ಚಿಲ್ಲರೆ ದುಡ್ಡಿಗಾಗಿ ಸ್ವಂತ ಚಿಕ್ಕಪ್ಪನನ್ನೇ ಕೊಂದ ಪಾಪಿ: ಕೊಲೆಗೆ ಸಾಕ್ಷಿಯಾಗಿದ್ದು ನೊಣ!

Nov 8, 2024, 9:07 AM IST

ಬೆಂಗಳೂರು(ನ.08):  ಒಂದು ಕೊಲೆ.. ಝೀರೋ ಸಾಕ್ಷಿ.. ಕೊಲೆಗಾರನ ಪತ್ತೆ ಮಾಡಿದ್ದು ‘ಈಗ’.. ಪೊಲೀಸರನ್ನು ಕೊಲೆಗಾರನ ಬಳಿ  ನಿಲ್ಲಿಸಿತ್ತು ಬುದ್ದಿಂತ ನೊಣವೊಂದು..  ಇದು ‘ಈಗ’ ಸಿನಿಮಾ ಅಲ್ಲ.. ನಿಜ ನೊಣದ ಥ್ರಿಲ್ಲರ್ ಸ್ಟೋರಿ.. ಇದೆಲ್ಲ ತಿಳಿಯೋದೇ ಈ ಕ್ಷಣದ ವಿಶೇಷ ಕೊಲೆಗೆ ನೊಣ ಸಾಕ್ಷಿ  

ನಾವೀಗ ಹೇಳಲು ಹೊರಟಿರೋದು ಒಂದು ಮರ್ಡರ್ ಸ್ಟೋರಿ. ಈ ಮರ್ಡರ್ ಸ್ಟೋರಿಯಲ್ಲಿ ಕೊಲೆಗಾರ ಪತ್ತೆಯಾಗಿರೋ ರೀತಿ ಇದೆಯಲ್ವಾ ಅದು ತುಂಬಾ ರೋಚಕ. ಯಾವುದೇ ಥ್ರಿಲ್ಲಿಂಗ್.. ಸಸ್ಪೆನ್ಸ್ ಸಿನಿಮಾಗಳಲ್ಲೂ ಪತ್ತೆಯಾಗದ ರೀತಿಯಲ್ಲಿ ಇಲ್ಲಿ ಕೊಲೆಗಾರ ಪತ್ತೆಯಾಗಿದ್ದಾನೆ. ಕೊಲೆಗಾರ ಯಾರು ಎಂದು ಪೊಲೀಸರು ತಲೆ ಕೆಡಿಸಿಕೊಂಡು ಹುಡುಕುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಸಹಾಯಕ್ಕೆ ಬಂದಿದ್ದು ನೊಣ. ಹೌದು ಕಳ್ಳಾಟ ಆಡುತ್ತಿದ್ದ ಕೊಲೆಗಾರನನ್ನು ನೊಣವೊಂದು ಪೊಲೀಸರಿಗೆ ಕೊಲೆಗಾರನನ್ನು ಹುಡುಕಿ ಕೊಟ್ಟ ಸಖತ್ ಇಂಟ್ರಸ್ಟಿಂಗ್ ಸ್ಟೋರಿ ಇದು. 

ರೆಸಾರ್ಟ್‌ನಲ್ಲಿ 5 ಹುಡುಗರು, 2 ಹುಡುಗಿಯರು; ಸ್ವಿಮ್ಮಿಂಗ್ ಪೂಲ್‌ನಲ್ಲಿದ್ದ ಯುವತಿಯರ ನೋಡಿ ಬಂದ ಅಪರಿಚಿತರು...

ಅನುಮಾನ ಬಂದ ಆ ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಎತ್ತಾಕೊಡು ಹೋಗ್ತಾರೆ. ಎತ್ತಾಕೊಂಡು ಹೋಗಿ ಡೌಟ್ನಿಂದಲೇ ವಿಚಾರಣೆ ಆರಂಭಿಸಿದ್ದ ಪೊಲೀಸರಿಗೆ ಶಾಕ್ ಆಗಿತ್ತು. ಯಾಕೆಂದ್ರೆ ಮನೋಜ್ ಕುಮಾರ್ ಠಾಕೂರ್ನನ್ನು ಕೊಲೆ ಮಾಡಿದ್ದ ವ್ಯಕ್ತಿ ಅವನೇ ಆಗಿದ್ದ. 

ಆ ವ್ಯಕ್ತಿಯ ಮೈ ಮೇಲೆ ಅಷ್ಟೊಂದು ನೊಣಗಳು ಕೂತಿದ್ದು ಏಕೆ? ಮೈ ಮೇಲೆ ನೊಣ ಕೂತಿದ್ದ ಒಂದೇ ಕಾರಣಕ್ಕೆ ಪೊಲೀಸ್ ಆತನನ್ನ ಎತ್ತಾಕೊಂಡು ಹೋಗಿದ್ದು ಏಕೆ? ಅವನೇ ಕೊಲೆಗಾರ ಅನ್ನೋದನ್ನು ಪೊಲೀಸರಿಗೆ ನೊಣ ಹೇಳಿಕೊಟ್ಟಿದ್ದು ಹೇಗೆ?  ಹಾಗಿದ್ರೆ ಧರ್ಮ ಠಾಕೂರ್ ತನ್ನ ಚಿಕ್ಕಪ್ಪನನ್ನೇ ಕೊಲೆ ಮಾಡಿದ್ದು ಏಕೆ? ಕೊಲೆ ಮಾಡುವಂತದ್ದೇನಿತ್ತು? ಅಷ್ಟಕ್ಕೂ ಕೊಲೆ ಮಾಡಿ ಪರಾರಿಯಾಗಿ ಓಡಿ ಹೋಗೋದು ಬಿಟ್ಟು, ಕೊಲೆಗಾರ ಪೊಲೀಸರು ಇದ್ದಾಗಲೇ ಅಲ್ಲೇ ಬಂದು ನಿಂತದ್ದು ಏಕೆ?  

ಮನೋಜ್ ಠಾಕೂರ್ ಮತ್ತು ಧರ್ಮ ಠಾಕೂರ್ ಇಬ್ಬರು ದೀಪಾವಳಿ ಹಬ್ಬದ ಸಂಭ್ರಮದಲ್ಲಿರ್ತಾರೆ. ಆದ್ರೆ ಒಂದಿಷ್ಟು ದುಡ್ಡಿನ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗುತ್ತೆ. ದುಡ್ಡಿನ ವಿಚಾರಕ್ಕೆ ಶುರುವಾದ ಜಗಳ ಜಗಳ ನಂತರ ಕೊಲೆಯಲ್ಲಿ ಅಂತ್ಯವಾಗುತ್ತೆ. ಕುಡಿದಾಗ ಬುದ್ದಿ ಯಾವ ಕುಡುಕನ ಕಂಟ್ರೋಲ್ನಲ್ಲೂ ಇರೋದಿಲ್ಲ. ಜಗತ್ತಿನಲ್ಲಿ ನಡೆಯುವ ಅದೆಷ್ಟೋ ಕ್ರೈಂಗಳು ನಶೆಯಲ್ಲೇ ನಡೆಯುತ್ತವೆ.