'ನಾನು ಮಾಜಿ ಡಿಸಿಎಂ ಮಗಳು..' ಎಂದು ಮೋಸ ಮಾಡುತ್ತಿದ್ದ ಐನಾತಿ ವಂಚಕಿ ಅಂದರ್!

Oct 31, 2020, 10:29 AM IST

ಬೆಂಗಳೂರು (ಅ. 31): ಎಂಥೆಂಥಾ ಚಾಲಾಕಿಗಳು ಇರ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಉದಾಹರಣೆ. ಜಿ.ಪರಮೇಶ್ವರ್‌ ಅವರ ಅಣ್ಣನ ಮಗಳ ಸೋಗಿನಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ ಸಾಲ ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಮಹಿಳೆಯೊಬ್ಬಳು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.

ಮೇಕಪ್ ರಾಣಿ ಆಂಟಿ ಪೂಜಾ.. ಬ್ರಹ್ಮಚಾರಿ ಸೋಮು.. ಮಂಡ್ಯದ ಭಲೇ ಜೋಡಿ!

ಬಹಳ ಚಾಲಾಕಿ ಇರುವ ಈಕೆ ನಾನು ಜಿ.ಪರಮೇಶ್ವರ್‌ ಅವರ ಅಣ್ಣನ ಮಗಳು. ಸಮಾಜ ಸೇವಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನಿರುದ್ಯೋಗಿಗಳು ಸ್ವಂತ ಉದ್ಯೋಗ ಹಾಗೂ ವ್ಯವಹಾರ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ .10 ಲಕ್ಷ ಸಾಲ ಕೊಡಿಸುತ್ತೇನೆ ಎಂದು ಕ್ಯಾಬ್ ಡ್ರೈವರ್ ರಾಜಶೇಖರ್‌ಗೆ ಎಂಬುವವರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಳು. ಈಗ ಪೊಲೀಸರ ಅತಿಥಿಯಾಗಿದ್ದಾಳೆ.