ಕೊಪ್ಪಳ: ಬಾಣಸಿಗರಂತೆ ವಿದ್ಯಾರ್ಥಿಗಳಿಗೆ ಬೆಣ್ಣೆ ದೋಸೆ ಹಾಕಿದ ಗವಿಮಠ ಶ್ರೀ!

By Kannadaprabha News  |  First Published Nov 8, 2024, 11:02 AM IST

ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಶಾಂತಣ್ಣ ಮುದಗಲ್, ಪುತ್ರ ಉದ್ಯಮಿ ಮಹೇಶ ಮುದಗಲ್ ಪ್ರತಿ ವರ್ಷವೂ ಒಂದು ದಿನ ಒಂದಿಲ್ಲೊಂದು ವಿಶೇಷ ಖಾದ್ಯ ಮಾಡಿಸಿ, ಗವಿಮಠದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉಣಬಡಿಸುತ್ತಾರೆ. ಈ ವರ್ಷ ದಾವಣಗೆರೆಯಿಂದಲೇ ಬಾಣಸಿಗರನ್ನು ಕರೆಯಿಸಿ, ಬೆಣ್ಣೆ ದೋಸೆ ಹಾಗೂ ಇತರ ಖಾದ್ಯಗಳನ್ನು ಹಾಸ್ಟೆಲ್‌ನಲ್ಲಿಯೇ ಸಿದ್ದ ಮಾಡಿಸಿ, ಉಣಬಡಿಸಿದ್ದು, ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. 

ಕೊಪ್ಪಳ(ನ.08):  ಶ್ರೀ ಗವಿಸಿದ್ದೇಶ್ವರ ಹಾಸ್ಟೆಲ್‌ನ ಸಾವಿರಾರು ವಿದ್ಯಾರ್ಥಿಗಳಿಗೆ ದಾವಣಗೆರೆ ಬೆಣ್ಣೆ ದೋಸೆ, ಮೋಹನತಾಲ್ (ಸಿಹಿ ತಿನಿಸು) ವೆಜ್ ಪ್ರೈಡ್ ರೈಸ್ ಹಾಗೂ ಐಸ್‌ ಕ್ರೀಂ ಉಣಬಡಿಸಲಾಯಿತು. 

ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಶಾಂತಣ್ಣ ಮುದಗಲ್, ಪುತ್ರ ಉದ್ಯಮಿ ಮಹೇಶ ಮುದಗಲ್ ಪ್ರತಿ ವರ್ಷವೂ ಒಂದು ದಿನ ಒಂದಿಲ್ಲೊಂದು ವಿಶೇಷ ಖಾದ್ಯ ಮಾಡಿಸಿ, ಗವಿಮಠದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉಣಬಡಿಸುತ್ತಾರೆ. ಈ ವರ್ಷ ದಾವಣಗೆರೆಯಿಂದಲೇ ಬಾಣಸಿಗರನ್ನು ಕರೆಯಿಸಿ, ಬೆಣ್ಣೆ ದೋಸೆ ಹಾಗೂ ಇತರ ಖಾದ್ಯಗಳನ್ನು ಹಾಸ್ಟೆಲ್‌ನಲ್ಲಿಯೇ ಸಿದ್ದ ಮಾಡಿಸಿ, ಉಣಬಡಿಸಿದ್ದು, ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. 

Latest Videos

ಬಡ ಮಕ್ಕಳನ್ನ ಓದಿಸಲು ಗವಿಸಿದ್ಧ ನನ್ನ ಜೋಳಿಗೆಗೆ ಶಕ್ತಿ ಕೊಡಲಿ: ಕಣ್ಣೀರು ಹಾಕಿದ ಗವಿಮಠ ಶ್ರೀ

ದೋಸೆ ಹಾಕಿದ ಶ್ರೀಗಳು: 

ದಾವಣಗೆರೆ ಬೆಣ್ಣೆ ದೋಸೆಯನ್ನು ಖುದ್ದು ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೆಲಹೊತ್ತು ಮಾಡಿದ್ದು ವಿಶೇಷವಾಗಿತ್ತು. ಬಾಣಿಸಿಗರಂತೆಯೇ ಇವರು ಸಹ ದೋಸೆ ಹಾಕಿದರು. 
ನೀವು ಮಾಡಿಸಬಹುದು: 

ಶ್ರೀ ಗವಿಸಿದ್ದೇಶ್ವರ ಉಚಿತ ಪ್ರಸಾದ ಮತ್ತು ವಸತಿ ನಿಲಯದಲ್ಲಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಹೀಗೆ ಹತ್ತಾರು ದಿನಗಳಿಗೊಮ್ಮೆ ಯಾರಾದರೂ ತಮ್ಮ ಮನೆಯಲ್ಲಿ ವಿಶೇಷತೆ ಇದ್ದವರು ಮಕ್ಕಳಿಗೆ ವಿಶೇಷ ಖಾದ್ಯ ಮಾಡಿಸಿ ಉಣಬಡಿಸುತ್ತಾರೆ. ಮಕ್ಕಳ ಜನ್ಮದಿನಾಚರಣೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಅಂದು ನೀವೇ ಎಲ್ಲವನ್ನು ತರಿಸಿಕೊಡಬಹುದು, ಮಾಡಿಸಿಕೊಡಬಹುದು, ಇಲ್ಲವೇ ನೀವೇ ಹೇಳಿದ ಖಾದ್ಯ ಮಾಡುವಂತೆ ಮಠದಲ್ಲಿರುವ ಬಾಣಸಿಗ ರಿಗೆ ಹೇಳಿದರೆ ಮಾಡಿ ಉಣಬಡಿಸುತ್ತಾರೆ. ಇದಕ್ಕಾಗಿ ನೀವು ಮೊದಲೇ ಹಾಸ್ಟೆಲ್‌ ಉಸ್ತುವಾರಿಯೊಂದಿಗೆ ದಿನಾಂಕ ನಿಗದಿ ಮಾಡಿಕೊಳ್ಳಬಹುದಾಗಿದೆ.

click me!