ವಕ್ಫ್ ವಿಚಾರವಾಗಿ ಇಲ್ಲಿನ ರೈತರ ಅಹವಾಲು ಕೇಳಬೇಕು ಎಂದು ನಾನು ಬಂದಿದ್ದೇನೆ. ಮುಂಬರುವ ಅಧಿವೇಶದನಲ್ಲಿ ವಕ್ಫ್‌ಗೆ ಸಂಬಂಧಿಸಿದ ಬಿಲ್ ಬರುವುದಿದೆ. ಅದಕ್ಕೂ ಮೊದಲು ಜನರಿಂದ ಮಾಹಿತಿ ಪಡೆದು, ಲೋಕಸಭೆಯ ಸ್ಪೀಕರ್‌ಗೆ ಸಮಗ್ರವಾದ ವರದಿಯನ್ನು ಸಲ್ಲಿಸಲಾಗುವುದು.
ವಿಜಯಪುರ/ಹುಬ್ಬಳ್ಳಿ (ನ.08): ವಕ್ಫ್ ವಿಚಾರವಾಗಿ ಇಲ್ಲಿನ ರೈತರ ಅಹವಾಲು ಕೇಳಬೇಕು ಎಂದು ನಾನು ಬಂದಿದ್ದೇನೆ. ಮುಂಬರುವ ಅಧಿವೇಶದನಲ್ಲಿ ವಕ್ಫ್‌ಗೆ ಸಂಬಂಧಿಸಿದ ಬಿಲ್ ಬರುವುದಿದೆ. ಅದಕ್ಕೂ ಮೊದಲು ಜನರಿಂದ ಮಾಹಿತಿ ಪಡೆದು, ಲೋಕಸಭೆಯ ಸ್ಪೀಕರ್‌ಗೆ ಸಮಗ್ರವಾದ ವರದಿಯನ್ನು ಸಲ್ಲಿಸಲಾಗುವುದು. ರೈತರ ಜಮೀನು ವಕ್ಫ್ ಮಾಡಬಾರದು, ವಕ್ಫ್ ಅಸ್ತಿಯನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂಬ ಕಾನೂನು ಜಾರಿಗೆ ತರಲು ಜೆಪಿಸಿ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದರು. ಶುಕ್ರವಾರ ವಿಜಯಪುರದಲ್ಲಿ ನಡೆಯುತ್ತಿದ್ದ ವಕ್ಫ್ ವಿರುದ್ಧದ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ಮಠಾಧೀಶರು, ರೈತರು, ಮುಖಂಡರ ಅಳಲು ಆಲಿಸಿ ಅವರು ಮಾತನಾಡಿದರು.
ಜೆಪಿಸಿ ಕಮಿಟಿ ಹಿಂದೂಸ್ತಾನಕ್ಕಾಗಿ ಒಳ್ಳೆಯ ಕಾನೂನು ಮಾಡಲು ಪ್ರಯತ್ನಿಸುತ್ತದೆ. ವಕ್ಫ್ ಮೂಲಕ ಯಾರೂ ಸಹ ದುರುಪಯೋಗ ಮಾಡಿಕೊಳ್ಳಲು ಆಗದಂತಹ ಕಾನೂನು ತರಲಾಗುವುದು ಎಂದರು. ಜಿಪಿಸಿ ಕಮಿಟಿಯಲ್ಲಿ ಎಲ್ಲ ಪಕ್ಷಗಳ ಸಂಸದರೂ ಸೇರಿ 21 ಸದಸ್ಯರು ಇದ್ದಾರೆ. ಎಲ್ಲರೂ ಸೇರಿ ಒಂದು ವರದಿ ತಯಾರು ಮಾಡಲಿದ್ದೇವೆ. ಕಮಿಟಿ ರಚನೆಯಾಗಿ ಕೇವಲ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಶೇ.28 ಪರ್ಸೆಂಟ್ ವಕ್ಫ್ ಆಸ್ತಿ ಎಂದು ನೋಟಿಸ್ ಕೊಡಲಾಗಿದೆ. ವಕ್ಫ್ ಸಚಿವ ಜಮೀರ್ ಅಹ್ಮದ್ ಆಸ್ತಿಗಳನ್ನು ವಕ್ಫ್ ಮಾಡಲು ಟಾರ್ಗೆಟ್ ಕೊಟ್ಟಿದ್ದಾರೆ. ಕಾನೂನು ಪಾಸ್ ಆಗುವ ಮೊದಲೇ ಯಾಕೆ ನೋಟಿಸ್ ಕೊಡುತ್ತಿದ್ದಾರೆ?.
undefined
ಕಾಂಗ್ರೆಸ್ ಪಕ್ಷ ಕೊಳ್ಳೆ ಹೊಡೆದ ಹಣ ಎಲೆಕ್ಷನ್‌ಗೆ ಬಳಸುತ್ತಿದೆ: ಸದಾನಂದಗೌಡ
ವಕ್ಫ್ ಎಂದು ಹೆಸರು ಸೇರಿಸುತ್ತಿದ್ದಾರೆ? ಅದನ್ನು ತಿಳಿಯಲೆಂದೇ ಜೆಪಿಸಿ ತಂಡ ಇಲ್ಲಿಗೆ ಬಂದಿದೆ ಎಂದು ಹೇಳಿದರು. ಭಾರತೀಯ ಪುರಾತತ್ವ ಇಲಾಖೆಯ ಆಸ್ತಿಗಳನ್ನು ಯಾರೂ ಅತಿಕ್ರಮಣ ಮಾಡುವಂತಿಲ್ಲ. ಅಂತಹ 53 ಐತಿಹಾಸಿಕ ಸಂರಕ್ಷಿತ ಸ್ಥಳಗಳನ್ನು ವಕ್ಫ್ ತನ್ನ ಗೆಜೆಟ್‌ನಲ್ಲಿ ಹಾಕಿಕೊಂಡಿದೆ. ಕರ್ನಾಟಕದಲ್ಲಿ ನೂರಾರು ವರ್ಷದಿಂದ ಉಳುಮೆ ಮಾಡುತ್ತಿದ್ದ ಜಮೀನುಗಳಲ್ಲಿ ವಕ್ಫ್ ಹೆಸರು ನಮೂದಾಗಿದೆ. ರೈತರಷ್ಟೇ ಅಲ್ಲ ಮಠ, ಮಂದಿರಗಳ ಆಸ್ತಿಯನ್ನೂ ವಕ್ಫ್ ತಮ್ಮದೆಂದು ಹೇಳಿರುವುದು ಅತ್ಯಂತ ಗಂಭೀರ ವಿಷಯ. ಸರ್ಕಾರದ ಹಸ್ತಕ್ಷೇಪ ಇಲ್ಲದೇ ಇದ್ದರೆ ಇದು ಹೇಗೆ ಸಾಧ್ಯವಾಗಲಿದೆ? ಎಂದು ಪ್ರಶ್ನಿಸಿದರು.
ಎಲ್ಲರನ್ನೂ ದೆಹಲಿಗೆ ಕರೆಸಿ ವಿಚಾರಣೆ: ನೀವು ಕೊಟ್ಟಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತೇವೆ. ಅವಶ್ಯಕತೆ ಬಿದ್ದರೆ ರೈತರನ್ನು, ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ವಕ್ಫ್ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆಯಲಿದ್ದೇವೆ. ರೈತರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ದೆಹಲಿಗೆ ಕರೆಯಲಿದ್ದೇವೆ. ಕರ್ನಾಟಕದಲ್ಲಿ ಈ ಕುರಿತು ಬಿಜೆಪಿಯಿಂದ ರಚನೆಯಾಗಿರುವ ಸತ್ಯ ಶೋಧನಾ ಸಮಿತಿಯವರನ್ನು ದೆಹಲಿಗೆ ಕರೆಸಿಕೊಂಡು ಸಮಾಲೋಚನೆ ಮಾಡಲಾಗುವುದು. ನಂತರ ಸಮಗ್ರ ವರದಿ ಸಿದ್ಧಪಡಿಸಿ ಸ್ಪೀಕರ್‌ಗೆ ಸಲ್ಲಿಸಲಾಗುವುದು ಎಂದರು.
ವಕ್ಫ್ ಬೋರ್ಡ್ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ: ವಿಪಕ್ಷ ನಾಯಕ ಆರ್.ಅಶೋಕ್
70ಕ್ಕೂ ಹೆಚ್ಚು ಅಹವಾಲು ಸ್ವೀಕಾರ: ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಧಾರವಾಡ, ಗದಗ, ಹಾವೇರಿ ಸೇರಿ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು, ಶಾಸಕರು, ಜನಪ್ರತಿನಿಧಿಗಳ ನಿಯೋಗದಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ, ಜೆಪಿಸಿ ಅಧ್ಯಕ್ಷರಿಗೆ 70ಕ್ಕೂ ಅಧಿಕ ಅಹವಾಲುಗಳನ್ನು ಸಲ್ಲಿಕೆ ಮಾಡಲಾಯಿತು. ಇದೇ ವೇಳೆ, ಬಿಜೆಪಿಯಿಂದ ರಚನೆಯಾಗಿರುವ ಸತ್ಯ ಶೋಧನಾ ಸಮಿತಿಯ ಸಮಗ್ರ ವರದಿಯನ್ನು ಸಮಿತಿಯ ಅಧ್ಯಕ್ಷ ಸಂಸದ ಗೋವಿಂದ ಕಾರಜೋಳ ಅವರು ಸಲ್ಲಿಸಿದರು.