ನೇಲ್ ಆರ್ಟ್‌ನಿಂದ ಗಿನ್ನಿಸ್ ರೆಕಾರ್ಡ್ ಮಾಡಿ, ನೇಲ್ ಸ್ಟುಡಿಯೋ ತೆರೆದ ನಟಿ ಸೊನಾಕ್ಷಿ ಸಿನ್ಹಾ!

First Published | Apr 27, 2024, 1:16 PM IST

ನಟಿ ಸೊನಾಕ್ಷಿ ಸಿನ್ಹಾ ಕೇವಲ ಉಗುರಿಗೆ ಬಣ್ಣ ಬಳಿದುಕೊಂಡೇ ಗಿನ್ನೆಸ್ ವಿಶ್ವದಾಖಲೆಗೆ ಸೇರಿದ್ದರು. ಇದೀಗ ಅವರು, ನೇಲ್ ಆರ್ಟ್‌ಗಾಗಿಯೇ ದೊಡ್ಡ ಶಾಪ್ ತೆರೆದಿದ್ದಾರೆ. ಇಂಥಹ ಶಾಪ್ ದೇಶದಲ್ಲಿ ಇದೇ ಮೊದಲನೆಯದು..

ನಟಿ ಸೊನಾಕ್ಷಿ ಸಿನ್ಹಾ ಕೇವಲ ಉಗುರಿಗೆ ಬಣ್ಣ ಬಳಿದುಕೊಂಡೇ ಗಿನ್ನೆಸ್ ವಿಶ್ವದಾಖಲೆಗೆ ಸೇರಿದ್ದರು. ಇದೀಗ ಅವರು, ನೇಲ್ ಆರ್ಟ್‌ಗಾಗಿಯೇ ದೊಡ್ಡ ಶಾಪ್ ತೆರೆದಿದ್ದಾರೆ. ಇಂಥಹ ಶಾಪ್ ದೇಶದಲ್ಲಿ ಇದೇ ಮೊದಲನೆಯದು..

ಹೌದು, ಸಧ್ಯ ಹಿರಾಮಂಡಿಯಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಸೊನಾಕ್ಷಿ ಸಿನ್ಹಾಗೆ ಉಗುರಿನ ಬಣ್ಣಗಳು, ವಿನ್ಯಾಸಗಳ ಮೇಲೆ ಮೊದಲಿಂದಲೂ ವಿಪರೀತ ಮೋಹ. 

Tap to resize

ಸಾಕಷ್ಟು ಮಹಿಳೆಯರು ಕೂಡಾ ಉಗುರನ್ನು ತಮ್ಮ ಫ್ಯಾಶನ್ ‌ಗಾಗಿ ಬಳಸುತ್ತಾರೆ. ನೇಲ್ ಆರ್ಟ್ ಕೇವಲ ಉಗುರಿನ ಮೂಲಕವೇ ಎಲ್ಲರ ಗಮನ ನಿಮ್ಮೆಡೆ ಸೆಳೆಯುವಂತೆ ಮಾಡುತ್ತದೆ. 

ಅಂದ ಹಾಗೆ ನಟಿ ಸೊನಾಕ್ಷಿ ಸಿನ್ಹಾ 2016ರಲ್ಲಿ ತಮ್ಮ ಉಗುರಿಗೆ ಬಣ್ಣ ಬಳಿದುಕೊಂಡು ಗಿನ್ನೆಸ್ ವಿಶ್ವದಾಖಲೆ ಮಾಡಿದ್ದರು. ಇಷ್ಟಕ್ಕೂ ಹೆಚ್ಚು ಮಹಿಳೆಯರು ಒಟ್ಟಿಗೇ ಕೂತು ನೇಲ್ ಪೇಂಟ್ ಮಾಡಿಕೊಂಡ ಕಾರಣಕ್ಕೆ ಇದು ದಾಖಲೆಯಾಗಿತ್ತು. 

ಇದೇ ಪ್ರೇರಣೆಯಾಗಿ ಇದೀಗ ಸೌಂದರ್ಯ ಉದ್ಯಮಕ್ಕೆ ಕಾಲಿಟ್ಟಿರುವ ನಟಿ, ಸೋಜಿ ಎಂಬ ಆರ್ಟಿಫಿಶಿಯಲ್ ಉಗುರುಗಳ ಅಂಗಡಿಯನ್ನು ಪುಣೆಯ ಮಾಲ್‌ನಲ್ಲಿ ತೆರೆದಿದ್ದಾರೆ. 

ನಟಿ ಸೋನಾಕ್ಷಿ ಸಿನ್ಹಾ ಅವರಿಂದ ಸ್ಫೂರ್ತಿ ಪಡೆದು ನೀವು ನೇಲ್ ಆರ್ಟ್ ಮಾಡಬಹುದು. ಪಾರ್ಟಿಗೆ ಹೋಗುವುದಕ್ಕಾಗಿ ಸೋನಾಕ್ಷಿ ಸಿನ್ಹಾ ಅವರಂತೆ ನಿಮ್ಮ ಉಗುರುಗಳನ್ನು ವಿನ್ಯಾಸಗೊಳಿಸಬಹುದು. 

ಆಕೆಯ ಇನ್ಸ್ಟಾ ಫೋಟೋಗಳಲ್ಲಿ ಹಲವಾರು ವಿಶಿಷ್ಠವಾದ ಉಗುರಿನ ವಿನ್ಯಾಸಗಳನ್ನು ಕಾಣಬಹುದು. ಇವು ಬೋಲ್ಡ್ ಲುಕ್ ನೀಡಲೂ ಸೈ, ವಿಶೇಷ ಲುಕ್ ನೀಡಲೂ ಸೈ.

ಬೇರೆಲ್ಲ ನಟಿಯರು ಉದ್ಯಮವೆಂದು ಹೋದಾಗ ಬಟ್ಟೆ, ಮೇಕಪ್, ಆಭರಣಗಳ ಕಡೆ ಗಮನ ಹರಿಸಿದ್ದರೆ, ಸೊನಾಕ್ಷಿ ಸಿನ್ಹಾ ಯಾರೂ ತುಳಿಯದ ಹಾದಿ ಹಿಡಿದು ನೇಲ್ ಆರ್ಟನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರುವುದು ವಿಶೇಷವಾಗಿದೆ. 

ಅವರ ಫೋಟೋಗಳನ್ನು ನೋಡಿದ ಮಹಿಳೆಯರು ಕೂಡಲೇ ತಮ್ಮ ಉಗುರಿನ ಕಡೆ ವಿಶೇಷ ಗಮನ ಹರಿಸಲು ಮನಸ್ಸು ಮಾಡಿ ನೇಲ್ ಪೇಂಟ್ ಶಾಪಿಂಗ್ ಮಾಡಿದರೆ ಅಚ್ಚರಿ ಇಲ್ಲ. 

Latest Videos

click me!