ವೋಟು ಹಾಕಿ ತಾಳಿ ಕಟ್ಟಿದ ಗೀತಾ ಧಾರಾವಾಹಿ ನಟ ಧನುಷ್ ಗೌಡ, ಭವ್ಯಾಳದ್ದೇ ಫುಲ್ ಒಡಾಟ!

Published : Apr 27, 2024, 01:31 PM IST

ಗೀತಾ ಸೀರಿಯಲ್ ನಲ್ಲಿ ವಿಜಯ್ ಪಾತ್ರದ ಮೂಲಕ ಮನೆಮಾತಾಗಿದ್ದ ಧನುಷ್ ಗೌಡ ಲೋಕಸಭಾ ಚುನಾವಣೆಯ ಹೊತ್ತಲ್ಲೆ ಅಂದರೆ ಏಪ್ರಿಲ್ 26 ರಂದು ಹಸೆಮಣೆ ಏರಿದ್ದಾರೆ.   

PREV
18
ವೋಟು ಹಾಕಿ ತಾಳಿ ಕಟ್ಟಿದ ಗೀತಾ ಧಾರಾವಾಹಿ ನಟ ಧನುಷ್ ಗೌಡ, ಭವ್ಯಾಳದ್ದೇ ಫುಲ್ ಒಡಾಟ!

ಕಲರ್ಸ್ ಕನ್ನಡವಾಹಿನಿಯಲ್ಲಿ  ಪ್ರಸಾರವಾಗುತ್ತಿದ್ದ ಗೀತಾ ಧಾರಾವಾಹಿಯಲ್ಲಿ(Geetha serial) ನಾಯಕ ವಿಜಯ್ ಪಾತ್ರದಲ್ಲಿ ಅಭಿನಯಿಸಿ, ಕನ್ನಡಿಗರ ಮನೆಗೆದ್ದಿದ ನಟ ಧನುಷ್ ಗೌಡ, ಏಪ್ರಿಲ್ 26 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

28

ಕರ್ನಾಟಕದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುವ ಹೊತ್ತಿನಲ್ಲೇ ಧನುಷ್ ವೈವಾಹಿಕ ಜೀವನಕ್ಕೆ (married life) ಕಾಲಿಟ್ಟಿದ್ದು, ಮದುವೆಗೂ ಮುನ್ನ ಪೂರ್ತಿ ರೆಡಿಯಾಗಿ ಮದುವೆ ಗೆಟಪ್ ನಲ್ಲೇ ಮತಗಟ್ಟೆಗೆ ತೆರಳಿ ವೋಟ್ ಮಾಡಿ ಕೂಡ ಬಂದಿದ್ದಾರೆ ಧನುಷ್. 
 

38

ತಮ್ಮ ಬಹು ಕಾಲದ ಗೆಳತಿ ಸಂಜನಾ (Sanjana) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಧನುಷ್ ಅವರ ಮದುವೆ ಫೋಟೋ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಧನುಷ್ ಸ್ನೇಹಿತರು, ಅಭಿಮಾನಿಗಳು, ಗೀತಾ ಸೀರಿಯಲ್ ಫ್ಯಾನ್ಸ್ ಎಲ್ಲರೂ ತಮ್ಮ ನೆಚ್ಚಿನ ನಟನಿಗೆ ವೈವಾಹಿಕ ಜೀವನಕ್ಕೆ ಶುಭ ಕೋರಿದ್ದಾರೆ. 
 

48

ಧನುಷ್ ಮತ್ತು ಸಂಜನಾ ವಿವಾಹ ಪೂರ್ವ ಆಚರಣೆಗಳು ಅಂದರೆ ಅರಿಶಿನ ಶಾಸ್ತ್ರ (Haldi ceremony) ಮೊದಲಾದ ಕಾರ್ಯಕ್ರಮಗಳು ಸಹ ಅದ್ಧೂರಿಯಾಗಿ ನಡೆದಿದ್ದು, ಅಲ್ಲಿನ ಸುಂದರ ಫೋಟೋಗಳು ಸಹ ವೈರಲ್ ಆಗುತ್ತಿವೆ. 
 

58

ಧನುಷ್ ಅವರ ಆರತಕ್ಷತೆ ಕಾರ್ಯಕ್ರಮವೂ ಅದ್ಧೂರಿಯಾಗಿ ನಡೆದಿದ್ದು, ರಿಸೆಪ್ಶನ್ ನಲ್ಲಿ ಭವ್ಯ ಗೌಡ, ಶರ್ಮಿತಾ ಶೆಟ್ಟಿ (Sharmitha Shetty) ಸೇರಿ ಹಲವಾರು ಕಿರುತೆರೆ ನಟರು ಆಗಮಿಸಿ ಶುಭಕೋರಿದ್ದರು. ಮದುವೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 
 

68

ಇನ್ನು ತಾಳಿ ಕಟ್ಟುವ ವೇಳೆ ವಧು ಸಂಜನಾ ಸಂತೋಷದಿಂದ ಕಣ್ಣೀರು ಹಾಕಿದ್ದು, ತಾಳಿ ಕಟ್ಟಿದ ಧನುಷ್ ಬಳಿಕ ಹೆಂಡತಿಯ ಹಣೆಗೆ ಸಿಹಿ ಮುತ್ತು ನೀಡಿ ಸಾಂತ್ವಾನ ಮಾಡಿದ್ದಾರೆ. ಬಳಿಕ ತಾಳಿ ಪೂಜೆ ನೆರವೇರಿಸಿದ್ದಾರೆ. 
 

78

ಗೀತಾ ಸೀರಿಯಲ್ ನಲ್ಲಿ ಗೀತಾ ಮತ್ತು ವಿಜಯ್ ಜೋಡಿಯನ್ನು ಜನರು ಇಷ್ಟ ಪಟ್ಟಿದ್ದರು. ರಿಯಲ್ ಲೈಫಲ್ಲೂ ಭವ್ಯಾ ಗೌಡ ಮತ್ತು ಧನುಷ್ ಗೌಡ, ಮದುವೆಯಾಗುತ್ತಿರಬಹುದು ಎಂದು ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ ಇವರಿಬ್ಬರು ಹಲವು ಭಾರಿ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಸಹ ಹೇಳಿಕೆ ನೀಡಿದ್ದರು.  ಬಳಿಕ ಧನುಷ್ ಸಂಜನಾ ಜೊತೆ ನಿಶ್ಚಿತಾರ್ಥದ ಮೂಲಕ ಎಲ್ಲಾ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಇಟ್ಟಿದ್ದರು.

88

ಇನ್ನು ತಮ್ಮ ಬೆಸ್ಟ್ ಫ್ರೆಂಡ್ ಮದುವೆಯಲ್ಲಿ ಗೀತಾ ಖ್ಯಾತಿಯ ಭವ್ಯಾ ಗೌಡ (Bhavya Gowda) ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದು,  ನೀಲಿ ಬಾರ್ಡರ್ ಬಂದಿರೋ, ಹಸಿರು ಸೀರೆ, ಹಸಿರು ಬ್ಲೌಸ್ ತೊಟ್ಟ ಭವ್ಯಾ ತುಂಬಾನೆ ಸುಂದರವಾಗಿ ಕಾಣೀಸುತ್ತಿದ್ದರು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories