ಒಬ್ಬಳನ್ನೇ ಸಹಿಸ್ಕೊಳಕ್ಕಾಗ್ತಿಲ್ಲ, ಇನ್ನೊಂದು ಉರ್ಫಿ ಆಗ್ಬೇಡಿ: ಭೂಮಿ ಪೆಡ್ನಾಕರ್‌ಗೆ ಉಗೀತಿರೋ ನೆಟ್ಟಿಗರು!

Published : Apr 27, 2024, 01:09 PM IST
ಒಬ್ಬಳನ್ನೇ ಸಹಿಸ್ಕೊಳಕ್ಕಾಗ್ತಿಲ್ಲ, ಇನ್ನೊಂದು ಉರ್ಫಿ ಆಗ್ಬೇಡಿ: ಭೂಮಿ ಪೆಡ್ನಾಕರ್‌ಗೆ ಉಗೀತಿರೋ ನೆಟ್ಟಿಗರು!

ಸಾರಾಂಶ

ಸೆನ್ಸಿಟಿವ್ ಆಕ್ಟರ್ ಭೂಮಿ ಪೆಡ್ನಾಕರ್ ಸದ್ಯ ಟ್ರೋಲ್ ಮೇಲೆ ಟ್ರೋಲ್‌ಗೆ ಒಳಗಾಗ್ತಿದ್ದಾರೆ. ಸೆನ್ಸಿಟಿವ್ ನಟಿ ಅಂಥ ಕೆಲಸ ಏನು ಮಾಡಿದ್ರು?  

ಭೂಮಿ ಪೆಡ್ನಾಕರ್. ಬಾಲಿವುಡ್‌ನ ಅಪರೂಪದ ಪರ್ಫಾಮರ್. ಧಮ್ ಲಗಾಕೆ ಐಸಾ ಸಿನಿಮಾದಲ್ಲಿ ಡುಮ್ಮಿ ಹೆಣ್ಣಾಗಿ ಇವರ ನಟನೆಗೆ ಮಾರು ಹೋಗದವರಿಲ್ಲ. ಅಷ್ಟಕ್ಕೂ ಭೂಮಿಗೆ ನಟಿ ಆಗಬೇಕು ಅನ್ನೋ ಕನಸೇನೋ ಇರಲಿಲ್ಲ. ಆಕೆ ಅಸಿಸ್ಟೆಂಟ್ ಡೈರೆಕ್ಟರ್‌ ಆಗಿದ್ದು ತನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದವಳು. ಆದರೆ 'ಧಮ್ ಲಗಾಕೆ ಐಸಾ' ದಂಥಾ ಸಿನಿಮಾದಲ್ಲಿ ಬಾಡಿ ಟ್ರಾನ್ಸ್‌ಫರ್ಮೇಶನ್‌ಗೆ ಬೇರೆ ಯಾವ ನಟಿಯರೂ ಮುಂದೆ ಬರದಿದ್ದಾಗ ಅನಿವಾರ್ಯವಾಗಿ ಈಕೆ ಎಂಟ್ರಿ ಕೊಟ್ಟರು. ಈ ಬಣ್ಣದ ಲೋಕವೇ ಹಾಗೆ. ಎಂಟ್ರಿ ಕೊಡೋವರೆಗೆ ಇದು ನಂದಲ್ಲ ಅನ್ನೋ ಹಾಗೆ ಇದ್ದವರೂ ಒಮ್ಮೆ ಎಂಟ್ರಿಕೊಟ್ಟ ಮೇಲೆ ಇಂಡಸ್ಟ್ರಿಯ ನಟಿಯರು ಎದುರಿಸೋ ಸಮಸ್ಯೆಗಳಿಗೆಲ್ಲ ತಲೆ ಕೊಡಲೇ ಬೇಕಾಗುತ್ತದೆ. ಕೆಲವೊಮ್ಮೆ ಈ ಪ್ರೊಸೆಸ್‌ನಲ್ಲಿ ಎಡವಟ್ಟಾಗಿ ಉಗಿಸಿಕೊಳ್ಳೋದೂ ಇದೆ. ಸದ್ಯ ಭೂಮಿ ಪೆಡ್ನಾಕರ್ ಸ್ಥಿತಿ ಇಂಗೇ ಆಗಿದೆ ಅಂದ್ರೆ ತಪ್ಪಾಗಲ್ಲ ಫ್ರೆಂಡ್ಸ್.

