ಇತ್ತೀಚಿನ ವೈರಲ್ ವೀಡಿಯೊದಲ್ಲಿ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್, ಫಿಟ್‌ನೆಸ್ ತರಬೇತುದಾರ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆ ಮುದ್ದಾದ ಒಡನಾಟವನ್ನು ಎಂಜಾಯ್ ಮಾಡಿದ್ದಾರೆ. ದೀಪಾವಳಿ ಆಚರಣೆಗೆ ಹೋಗುವ ಮೊದಲು ನತಾಶಾಳಿಗೆ ಕಪ್ಪು ಸೀರೆಯನ್ನು ಉಡಲು ಅಲೆಕ್ಸ್ ಸಹಾಯ ಮಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅಲೆಕ್ಸ್ ಪೋಸ್ಟ್ ಮಾಡಿದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.