ ನಡೆದಿದ್ದು ಕಲಬುರಗಿ(Kalaburagi) ಜಿಲ್ಲೆಯ ಅಫಜಲಪುರ ತಾಲೂಕಿನ, ಸಿದನೂರು ಎನ್ನುವ ಪುಟ್ಟ ಗ್ರಾಮದಲ್ಲಿ. ಅದೇ ಗ್ರಾಮದ ಯುವಕ ಬಲಭೀಮ ಸಗರ್ ಎನ್ನುವ 23 ವರ್ಷದ ಯುವಕ ದಸರಾ ಹಬ್ಬದ ನಿಮಿತ್ಯ ಸಿದನೂರು ಗ್ರಾಮಕ್ಕೆ  ಆಗಮಿಸಿದ್ದಾನೆ. ಕಲಬುರಗಿ ನಗರದಲ್ಲಿ ತನ್ನ ಅಕ್ಕಳ ಮನೆಯಲ್ಲಿ ವಾಸವಿರುವ ಈ ಯುವಕ, ಹಬ್ಬದ ನಿಮಿತ್ಯ ಎರಡು ದಿನಗಳ ಹಿಂದಷ್ಟೇ ಊರಿಗೆ ಆಗಮಿಸಿದ್ದಾನೆ. ತನ್ನ ಕುಟುಂಬದ ಜೊತೆಗೆ ಹಯಬ್ಬ ಆಚರಿಸುವ ಕನಸ್ಸು ಕಂಡಿದ್ದ ಆತ ಹಬ್ಬಕ್ಕೂ ಮೊನ್ನವೇ ಮಸಣ ಸೇರಿದ್ದಾನೆ. ನಿನ್ನೆ ಅಂದ್ರೆ ಅಕ್ಟೋಬರ್ 20ನೇ ತಾರಿಖು ರಾತ್ರಿ 9 ಗಂಟೆಯ ಸುಮಾರಿಗೆ ಊರಿನ ಬೀದಿಯಲ್ಲಿ ನಾಲ್ವರು ಈತನಿಗೆ ಸುತ್ತುವರಿದು, ತಲವಾರ ಮತ್ತು ಕೊಡಲಿಯಿಂದ ಮನಬಂದಂತೆ ಕೊಚ್ಚಿ ಹಾಕಿದ್ದಾರೆ. ಹಂತಕರ ಆಕ್ರೋಶಕ್ಕೆ ಈತನ ಕತ್ತು ದೇಹದಿಂದ ಬೇರ್ಪಟ್ಟು ಹೋಗಿದೆ. 

ಇದನ್ನೂ ವೀಕ್ಷಿಸಿ:  ಒಂದು ಸೇನೆ.. ಒಂದೇ ಟಾರ್ಗೆಟ್.. ಕಿಲ್ ಹಮಾಸ್..? ಏನದು NILI ಹುಲಿಗಳ ರಹಸ್ಯ..?

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
Read more