ಸದ್ಯ ನಾವಿರೋ ಕಾಲ ಹೇಗಿದೆ ಅಂದರೆ ನಮ್ಮನ್ನು ನಾವೇ ಕಸ್ಟಮರೈಸ್ ಮಾಡ್ಕೋಬೇಕು. ಸಿನಿಮಾ ರಂಗದಲ್ಲಂತೂ ಅದು ಮಸ್ಟ್ ಆಂಡ್ ಶುಡ್. ಹೀಗೆ ತನ್ನನ್ನ ನಾನು ಕಸ್ಟಮರೈಸ್ ಮಾಡಿಕೊಳ್ಳೋಕೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ ಭೂಮಿ. ಅದರಿಂದ ಯಾವ ಲೆವೆಲ್‌ಗೆ ಟ್ರೋಲ್ ಆಗ್ತಿದ್ದಾರೆ ಅಂದರೆ 'ಅಮ್ಮಾ ತಾಯೀ, ಈಗಿರೋ ಒಬ್ಳು ಉರ್ಫಿನೇ ತಡ್ಕೊಳಕ್ಕಾಗ್ತಿಲ್ಲ. ಇನ್ನು ನೀನೂ ಮತ್ತೊಂದು ಉರ್ಫಿ ಆಗ್ಬೇಡ' ಅಂತ ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ.

ನಟಿಯಾಗುವ ಫೇಸ್ ಅಲ್ಲ, ನಟನೆ ಬರುವುದಿಲ್ಲ ಅಂದಿದ್ರು, ಸಂಕಟಪಟ್ಟು ಅಳುತ್ತಿದ್ದೆ; ನಟಿ ರಶ್ಮಿಕಾ ಮಂದಣ್ಣ

ತನ್ನ ಅಭಿನಯದಿಂದ ಮತ್ತು ಪಾತ್ರಗಳ ಆಯ್ಕೆಯಿಂದ ಜನ ಮನ ಗೆದ್ದಿರುವ ಭೂಮಿ ಪಡ್ನೇಕರ್ ಅವರ ತಲೆಯನ್ನ ಅದ್ಯಾವ ಪುಣ್ಯಾತ್ಮ ಕೆಡಿಸಿದನೋ ಗೊತ್ತಿಲ್ಲ. ಗೋಣಿ ಚೀಲವನ್ನೂ ಬಿಡದ ಉರ್ಫಿ ಜಾವೇದ್ ಜೊತೆ ಭೂಮಿ ಪೆಡ್ನೇಕರ್ ಸ್ಫರ್ಧೆಗಿಳಿದಿದ್ದಾರೆ. ಇದಕ್ಕೆ ಮೊನ್ನೆ ನಡೆದ ಫ್ಯಾಷನ್ ಶೋ ಸಾಕ್ಷಿ ಫ್ಯಾಷನ್‌ ಶೋವೊಂದರಲ್ಲಿ ಭಾಗಿಯಾಗಿದ್ದ ಭೂಮಿ, ಬ್ರಾ ಇಲ್ಲದೆ ವಿಚಿತ್ರವಾದ ಕಾಸ್ಟೂಮ್‌ನಲ್ಲಿ ಕಣ್ಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಬಿಳಿ ಬಣ್ಣದ ಲಾಂಗ್‌ ಸ್ಕರ್ಟ್‌ ಹಾಗೂ ವಿಭಿನ್ನವಾಗಿರುವ ವೈಟ್‌ ಬ್ಲೇಜರ್‌ ಹಾಕಿಕೊಂಡು ಪ್ರತ್ಯಕ್ಷವಾದ ಭೂಮಿ ಪೆಡ್ನೇಕರ್ ಅನೇಕರನ್ನ ತಬ್ಬಿಬ್ಬುಗೊಳಿಸಿದ್ದಾರೆ.

ಬಾಲಿವುಡ್​ ನಟಿ ಭೂಮಿ ಪೆಡ್ನೇಕರ್​ಗೆ ಇದೇನಾಗಿದೆ? ವೈರಲ್​ ವಿಡಿಯೋ ನೋಡಿ ದಂಗಾದ ಅಭಿಮಾನಿಗಳು

ಬೇರೆಯವರ ಕಥೆ ಬಿಡಿ ತಾವೇ ಖುದ್ದು ಮುಜುಗರಕ್ಕೂ ಒಳಗಾಗಿದ್ದಾರೆ. ಅಸಲಿಗೆ ಭೂಮಿ ಧರಿಸಿದ್ದ ಬಟ್ಟೆಯಲ್ಲಿ, ಏನೋ ವ್ಯತ್ಯಾಸ ಕಂಡು ಬಂದಿದೆ. ಅಲ್ಲಿದ್ದವರ ಗಮನಕ್ಕೂ ಬಂದಿದೆ. ಆ ವಿಚಾರವನ್ನ ಭೂಮಿ ಬಳಿ ಅವರು ಹೇಳಿದ್ದೇ ತಡ, ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಂಡು ಬೋರ್ಡ್ ಹಿಂದೆ ಹೋಗಿದ್ದಾರೆ. ಅಲ್ಲಿ ಕಾಸ್ಟ್ಯೂಮ್ ಸರಿ ಪಡಿಸಿಕೊಂಡಿದ್ದಾರೆ. ಭೂಮಿಯ ಈ ನಡೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್ ಕೂಡ ಆಗಿದೆ.

 

ಇದನ್ನು ನೋಡಿ ನೆಟ್ಟಿಗರು ಉರ್ಫಿ ಜಾವೇದ್ ಜೊತೆ ಭೂಮಿ ಪೆಡ್ನೇಕರ್ ಅವರ ಹೋಲಿಕೆಯನ್ನ ಮಾಡುತ್ತಿದ್ದಾರೆ. ಇರುವ ಒಬ್ಬ ಉರ್ಫಿ ಜಾವೇದ್ ಅವರನ್ನೇ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಈ ಸಮಯದಲ್ಲಿ ನೀವು ಅವರಂತೆ ಆಗಬೇಡಿ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಬಾಲಿವುಡ್‌ನಲ್ಲಿ ನಿಮಗೆ ನಿಮ್ಮದೇ ಆದ ಸ್ಥಾನ-ಮಾನ ಇದೆ ಅದನ್ನ ಕಳೆದುಕೊಳ್ಳಬೇಡಿ ಅನ್ನುತ್ತಿದ್ದಾರೆ. ಉರ್ಫಿ ಜಾವೇದ್ ಜೊತೆ ಬಟ್ಟೆಯ ವಿಚಾರದಲ್ಲಿ ಸ್ಫರ್ಧೆ ಎಲ್ಲ ಮಾಡಬೇಡಿ ಎಂಬ ಸಲಹೆಯನ್ನ ಕೂಡ ಅನೇಕರು ಭೂಮಿ ಪೆಡ್ನೇಕರ್ ಅವರಿಗೆ ಕೊಡುತ್ತಿದ್ದಾರೆ.

34ರ ಹರೆಯದ ಈ ನಟಿ ಹೀಗೆ ಸದ್ಯ ತನ್ನ ಡ್ರೆಸ್ ಕಾರಣಕ್ಕೆ ಪೇಚಿಗೆ ಸಿಲುಕಿದ್ದಾರೆ. ಭೂಮಿ ಬಾಲಿವುಡ್‌ಗೆ ಬಂದ 9 ವರ್ಷಗಳಲ್ಲಿ ಖಾಲಿ ಕುಳಿತ ಉದಾಹರಣೆ ಇಲ್ಲ. ವರ್ಷಕ್ಕೆ ಮೂರು ನಾಲ್ಕು ಸಿನಿಮಾಗಳನ್ನ ಮಾಡುತ್ತಾ ಪ್ರತಿಭಾವಂತೆ ಅನಿಸಿಕೊಂಡಿದ್ದರು. ಆದರೆ ಈಗ ಭೂಮಿ ಪೆಡ್ನೇಕರ್ ಕೈಯಲ್ಲಿ ಕೇವಲ ಒಂದು ಸಿನಿಮಾ ಮಾತ್ರ ಇದೆ. ಈ ಕಾರಣಕ್ಕೆ ಗಮನ ಸೆಳೆಯಲು, ಭೂಮಿ ಪೆಡ್ನೇಕರ್ ಮಾಡ್ತಿರುವ ಬಗೆ ಬಗೆಯ ಕಸರತ್ತುಗಳ ಪೈಕಿ ಇದು ಒಂದು ಎಂಬ ಅಭಿಪ್ರಾಯವನ್ನೂ ಕೂಡ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಸತ್ಯ ಏನು ಅನ್ನೋದು ಭೂಮಿಗಷ್ಟೇ ಗೊತ್ತು. ಆದರೆ ಈ ಭೂಮಿ ತೂಕದ ಹುಡುಗಿ ಪ್ರತಿಭಾವಂತೆ ಎಂದು ಗುರುತಿಸಿಕೊಂಡಾಕೆ ಇಂಥಾ ಚೀಪ್ ಗಿಮಿಕ್ ಮಾಡದೇ ಇರಲಿ ಅಂತ ಈಕೆಯ ಅಭಿಮಾನಿಗಳು ಆಶಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್